ಲಂಡನ (ಇಂಗ್ಲಂಡ) – ಟೆನಿಸ ಸ್ಪರ್ಧೆಗಳಲ್ಲಿ ೨೦ ‘ಗ್ರ್ಯಾಂಡ ಸ್ಲ್ಯಾಮ’ ಪ್ರಶಸ್ತಿ ಪಡೆದುಕೊಂಡಿರುವ ಹಾಗೂ ವಿಶ್ವದಲ್ಲಿ ಮೊದಲನೇಯ ಸ್ಥಾನದಲ್ಲಿರುವ ಸರ್ಬಿಯಾದ ವಿಶ್ವವಿಖ್ಯಾತ ಟೆನಿಸ ಆಟಗಾರರಾದ ನೊವಾಕ ಜೊಕೊವಿಚರವರು, ಭವಿಷ್ಯದಲ್ಲಿ ‘ವಿಂಬಲಡನ,’ ಫ್ರಂಚ್ ಓಪನ’ ನಂತಹ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗದೆ ಇದ್ದಾಗ ಹಾಗೂ ಇದರಿಂದ ಅಲ್ಲಿಯ ಪ್ರಶಸ್ತಿ ಸಿಗದೇ ಹೋದರೂ ಕೂಡ ಪರವಾಗಿಲ್ಲ; ಆದರೆ ನಾನು ಕೊರೊನಾ ಲಸಿಕೆಯನ್ನು ತೆಗೆದುಕೊಳ್ಳುವುದಿಲ್ಲ, ನಾನು ಅದರ ಬೆಲೆ ತೆತ್ತಲು ತಯಾರಾಗಿದ್ದೇನೆ. ಅದೇ ಸಮಯದಲ್ಲಿ ಅವರು ‘ನಾನು ಲಸಿಕೆಯ ವಿರುದ್ಧವಿಲ್ಲ; ಆದರೆ ಪ್ರತಿಯೊಬ್ಬರಿಗೂ ಕೂಡ ‘ಲಸಿಕೆ ತೆಗೆದುಕೊಳ್ಳಬೇಕೋ ಅಥವಾ ಬೇಡವೋ’ ಎಂಬುದನ್ನು ಆರಿಸಿಕೊಳ್ಳುವ ಅಧಿಕಾರವಿದೆ. ‘ಬಿಬಿಸಿ’ ವಾರ್ತಾವಾಹಿನಿಯು ತೆಗೆದುಕೊಂಡ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.
ಜೊಕೊವಿಚರವರು ಕೊರೊನಾದ ಲಸಿಕೆ ತೆಗೆದುಕೊಳ್ಳದಿದ್ದರಿಂದ ಆಸ್ಟ್ರೇಲಿಯಾ ಸರಕಾರವು ಅವರಿಗೆ ಕಳೆದ ತಿಂಗಳು ನಡೆದ ‘ಅಸ್ಟ್ರೇಲಿಯನ ಓಪನ’ ನಲ್ಲಿ ಭಾಗವಹಿಸಲು ಬಿಡಲಿಲ್ಲ. ಜೊಕೊವಿಚರವರು ಇತ್ತೀಚೆಗಷ್ಟೇ ಕೊರೊನಾ ಸಾಂಕ್ರಾಮಿಕದಿಂದ ಗುಣಮುಖರಾಗಿದ್ದು ಅವರಿಗೆ ವೈದ್ಯರು ಆಸ್ಟ್ರೇಲಿಯಾದಲ್ಲಿರಲು ಅನುಮತಿ ನೀಡಿದ್ದರು; ಆದರೆ ಇದರಿಂದ ‘ಸಮಾಜಕ್ಕೆ ತಪ್ಪಾದ ಸಂದೇಶ ಹರಡ ಬಹುದು ಹಾಗೂ ಲಸಿಕೆ ವಿರೋಧ ಆಂದೋಲನಕ್ಕೆ ಬೆಂಬಲ ಸಿಗಬಹುದು’, ಎಂಬ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ಸರಕಾರವು ಅವರ ವಿಸಾವನ್ನು ರದ್ದು ಪಡಿಸುತ್ತಾ ಅವರಿಗೆ ದೇಶ ಬಿಡುವಂತೆ ಹೇಳಿತ್ತು.
Novak Djokovic says he’s prepared to skip French Open, Wimbledon over vaccine mandatehttps://t.co/qJjM1cBLpL via @SInow
— SmartNews (@smartnews) February 15, 2022
ಜೊಕೊವಿಚರವರು ತಮ್ಮ ಮಾತನ್ನು ಮುಂದುವರೆಸುತ್ತಾ,
೧. ನನಗೆ, ಕೆಲವು ನಿರ್ಧಾರಿತ ಸ್ಪರ್ಧೆಗಳಲ್ಲಿ ಲಸಿಕೆಯ ಸಂದರ್ಭದಲ್ಲಿನ ಧೋರಣೆಯಲ್ಲಿ ಬದಲಾವಣೆಯಾದರೆ, ನಾನು ಇನ್ನೂ ಅನೇಕ ವರ್ಷಗಳವರೆಗೂ ಟೆನಿಸ ಆಡಬಹುದು. ನಾನು ಇಲ್ಲಿಯವರೆಗೂ ೨೦ ಗ್ರ್ಯಾಂಡ ಸ್ಲಾಮ ಸ್ಪರ್ಧೆಗಳನ್ನು ಗೆದ್ದಿದ್ದೇನೆ. ‘ಅತಿ ಹೆಚ್ಚು ಸ್ಪರ್ಧೆಗಳನ್ನು ಗೆಲ್ಲುವ ಪುರುಷರ ಟೆನಿಸ ಆಟಗಾರನ ವಿಶ್ವ ದಾಖಲೆ ನನ್ನ ಹೆಸರಿನಲ್ಲಿರಲಿ’ ಎಂಬ ಕನಸಿದೆ; ಆದರೆ ನಾನು ಅದರ ಮೇಲೆ ಕೂಡ ಎಳ್ಳು ನೀರು ಬಿಡಲು ಸಿದ್ಧನಿದ್ದೇನೆ ಎಂದು ಹೇಳಿದರು.
೨. ಏಕೆಂದರೆ ನಾನು ಚಿಕ್ಕಂದಿನಿಂದಲೇ ಏನು ತೆಗೆದುಕೊಳ್ಳಬೇಕು ಅಥವಾ ತೆಗೆದುಕೊಳ್ಳಬಾರದು ಎಂದು ನಿರ್ಧರಿಸುವ ಅಧಿಕಾರ ನನ್ನದಾಗಿದೆ. ಇದನ್ನು ನಾನು ಪುರಸ್ಕರಿಸುತ್ತಾ ಬಂದಿದ್ದೇನೆ. ‘ಓರ್ವ ಆಟಗಾರ’ನಾಗಿ ನಾನು ಯಾವಾಗಲೂ ಆಹಾರ, ನಿದ್ರೆ ಇತ್ಯಾದಿಗಳ ಅಭ್ಯಾಸಗಳ ಬಗ್ಗೆ ಸೂಕ್ಷ್ಮದಿಂದ ಗಮನವಿಟ್ಟಿದ್ದೇನೆ.