ವಿಶಿಷ್ಟ ಸಮಾಜದ ಮಹಿಳೆಯರ ಮೇಲೆ ಮನೆಯಲ್ಲಿಯೇ ವಕ್ರ ದೃಷ್ಟಿಯಿಡುತ್ತಿರುವುದರಿಂದ ಅವರು ಮನೆಯಲ್ಲೇ ಹಿಜಾಬ ಧರಿಸಲಿ ! – ಭಾಜಪದ ಸಂಸದೆ ಸಾಧ್ವೀ ಪ್ರಜ್ಞಾಸಿಂಹ ಠಾಕೂರ

ಭೋಪಾಲ (ಮಧ್ಯಪ್ರದೇಶ) – ಸಾರ್ವಜನಿಕ ಸ್ಥಳದಲ್ಲಿ ಯಾರೂ ಕೂಡ ಹಿಜಾಬ್ (ಮುಸಲ್ಮಾನ ಮಹಿಳೆಯರು ತಲೆ ಹಾಗೂ ಕುತ್ತಿಗೆಯನ್ನು ಮುಚ್ಚಲು ಬಳಸುವ ವಸ್ತ್ರ) ಧರಿಸುವ ಅಗತ್ಯವಿಲ್ಲ. ಮಹಿಳೆಯರು ಮನೆಯಲ್ಲೇ ಹಿಜಾಬದ ಧರಿಸಲಿ. ಯಾವ ಕುಟುಂಬದಲ್ಲಿ ಅತ್ತೆ, ಚಿಕ್ಕಮ್ಮ ಹಾಗೂ ಮಲ ಸಹೋದರಿಯೊಂದಿಗೆ ವಿವಾಹ ನಡೆಯುತ್ತದೆಯೋ, ಅಲ್ಲಿ ಹಿಜಾಬ ಬಳಸಿರಿ. ವಿಶಿಷ್ಟ ಸಮಾಜದಲ್ಲಿ ಹುಡುಗಿಯರು ಹಾಗೂ ಸಹೋದರಿಯರ ಮೇಲೆ ಮನೆಯಲ್ಲಿಯೇ ವಕ್ರ ದೃಷ್ಟಿಯಿಡಲಾಗುತ್ತದೆ. ಅಲ್ಲಿ ಮಹಿಳೆಯರನ್ನು ಗೌರವಿಸುವುದಿಲ್ಲ. ಆ ಮಹಿಳೆಯರಿಗೆ ತಮ್ಮ ಚಿಕ್ಕಪ್ಪ, ಮಾವ, ಮಾವನ ಮಕ್ಕಳು ಇತ್ಯಾದಿಯವರಿಂದ ಅಪಾಯವಿರುತ್ತದೆ. ಆದ್ದರಿಂದ ಅವರಿಗೆ ಮನೆಯಲ್ಲಿಯೇ ಹಿಜಾಬ ಧರಿಸುವ ಅಗತ್ಯವಿದೆ. ಹಿಜಾಬ ಕೇವಲ ಮದರಸಾ ಯನಕ ಸೀಮಿತವಾಗಿರಿಸಬೇಕು. ವಿದ್ಯಾಲಯ-ಮಹಾವಿದ್ಯಾಲಯಗಳ ನಿಯಮಗಳನ್ನು ಮುರಿಯುವುದನ್ನು ಸಹಿಸಿಕೊಳ್ಳಲಾಗುವುದಿಲ್ಲ, ಎಂದು ಭಾಜಪದ ಇಲ್ಲಿನ ಸಂಸದೆ ಸಾಧ್ವೀ ಪ್ರಜ್ಞಾಸಿಂಹ ಠಾಕೂರರವರು ಹೇಳಿಕೆ ನೀಡಿದರು.

ಸಾಧ್ವೀ ಪ್ರಜ್ಞಾಸಿಂಹ ಠಾಕೂರರವರು ತಮ್ಮ ಮಾತನ್ನು ಮುಂದುವರೆಸುತ್ತಾ, “ನಮ್ಮ ಸನಾತನ ಧರ್ಮದಲ್ಲಿ ನಾರಿಯನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ದೇವಿಯ ಸ್ವರೂಪವೆಂದು ತಿಳಿಯಲಾಗುತ್ತದೆ. ಆದ್ದರಿಂದ ಹಿಂದೂ ಮಹಿಳೆಯರು ಸುರಕ್ಷಿತವಾಗಿರುತ್ತಾರೆ. ನಮಗೆ ಹಿಜಾಬ್‌ನ ಅಗತ್ಯವಿಲ್ಲ. ಹಿಂದೂಗಳು ಸನಾತನೀ ಪರಂಪರೆಯನ್ನು ಪಾಲಿಸುತ್ತಾರೆ. ಹಿಂದೂ ವಿದ್ಯಾರ್ಥಿಗಳು ಗುರುಕುಲದಲ್ಲಿ ಕೇಸರಿ ವಸ್ತ್ರವನ್ನು ತೊಟ್ಟುಕೊಂಡು ಹೋಗುತ್ತಾರೆ; ಆದರೆ ಶಾಲೆ ಹಾಗೂ ಮಹಾವಿದ್ಯಾಲಯಗಳಲ್ಲಿ ಸಮವಸ್ತ್ರವನ್ನೇ ಧರಿಸುತ್ತಾರೆ ಎಂದು ಹೇಳಿದರು.