ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯದ ಆದೇಶದಿಂದ ಶಾಲೆಗಳಲ್ಲಿ ಹಿಜಾಬ್ ಧರಿಸಲು ನಿರಾಕರಿಸಿದ್ದರಿಂದ ಅನೇಕ ಮುಸಲ್ಮಾನ ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿದರು

‘ಶಿಕ್ಷಣಕ್ಕಿಂತಲೂ ಹಿಜಾಬ್ ದೊಡ್ಡದೆಂದು ತಿಳಿಯುವವವರು ಇಸ್ಲಾಮಿ ದೇಶಗಳಲ್ಲಿ ವಾಸಿಸಲು ಏಕೆ ಹೋಗುತ್ತಿಲ್ಲ ?’, ಎಂಬ ಪ್ರಶ್ನೆ ಯಾರಾದರೂ ಕೇಳಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ ? – ಸಂಪಾದಕರು

ಬೆಂಗಳೂರು – ಕರ್ನಾಟಕ ರಾಜ್ಯದ ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಈ ವಿಷಯವಾಗಿ ಮನವಿಗೆ ಎಲ್ಲಿಯವರೆಗೆ ಮಧ್ಯಂತರ ತೀರ್ಪು ಬರುವುದಿಲ್ಲ, ಅಲ್ಲಿಯವರೆಗೆ ಯಾವುದೇ ಧಾರ್ಮಿಕ ಉಡುಪು ಧರಿಸಿ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ, ಎಂಬ ಆದೇಶ ನೀಡಿದೆ. ಈ ಆದೇಶದ ಮಾತ್ರ ಉಲ್ಲಂಘನೆ ನಡೆಸುವ ಪ್ರಯತ್ನ ಮಾಡುತ್ತಿರುವುದು ಕಂಡುಬರುತ್ತಿದೆ. ಕೆಲವು ಶಾಲೆಗಳಲ್ಲಿ ಪರೀಕ್ಷೆಯ ಸಮಯದಲ್ಲಿ ಮುಸಲ್ಮಾನ ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಬಂದಿದ್ದರಿಂದ ಅವರಿಗೆ ಹಿಜಾಬ್ ತೆಗೆಯಲು ಹೇಳಿಯೂ ಅವರು ನಿರಾಕರಿಸಿದರು ಮತ್ತು ಪರೀಕ್ಷೆಯನ್ನು ಬರೆಯದೆ ಹೊರಟು ಹೋಗಿರುವ ಘಟನೆ ನಡೆದಿವೆ.

೧. ಶಿವಮೊಗ್ಗ ನಗರದಲ್ಲಿ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ನಲ್ಲಿ ಅನೇಕ ಮುಸಲ್ಮಾನ್ ವಿದ್ಯಾರ್ಥಿನಿಯರು ೧೦ ನೇ ತರಗತಿಯ ಪ್ರಾಥಮಿಕ ಪರೀಕ್ಷೆಗಳನ್ನು ಬಹಿಷ್ಕರಿಸಿದ್ದಾರೆ. ವಿದ್ಯಾರ್ಥಿನಿ ಹೀನಾ ಕೌಸರ ಈಕೆಯು, ನನಗೆ ಶಾಲೆಯಲ್ಲಿ ಪ್ರವೇಶ ಮಾಡುವ ಮೊದಲು ಹಿಜಾಬ್ ತೆಗೆಯಲು ಹೇಳಿದರು. ಅದನ್ನು ನಾನು ಮಾಡಲು ಸಾಧ್ಯವಿರಲಿಲ್ಲ; ಆದ್ದರಿಂದ ನಾನು ಪರೀಕ್ಷೆ ಬರೆಯದಿರುವುದು ನಿರ್ಣಯ ತೆಗೆದುಕೊಂಡೆ. ಇತರ ಅನೇಕ ವಿದ್ಯಾರ್ಥಿನಿಗಳು ಹೀಗೆ ಮಾಡಿದ್ದಾರೆ ಎಂದು ಹೇಳಿದಳು.

೨. ಉಡುಪಿಯ ಪಾಕಿರನಗರದ ಸರಕಾರಿ ಉರ್ದೂ ಶಾಲೆಯ ವಿದ್ಯಾರ್ಥಿನಿಯ ತಾಯಿ, ಶಾಲೆಯಲ್ಲಿ ಹಿಜಾಬ್ ಧರಿಸಲು ನಿಷೇಧಿಸಿದ್ದರಿಂದ ನಾನು ಆಕೆಯನ್ನು ಶಾಲೆಗೆ ಕಳುಹಿಸುತ್ತಿಲ್ಲ. ಇಲ್ಲಿಯವರೆಗೆ ನಮ್ಮ ಕುಟುಂಬದ ಅನೇಕ ಸದಸ್ಯರು ಹಿಜಾಬ್ ಧರಿಸಿಯೇ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ; ಹೀಗೆ ಅನಿರೀಕ್ಷಿತವಾಗಿ ನಿಯಮಗಳನ್ನು ಏಕೆ ಬದಲಿಸಿದ್ದಾರೆ ? ಎಂದು ಪ್ರಶ್ನೆ ಕೇಳಿದರು.