ತೀರ್ಪು ಬರೋವರೆಗೂ ಧಾರ್ಮಿಕ ವೇಷಭೂಷಣ ಮೇಲೆ ನಿಷೇಧ ! – ಕರ್ನಾಟಕ ಉಚ್ಚ ನ್ಯಾಯಾಲಯ

ಕರ್ನಾಟಕದ ಮುಸಲ್ಮಾನ ಹೆಣ್ಣುಮಕ್ಕಳು ಮಹಾವಿದ್ಯಾಲಯಕ್ಕೆ ಹಿಜಾಬ್ ಧರಿಸಿ ಬರಲು ಅನುಮತಿ ಕೇಳಿದ ಪ್ರಕರಣ

ಬೆಂಗಳೂರು – ಅರ್ಜಿಯ ವಿಚಾರಣೆಯ ಮೇಲೆ ಅಂತಿಮತೀರ್ಪು ಬರೋವರೆಗೂ ಕರ್ನಾಟಕದ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಧಾರ್ಮಿಕ ಉಡುಗೆ ಧರಿಸಿ ಬರುವುದು ನಿಷೇಧಿಸಬೇಕು, ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ 3 ನ್ಯಾಯಾಧೀಶರ ದೊಡ್ಡ ನ್ಯಾಯಪೀಠ ಆದೇಶ ನೀಡಿದೆ. ಕರ್ನಾಟಕದ ಮಹಾವಿದ್ಯಾಲಯಗಳಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ (ಮುಸಲ್ಮಾನ ಮಹಿಳೆಯರು ತಲೆಯ ಮತ್ತು ಕತ್ತನ್ನು ಮುಚ್ಚಲು ಉಪಯೋಗಿಸುವ ವಸ್ತ್ರ ) ಧರಿಸಿ ಬರುವ ಅನುಮತಿ ಕೋರಿ ಸಲ್ಲಿಸಿದ ಅರ್ಜಿಯ ಬಗ್ಗೆ ಆದೇಶ ನೀಡಲಾಗಿದೆ. `ತೀರ್ಪು ಬರೋವರೆಗೂ ಮಹಾವಿದ್ಯಾಲಯ ನಡೆಸಬಹುದು’, ಹೀಗೂ ನ್ಯಾಯಾಲಯದ ಆದೇಶದಲ್ಲಿ ಹೇಳಲಾಗಿದೆ. ಈ ಪ್ರಕರಣದಲ್ಲಿ ಮುಂದಿನ ವಿಚಾರಣೆ ಫೆಬ್ರುವರಿ 14 ಕ್ಕೆ ನಡೆಸಲಾಗುವುದು.

ಕರ್ನಾಟಕ ಸರಕಾರವು ರಾಜ್ಯದ `ಕರ್ನಾಟಕ ಶಿಕ್ಷಣ ಕಾಯಿದೆ 1983 ರ ಕಲಮ 133 ಅನುಸಾರ ಎಲ್ಲಾ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಸಮವಸ್ತ್ರ ಧರಿಸುವುದು ಅನಿವಾರ್ಯ ಮಾಡಲಾಗಿತ್ತು. ಇದಕ್ಕೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ.