ನವದೆಹಲಿ – ಈಗ ಭಾರತದಲ್ಲಿ ಡಾಕ್ಟರರು ತಮ್ಮ ಸೇವೆಯ ವಿಷಯದಲ್ಲಿ ಶಪಥ ತೆಗೆದುಕೊಳ್ಳುವಾಗ ಮಹರ್ಷಿ ಚರಕರ ಶಪಥವನ್ನು ತೆಗೆದುಕೊಳ್ಳಬೇಕಾಗುವುದು. ಈ ನಿಯಮವು ಬರುವ ಫೆಬ್ರುವರಿ 14 ರಿಂದ ಅನ್ವಯವಾಗಲಿದೆ.
1. ವೈದ್ಯಕೀಯ ಶಿಕ್ಷಣವನ್ನು ಪಡೆಯುವಾಗ ವಿದ್ಯಾರ್ಥಿಗಳಿಗೆ ‘ಹಿಪ್ಪೋಕ್ರೆಟಿಕ’ ಶಪಥವನ್ನು ತೆಗೆದುಕೊಳ್ಳಬೇಕಾಗುತ್ತದೆ. ‘ ಹಿಪ್ಪೊಕ್ರೇಟಸನು ಗ್ರೀಕ್ ವೈದ್ಯನಾಗಿದ್ದನು. ಅವನ ಕಾರ್ಯಕಾಲವು ಕ್ರಿ. ಪೂ. 460 ರಿಂದ 375 ಎಂದು ತಿಳಿಯಲಾಗುತ್ತದೆ. ಇದಕ್ಕೂ ಮೊದಲು ‘ಅನಾರೋಗ್ಯವು ದೇವರ ಅವಕೃಪೆಯಿಂದ ಬರುತ್ತದೆ’ ಎಂದು ತಿಳಿಯಲಾಗುತ್ತಿತ್ತು. ಆದರೆ ಹಿಪ್ಪೊಕ್ರೇಟಸನು ಇದನ್ನು ತೊಡೆದು ಹಾಕಿ `ಅನಾರೋಗ್ಯವು ನೈಸರ್ಗಿಕ ಕಾರಣಗಳಿಂದ ಬರುತ್ತದೆ’, ಎಂಬ ಸಿದ್ಧಾಂತವನ್ನು ಮಂಡಿಸಿದನು. ಅಂದಿನಿಂದ ಅವನನ್ನು ಔಷಧಿಶಾಸ್ತ್ರದ ಜನಕ ಎಂದು ತಿಳಿಯಲಾಗುತ್ತದೆ. ಅವನ ಹೆಸರಿನಲ್ಲಿ ತೆಗೆದುಕೊಳ್ಳಲಾಗುವ ಶಪಥವು `ವೈದ್ಯಕೀಯ ವಿದ್ಯೆಯು ಅತ್ಯಂತ ಪ್ರತಿಷ್ಠೆಯದ್ದಾಗಿದ್ದು ಅದನ್ನು ವಿವೇಕದಿಂದ ಬಳಸುವೆನು. ರೋಗಿಯ ಆರೋಗ್ಯವೇ ನನಗೆ ಮುಖ್ಯವಾಗಿದ್ದು ಅದರ ಗೌಪ್ಯತೆಯನ್ನು ಕಾಯ್ದುಕೊಳ್ಳುವುದು ನನ್ನ ಕರ್ತವ್ಯವಾಗಿದೆ’ ಎಂದು ಇದೆ. ಡಾಕ್ಟರರು ಬಿಳಿ ಕೋಟನ್ನು ಧರಿಸುವ ಮೊದಲು ಪ್ರತಿಯೊಬ್ಬರೂ ಈ ಶಪಥವನ್ನು ತೆಗೆದುಕೊಳ್ಳಬೇಕಾಗುತ್ತದೆ.
#NationalMedicalCommission suggests that the #HippocraticOath be replaced with #CharakShapath during graduation ceremony of doctors in medical colleges starting from February 14 @NMC_IND https://t.co/6LthVghDoB
— Zee News English (@ZeeNewsEnglish) February 12, 2022
2. ರಾಷ್ಟ್ರೀಯ ವೈದ್ಯಕೀಯ ಆಯೋಗವು (ನೆಶನಲ್ ಮೆಡಿಕಲ್ ಕಮೀಶನ್) ಈ ಶಪಥವನ್ನು ರದ್ದುಗೊಳಿಸಿ ಅದರ ಬದಲು ಭಾರತೀಯ ವೈದ್ಯಕೀಯ ಶಾಸ್ತ್ರದಲ್ಲಿನ ಮಹರ್ಷಿ ಚರಕರ ಶಪಥವನ್ನು ತೆಗೆದುಕೊಳ್ಳಬೇಕು ಎಂಬ ಪ್ರಸ್ತಾಪವನ್ನು ಫೆಬ್ರುವರಿ 7 ರಂದು ನಡೆದ ಸಭೆಯಲ್ಲಿ ಸಮ್ಮತಿಸಿದೆ. ಈ ಶಪಥವನ್ನು ಪ್ರಾದೇಶಿಕ ಭಾಷೆಯಲ್ಲಿ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ನೀಡಲಾಗಿದೆ.
3. ಈ ಶಪಥದೊಂದಿಗೆ ಎಮ್. ಬಿ. ಬಿ. ಎಸ್‍ನ ಪಠ್ಯಕ್ರಮದ ಮೊದಲನೇ ವರ್ಷದ ವಿದ್ಯಾರ್ಥಿಗಳನ್ನು 10 ದಿನಗಳ ಯೋಗ ಶಿಬಿರಕ್ಕೆ ಕಳುಹಿಸಲಾಗುವುದು. ಈ ವಿಷಯಕ್ಕೆ ಸಂಬಂಧಿಸಿದ ಆದೇಶವನ್ನು ಸಂಬಂಧಿತ ಎಲ್ಲ ವೈದ್ಯಕೀಯ ಮಹಾವಿದ್ಯಾಲಯಗಳಿಗೆ ನೀಡಲಾಗಿದೆ.
4. ಮಹರ್ಷಿ ಚರಕರ ಶಪಥದಲ್ಲಿ `ರೋಗಿಗೆ ಬಂದಿರುವ ರೋಗದ ಸುಯೋಗ್ಯ ರೋಗನಿರ್ಣಯ ಮಾಡಿ ಅದರ ಮೇಲೆ ಯೋಗ್ಯವಾದ ಉಪಚಾರವಾಗುವಂತೆ ಪ್ರಾಧಾನ್ಯತೆಯಿಂದ ನೋಡುವೆನು, ಹಾಗೆಯೇ ರೋಗಿಯ ಖಾಸಗೀತನವನ್ನು ಗೌರವಿಸಿ ಆತನ ರೋಗದ ಬಗ್ಗೆ ಗೌಪ್ಯವನ್ನು ಪಾಲಿಸುವೆನು’ ಎಂದು ಹೇಳಲಾಗಿದೆ.
`ರಾ. ಸ್ವ. ಸಂಘದ ಇಚ್ಛೆಯಂತೆ ವೈದ್ಯಕೀಯ ಶಿಕ್ಷಣದ ಕೇಸರೀಕರಣ ಮಾಡುವ ಪ್ರಯತ್ನವಾಗಿದೆ ! ? ಕಾಂಗ್ರೆಸ್
ಸಿಕ್ಕಸಿಕ್ಕಲ್ಲಿ ಕೇಸರಿಯೇ ಕಾಣಿಸುವ ಕಾಂಗ್ರೆಸ್ಸಿಗೆ ಯಾವಾಗಲಾದರೂ ಭಾರತದ ಸ್ವಾಭಿಮಾನ ಮತ್ತು ಪರಂಪರೆಯನ್ನು ಗೌರವಿಸಬೇಕು ಎಂದು ಏಕೆ ಅನಿಸುವುದಿಲ್ಲ ? ಮಹರ್ಷಿ ಚರಕರ ಬಗ್ಗೆ ಕಾಂಗ್ರೆಸ್ಸಿಗೆ ಏಕೆ ದ್ವೇಷವೆನಿಸುತ್ತದೆ ? – ಸಂಪಾದಕರು
ವೈದ್ಯಕೀಯ ವಿದ್ಯಾರ್ಥಿಗಳು ತೆಗೆದುಕೊಂಡ `ಹಿಪ್ಪೋಕ್ರೆಟಿಕ’ ಶಪಥದ ಜಾಗದಲ್ಲಿ `ಚರಕ ಶಪಥ’ವನ್ನು ತೆಗೆದುಕೊಳ್ಳುವ ರಾಷ್ಟ್ರೀಯ ವೈದ್ಯಕೀಯ ಆಯೋಗದ ಪ್ರಸ್ತಾಪವು ಸಂಘದ ಇಚ್ಛೆಯನುಸಾರ ನಡೆಯುತ್ತಿರುವ ವೈದ್ಯಕೀಯ ಶಿಕ್ಷಣದ ಕೇಸರೀಕರಣದ ಪ್ರಯತ್ನವಾಗಿದೆ. ಹಿಪ್ಪೋಕ್ರೆಟಿಕ ಶಪಥವು ಸಾರ್ವತ್ರಿಕ ನೈತಿಕತೆ ಮತ್ತು ಮೌಲ್ಯಗಳನ್ನು ಪ್ರತಿನಿಧಿಸುತ್ತದೆ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ಸಿನ ಕೇರಳದ ಶಾಖೆಯು ಟ್ವೀಟ್ ಮಾಡಿದೆ.
‘ಹಿಪ್ಪೋಕ್ರೆಟಿಕ’ನ್ನು ಬದಲಾಯಿಸದೇ ಚರಕ ಶಪಥವನ್ನೂ ಜಾರಿಗೊಳಿಸಿ !’ ? ಕಾಂಗ್ರೆಸ್ಸಿನ ಸಂಸದ ಶಶಿ ಥರೂರ
ಪಾಶ್ಚಾತ್ಯರನ್ನು ತಬ್ಬಿಕೊಂಡು ಕುಳಿತುಕೊಳ್ಳುವುದು ಕಾಂಗ್ರೆಸ್ಸಿನ ಹಳೆಯ ಚಾಳಿಯಾಗಿದೆ. ಭಾರತದಲ್ಲಿ ಇಂತಹ ಕಾಂಗ್ರೆಸ್ಸಿಗೆ ಏನು ಕೆಲಸ ? ಅದು ಪಾಶ್ಚಾತ್ಯ ರಾಷ್ಟ್ರಗಳಿಗೇ ಹೋಗಬೇಕು ! ಸಂಪಾದಕರು
ಅನೇಕ ಡಾಕ್ಟರರು ಚಿಂತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ನಾನು ಸಂಪೂರ್ಣ ಭಾರತೀಯ ಶಿಕ್ಷಣದಲ್ಲಿ ಭಾರತೀಯ ಘಟಕಗಳನ್ನು ಪರಿಚಯಿಸುವ ಪಕ್ಷದಲ್ಲಿದ್ದೇನೆ; ಆದರೆ ಸಾರ್ವತ್ರಿಕ ಮೌಲ್ಯಗಳು ಹಾಗೂ ಗುಣಮಟ್ಟವನ್ನು ಕಡೆಗಣಿಸಿ ಅಲ್ಲ. ಜಗತ್ತಿನಾದ್ಯಂತ ಇರುವ ಡಾಕ್ಟರರು ತೆಗೆದುಕೊಂಡಿರುವ `ಹಿಪ್ಪೋಕ್ರೆಟಿಕ’ ಶಪಥವನ್ನು ಬದಲಾಯಿಸುವ ಬದಲು ಚರಕ ಶಪಥವನ್ನೂ ಜ್ಯಾರಿಗೊಳಿಸಬಹುದಲ್ಲವೇ ? ಎಂಬ ಪ್ರಶ್ನೆಯನ್ನು ಕಾಂಗ್ರೆಸ್ಸಿನ ಸಂಸದರಾದ ಶಶಿ ಥರೂರರವರು ಟ್ವೀಟ್ ಮಾಡಿ ಕೇಳಿದ್ದಾರೆ.