‘ಶಾಲೆಗಳಲ್ಲಿ ಹಿಜಾಬ್‌ಗಾಗಿ ಏಕೆ ಒತ್ತಾಯ ?’ ಈ ಕುರಿತು ‘ಆನ್‌ಲೈನ್’ ವಿಶೇಷ ಸಂವಾದ
ಪ್ರಸ್ತುತ ಚರ್ಚೆಯಲ್ಲಿರುವ ‘ಹಿಜಾಬ್’ ಪ್ರಕರಣದ ಹಿಂದೆ ಭಯೋತ್ಪಾದನೆಯ ಹಿನ್ನೆಲೆಯಿರುವ ವಿವಿಧ ದೇಶದ್ರೋಹಿ ಮುಸಲ್ಮಾನ ಸಂಘಟನೆಗಳು, ಪಕ್ಷಗಳು ಮತ್ತು ಕಮ್ಯುನಿಸ್ಟರು ಇದ್ದಾರೆ. ಮಹಾರಾಷ್ಟ್ರದಲ್ಲಿ ಮುಸಲ್ಮಾನ ಪಕ್ಷಗಳು ಮತ್ತು ಸಂಘಟನೆಗಳು ‘ಪಹಿಲೆ ಹಿಜಾಬ್-ಫಿರ್ ಕಿತಾಬ್’ ಪೋಸ್ಟರ್‌ಗಳನ್ನು ಹಾಕಿದ್ದು, ಇದರಿಂದ ಅವರಿಗೆ ಮೊದಲು ಇಸ್ಲಾಂ, ನಂತರ ಶಿಕ್ಷಣ ಬೇಕಾಗಿದೆ, ಎಂದು ಸ್ಪಷ್ಟವಾಗುತ್ತಿದೆ. ‘ಹಿಜಾಬ್’ ನೆಪದಲ್ಲಿ ಎಲ್ಲೆಡೆ ‘ಇಸ್ಲಾಮೀಕರಣ’ದ ಪ್ರಯತ್ನವನ್ನು ನಿಲ್ಲಿಸಲು ಹಿಂದೂಗಳು ಮುಂದಾಗಬೇಕು. ಇಂದು ಮುಸ್ಲಿಂ ಸಂಘಟನೆಗಳು ಮುಸ್ಲಿಂ ಹುಡುಗಿಯರಿಗೆ ಹಿಜಾಬ್ ಧರಿಸಲು ಹೇಳಿ ಮುಂದೊಂದು ದಿನ ಬುರ್ಖಾ ಧರಿಸಲು ಹೇಳುವವು. ನಂತರ ಶಾಲೆಗಳಲ್ಲಿ ನಮಾಜುಪಠಣ ಮತ್ತು ಅದಕ್ಕಾಗಿ ಮಸೀದಿಗೆ ಬೇಡಿಕೆ ಇಡುತ್ತಾರೆ. ಶಾಲೆಗಳನ್ನು ಇಸ್ಲಾಮೀಕರಣಗೊಳಿಸುವ ಈ ಅಪಾಯಕಾರಿ ಸಂಚನ್ನು ವಿಫಲಗೊಳಿಸಬೇಕು ಮತ್ತು ಎಲ್ಲಾ ಶಾಲೆಗಳಲ್ಲಿ ಸಮವಸ್ತ್ರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ-ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಶಾಲೆಗಳಲ್ಲಿ ಹಿಜಾಬ್‌ಗಾಗಿ ಏಕೆ ಒತ್ತಾಯ ?’ ಎಂಬ ‘ಆನ್‌ಲೈನ್’ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.
ಕರ್ನಾಟಕದ ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಉದ್ಯಮಿ ಶ್ರೀ. ಪ್ರಶಾಂತ ಸಂಬರಗಿ ಇವರು ಮಾತನಾಡುತ್ತಾ, ಹಿಜಾಬ್ ವಿಚಾರವು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ ಪೂರ್ವಯೋಜಿತ ಅಂತರರಾಷ್ಟ್ರೀಯ ಸಂಚಾಗಿದೆ. ರೈತರ ತಥಾಕಥಿತ ಆಂದೋಲನ, ಪ್ರಶಸ್ತಿ ಹಿಂತಿರುಗಿಸುವಿಕೆಯಂತೆಯೆ ಪ್ರಸ್ತುತ ‘ಹಿಜಾಬ್’ನ ಬಗ್ಗೆ ಟ್ವಿಟರ್‌ನಲ್ಲಿ ಲಕ್ಷಗಟ್ಟಲೆ ಟ್ವೀಟ್ಸ್ (ಖಿತಿeeಣs) ಮಾಡಿ ಅದರಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ, ಪರಿಸರವಾದಿ ಗ್ರೇಟಾ ಥನ್‌ಬರ್ಗ್ ನಂತಹವರು ಸಮವಸ್ತ್ರ ಹಾಗೂ ಸಮಾನತೆಯ ಅರ್ಥ ತಿಳಿಯದಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಪಾಲ್ಗೊಳ್ಳುವುದು. ಇವೆಲ್ಲದರಿಂದ ಇದೊಂದು ‘ಅಂತಾರಾಷ್ಟ್ರೀಯ ಅಜೆಂಡಾ’ ಎಂಬುದು ಸ್ಪಷ್ಟವಾಗಿದೆ. ಜಗತ್ತಿನಾದ್ಯಂತ ಅನೇಕ ಇಸ್ಲಾಮಿಕ್ ದೇಶಗಳಲ್ಲಿ ಶಾಲೆಗಳು, ಮಹಾವಿದ್ಯಾಲಯಗಳು ಮತ್ತು ಸರಕಾರಿ ಸಂಸ್ಥೆಗಳಲ್ಲಿ ಹಿಜಾಬ್ ಮತ್ತು ಬುರ್ಖಾಗಳನ್ನು ನಿಷೇಧಿಸಲಾಗಿದೆ; ಆದರೆ ಭಾರತದಲ್ಲಿ ಹಿಜಾಬ್‌ನ ಬಗ್ಗೆ ಏಕೆ ಬೇಡಿಕೆ ಮಾಡಲಾಗುತ್ತದೆ ? ಎಂದು ಪ್ರಶ್ನಿಸಿದರು.
ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ವಿನಿತಾ ರಾಘವ್ ಇವರು ಮಾತನಾಡುತ್ತಾ, ಹಿಜಾಬ್‌ನ ವಿಷಯ ಈಗ ನ್ಯಾಯಾಲಯದ ತನಕ ತಲುಪಿದೆ. ಹೀಗಿದ್ದರೂ ನ್ಯಾಯಾಲಯದ ತೀರ್ಪಿಗೆ ಕಾಯದೆ ಮುಸ್ಲಿಮರು ಆಂದೋಲನ ನಡೆಸುತ್ತಿದ್ದಾರೆ. ಇದು ನ್ಯಾಯಾಲಯ ಸೇರಿದಂತೆ ಎಲ್ಲರ ಮೇಲೂ ಒತ್ತಡ ಹೇರುವ ಪ್ರಯತ್ನವಾಗಿದೆ ಎಂದು ಹೇಳಿದರು. ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ಮಾತನಾಡುತ್ತಾ, ಕರ್ನಾಟಕದಲ್ಲಿ ಶಾಲೆಯಲ್ಲಿ ಸಮವಸ್ತ್ರ ಹಾಕಿಕೊಳ್ಳದೇ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಹಾಕುವುದನ್ನು ಆರಂಭಿಸಿದ ನಂತರ ಹಿಂದೂ ಹೆಣ್ಣುಮಕ್ಕಳು ಅದನ್ನು ಕಾನೂನು ರೀತಿಯಲ್ಲಿ ವಿರೋಧಿಸಿದರು. ಆ ಬಳಿಕ ಹಿಂದೂ ಹೆಣ್ಣುಮಕ್ಕಳ ಮೇಲೆ ಕಲ್ಲು ತೂರಾಟದ ಘಟನೆಗಳು ನಡೆದಿವೆ. ಕೆಲವು ಹಿಂದೂ ಸಂಘಟನೆಗಳನ್ನು ಹೊರತುಪಡಿಸಿ, ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲರೂ ಈ ಘಟನೆಯ ಬಗ್ಗೆ ಮೌನವಾಗಿದ್ದಾರೆ. ಇಂತಹ ಘಟನೆಗಳಿಂದ ಭಾರತವನ್ನು ಇಸ್ಲಾಮೀಕರಣಗೊಳಿಸುವ ಬಯಲಾಗುತ್ತಿರುವ ಸಂಚನ್ನು ವಿಫಲಗೊಳಿಸಬೇಕು ಎಂದು ಹೇಳಿದರು.