ಸರಕಾರಿ ಮದರಸಾಗಳನ್ನು ಸಾಮಾನ್ಯ ಶಾಲೆಗಳಲ್ಲಿ ಪರಿವರ್ತಿಸುವ ಅಸ್ಸಾಂ ರಾಜ್ಯ ಸರಕಾರದ ನಿರ್ಣಯಕ್ಕೆ ಸಮರ್ಥನೆ
* ಈ ನಿರ್ಣಯವನ್ನು ಈಗ ದೇಶದಲ್ಲಿನ ಪ್ರತಿಯೊಂದು ರಾಜ್ಯದಲ್ಲಿನ ಮದರಸಾಗಳಿಗೆ ಅನ್ವಯಿಸುವುದು ಆವಶ್ಯಕವಾಗಿದೆ. ದೇಶದಲ್ಲಿನ ಪ್ರತಿಯೊಂದು ರಾಜ್ಯ ಹಾಗೆಯೇ ಕೇಂದ್ರ ಸರಕಾರವು ಮದರಸಾಗಳಿಗೆ ಕೋಟ್ಯಂತರ ರೂಪಾಯಿಗಳ ಅನುದಾನವನ್ನು ನೀಡುತ್ತದೆ, ಈಗ ಅದನ್ನೂ ನಿಲ್ಲಿಸಬೇಕು !- ಸಂಪಾದಕರು
ಗೌಹಾತಿ (ಅಸ್ಸಾಂ) – ಸರಕಾರಿ ಮದರಸಾಗಳು ಧಾರ್ಮಿಕ ಶಿಕ್ಷಣವನ್ನು ನೀಡಲಾರವು ಎಂಬ ತೀರ್ಪನ್ನು ಗೌಹಾತಿ ಉಚ್ಚ ನ್ಯಾಯಾಲಯವು ನೀಡಿದೆ. ರಾಜ್ಯ ಸರಕಾರವು ರಾಜ್ಯದಲ್ಲಿನ ಮದರಸಾಗಳನ್ನು ಸಾಮಾನ್ಯ ಶಾಲೆಗಳಲ್ಲಿ ಪರಿವರ್ತಿಸುವ ನಿರ್ಣಯದ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ದಾಖಲಿಸಲಾದ ಅರ್ಜಿಗೆ ಈ ತೀರ್ಪನ್ನು ನೀಡಲಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾರವರು ೨೦೨೦ರಲ್ಲಿ ಶಿಕ್ಷಣಮಂತ್ರಿಗಳಾಗಿದ್ದಾಗ ಈ ಕಾನೂನು ನಿರ್ಮಿಸಿ ರಾಜ್ಯದಲ್ಲಿನ ಮದರಸಾಗಳನ್ನು ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸಿದ್ದರು. ಅವರು ‘ಮದರಸಾ ಶಿಕ್ಷಣ ಕಾಯಿದೆ ೧೯೯೫’ಯನ್ನು ರದ್ದುಗೊಳಿಸಿದ್ದರು.
‘Govt funded schools can’t impart religious education’: Gauhati High Court upholds Assam govt’s decision to convert state-run madrassas to regular schoolshttps://t.co/KaNBsuzyU7
— OpIndia.com (@OpIndia_com) February 5, 2022
ನ್ಯಾಯಾಲಯವು ‘ಆಡಳಿತ ಮಂಡಳಿ ಹಾಗೂ ಸರಕಾರದಿಂದ ನಡೆಸಲಾದ ಬದಲಾವಣೆಗಳು ಖಾಸಗಿ ಅಥವಾ ಸಾರ್ವಜನಿಕ ಮದರಸಾಗಳಿಗಾಗಿ ಅಲ್ಲ, ಕೇವಲ ಸರಕಾರದಿಂದ ಅನುದಾನ ಪಡೆದ ಮದರಸಾಗಳಿಗಾಗಿ ಇದೆ. ಇದು ಸಂವಿಧಾನದ ಕಲಮ ೨೮(೧)ರ ಅನುಸಾರ ಅನುಕೂಲವಾಗಿಲ್ಲ. ಸರಕಾರಿ ಮದರಸಾಗಳಲ್ಲಿನ ಶಿಕ್ಷಕರ ನೌಕರಿ ಹೋಗುವುದಿಲ್ಲ. ಆವಶ್ಯಕತೆಯ ಅನುಸಾರ ಅವರಿಗೆ ಇತರ ವಿಷಯಗಳನ್ನು ಕಲಿಸುವ ತರಬೇತಿ ನೀಡಲಾಗುವುದು’ ಎಂದು ಹೇಳಿದೆ.