ಹಿಜಾಬ್‍ನ ಬೇಡಿಕೆಯು ಪಿತೂರಿಯ ಭಾಗವಾಗಿದೆ ಎಂದು ಆರೋಪ
ನವ ದೆಹಲಿ : ಇಸ್ಲಾಂನಲ್ಲಿ ಹಿಜಾಬ್ ಇಲ್ಲ. ಇಸ್ಲಾಂನಲ್ಲಿ ಎಲ್ಲಿಯೂ `ಹಿಜಾಬ್’ ಎಂಬ ಪದವನ್ನು ಮಹಿಳೆಯರ ಸಂದರ್ಭದಲ್ಲಿ ಬಳಸಲಾಗಿಲ್ಲ. ಇಸ್ಲಾಂನ 5 ಪ್ರಮುಖ ಸ್ತಂಭಗಳನ್ನು ಉಲ್ಲೇಖಿಸಲಾಗಿದೆ, ಆದರಲ್ಲಿ ಹಿಜಾಬ್ ಅನ್ನು ಉಲ್ಲೇಖಿಸಲಾಗಿಲ್ಲ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಇವರು `ಝೀ ನ್ಯೂಸ್’ ಈ ವಾರ್ತಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
(ಸೌಜನ್ಯ: India Today)
ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮಂಡಿಸಿದ ಅಂಶಗಳು
1. ಮುಸ್ಲಿಂ ಆಗಿದ್ದರಿಂದ ಹಿಜಾಬ್ ಅಗತ್ಯ ಎಂದು ನಾವು ಒಪ್ಪಿಕೊಂಡರೂ ಅದರಿಂದ ಯಾರಿಗೆ ಹಾನಿಯಾಗಲಿದೆ ? ಇಂದು ಮುಸ್ಲಿಂ ಮಹಿಳೆಯರು ಭಾರತೀಯ ಪೊಲೀಸ್ ಸೇವೆಯಲ್ಲಿ ಅಧಿಕಾರಿಗಳಾಗುತ್ತಿದ್ದಾರೆ, ವಾಯುಸೇನೆಯಲ್ಲಿ ಸೇರುತ್ತಿದ್ದಾರೆ, ಇಂತಹ ಸಮಯದಲ್ಲಿ ಅವರು ಹಿಜಾಬ್ ಧರಿಸಿ ಕೆಲಸ ಮಾಡಲು ಸಾಧ್ಯವಾಗುತ್ತದೆಯೇ ?
2. ಹಿಜಾಬ್‍ನ ಬೇಡಿಕೆಯು ಪಿತೂರಿಯ ಭಾಗವಾಗಿದೆ. ಮುಸ್ಲಿಂ ಮಹಿಳೆಯರ ಶಿಕ್ಷಣವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು; ಏಕೆಂದರೆ ಈಗ ಅವರವರ ಇಚ್ಛೆಗೆ ತಕ್ಕಂತೆ ತ್ರಿವಳಿ ತಲಾಕ ವಿರುದ್ಧ ಕಾನೂನು ಇದೆ. ಈಗ ಅವರು ವಿದ್ಯಾವಂತರಾಗಿದ್ದಾರೆ. ಇದರಿಂದ ಮುಸ್ಲಿಮರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಸ್ಲಿಂ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಬೇಕೆಂದು ಅವರು ಬಯಸುತ್ತಾರೆ.
3. ಸ್ವಾತಂತ್ರ್ಯದ ನಂತರ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‍ನಂತಹ ಸಂಸ್ಥೆ ಆಂಗ್ಲ ಶಿಕ್ಷಣವನ್ನು ವಿರೋಧಿಸುತ್ತಿದ್ದವು, ಮುಸ್ಲಿಂ ಮಹಿಳೆಯರು ತಮ್ಮ ಮನೆಯಿಂದ ಹೊರಬರುವುದನ್ನು ತಡೆಯಲು ಬಲಪ್ರಯೋಗ ಮಾಡಿದ್ದವು; ಆದರೆ ಕಳೆದ 15 ರಿಂದ 20 ವರ್ಷಗಳಲ್ಲಿ ಇವರ ವ್ಯಥೆಯನ್ನು ಕೇಳಲು ಯಾರೂ ತಯಾರಿಲ್ಲ ಎಂದು ಹೇಳಿದರು.