‘ಹಿಜಾಬಿನ ಮೇಲಿನ ನಿರ್ಬಂಧ ಎಂದರೆ ಭಾರತದಲ್ಲಿನ ಮುಸಲ್ಮಾನರ ದಮನದ ಸಂಚಿವ ಒಂದು ಭಾಗ !’(ಅಂತೆ)

ಪಾಕಿಸ್ತಾನದ ವಿದೇಶಾಂಗಸಚಿವ ಶಾಹ ಮಹಮೂದ ಕುರೇಶಿಯವರ ವಿಷಕಾರಿ ಹೇಳಿಕೆ !

ಭಾರತದಲ್ಲಿ ಕೇವಲ ಮಹಾವಿದ್ಯಾಲಯಗಳಲ್ಲಿ ನಿಯಮಕ್ಕಸಾರ ಹಿಜಾಬ್ ನಿರ್ಬಂಧಿಸಿದ್ದರಿಂದ ಕೋಲಾಹಲವೆಬ್ಬಿಸುವ ಪಾಕಿಸ್ತಾನದ ವಿದೇಶಾಂಗ ಸಚಿವರು ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಧಾರ್ಮಿಕ ಅಧಿಕಾರವನ್ನು ಎಷ್ಟು ನೀಡಲಾಗಿದೆ, ಎಂಬುದನ್ನೂ ಹೇಳಬೇಕು !

ಒಂದೆಡೆ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ಮಾಡುವುದು, ಅವರ ನರಮೇಧ ನಡೆಸುವುದು ಮತ್ತು ಇನ್ನೊಂದೆಡೆ ಜಾತ್ಯತೀತ ಭಾರತದ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದು, ಇದು ಪಾಕಿಸ್ತಾನದ ದ್ವಿಮುಖ ನೀತಿಯಾಗಿದೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತದಲ್ಲಿ ಮುಸಲ್ಮಾನ ಹುಡುಗಿಯರನ್ನು ಶಿಕ್ಷಣದಿಂದ ವಂಚಿಸುವುದು ಮಾನವಾಧಿಕಾರದ ಉಲ್ಲಂಘನೆಯಾಗಿದೆ. ಯಾರನ್ನೂ ಈ ರೀತಿಯಲ್ಲಿ ಮೂಲಭೂತ ಅಧಿಕಾರಗಳಿಂದ ವಿಮುಖಗೊಳಿಸುವುದು ಮತ್ತು ಅವರಿಗೆ ಹಿಜಾಬಿನ ಹೆಸರಿನಲ್ಲಿ ತೊಂದರೆ ಕೊಡುವುದು ಅವರ ದಮನವೇ ಆಗಿದೆ. ಇದು ಮುಸಲ್ಮಾನರನ್ನು ದಮನಿಸುವ ಭಾರತ ಸರಕಾರದ ಸಂಚಿನ ಒಂದು ಭಾಗವಾಗಿದೆ ಎಂಬುದನ್ನು ಜಗತ್ತು ಗಮನಿಸಬೇಕಿದೆ, ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ ಮಹಮೂದ ಕುರೇಶಿಯವರು ಕರ್ನಾಟಕದಲ್ಲಿನ ಹಿಜಾಬ್ ಪ್ರಕರಣದಲ್ಲಿ ಟ್ವೀಟ್ ಮಾಡಿ ವಿಷಕಾರಿದ್ದಾರೆ.

`ನಾಗರಿಕರಿಗೆ ಸ್ವತಂತ್ರವಾಗಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ನೀಡಬೇಕು !’ (ಅಂತೆ) – ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರಣ ಮಂತ್ರಿ ಫವಾದ ಚೌಧರಿ

ಪಾಕಿಸ್ತಾನದಲ್ಲಿ ಇಂತಹ ಸ್ವಾತಂತ್ರ್ಯವಿದೆಯೇ ? ಅನೇಕ ಮುಸಲ್ಮಾನ ಹುಡುಗಿಯರು ಮತ್ತು ಯುವತಿಯರಿಗೆ ಹಿಜಾಬ್ ಹಾಗೂ ಬುರ್ಖಾ ಬೇಡ, ಆದರೂ ಅವರ ಮೇಲೆ ಬಲವಂತ ಮಾಡಲಾಗುತ್ತದೆ. ಈ ಬಗ್ಗೆ ಫವಾದ ಚೌಧರಿಯವರು ಏಕೆ ಬಾಯಿ ಬಿಡುವುದಿಲ್ಲ ?

ಈ ವಿಷಯದಲ್ಲಿ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರಣ ಮಂತ್ರಿಗಳೂ ಟ್ವೀಟ್ ಮಾಡುತ್ತಾ ‘ಮೋದಿಯವರ ಭಾರತದಲ್ಲಿ ನಡೆಯುತ್ತಿರುವುದು ಭಯಾನಕವಾಗಿದೆ. ಭಾರತೀಯ ಸಮಾಜವು ಅಸ್ಥಿರ ನೇತೃತ್ವದಲ್ಲಿ ಅಪಾರ ವೇಗದಿಂದ ಪತನದೆಡೆಗೆ ಹೋಗುತ್ತಿದೆ. ಹಿಜಾಬ್ ಧರಿಸುವುದು ಅಥವಾ ಇತರ ಉಡುಪುಗಳನ್ನು ಧರಿಸುವುದು ವೈಯಕ್ತಿಕ ಅಸಕ್ತಿಯಾಗಿದೆ. ನಾಗರಿಕರಿಗೆ ಸ್ವತಂತ್ರವಾಗಿ ಇದರ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ನೀಡಬೇಕು’ ಎಂದು ಹೇಳಿದ್ದಾರೆ.