ಅಮೇರಿಕಾದ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ ಸ್ಟೇಟನ ನಾಯಕ ಅಲ್-ಹಾಶಿಮೀ ಅಲ್-ಕುರೇಶೀ ಹತ

ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ಮಾಡುವ ಜಿಹಾದಿ ಭಯೋತ್ಪಾದಕ ಸಂಘಟನೆಯ ಪ್ರಮುಖರನ್ನು ಭಾರತವು ಪಾಕಿಸ್ತಾನದೊಳಗೆ ನುಗ್ಗಿ ಏಕೆ ಕೊಲ್ಲುವುದಿಲ್ಲ ?, ಎಂಬ ಪ್ರಶ್ನೆಯು ಈ ರೀತಿಯ ಘಟನೆಯಿಂದ ಜನತೆಯ ಮನಸ್ಸಿನಲ್ಲಿ ಬರುತ್ತದೆ, ಈ ಬಗ್ಗೆ ಸರಕಾರವು ವಿಚಾರ ಮಾಡಬೇಕು !

ಇಸ್ಲಾಮಿಕ ಸ್ಟೇಟ ಈ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆಯ ನಾಯಕ ಭಯೋತ್ಪಾದಕ ಅಬೂ ಇಬ್ರಾಹಿಮ ಅಲ್- ಹಾಶಿಮೀ ಅಲ್- ಕುರೇಶೀ ಮತ್ತು ಎಡಭಾಗದಲ್ಲಿ ಅಮೇರಿಕಾದ ಅಧ್ಯಕ್ಷ ಜೋ ಬಾಯಡೆನ್

ವಾಶಿಂಗ್ಟನ (ಅಮೇರಿಕಾ) – ಇಸ್ಲಾಮಿಕ ಸ್ಟೇಟ ಈ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆಯ ನಾಯಕ ಭಯೋತ್ಪಾದಕ ಅಬೂ ಇಬ್ರಾಹಿಮ ಅಲ್- ಹಾಶಿಮೀ ಅಲ್- ಕುರೇಶೀಯನ್ನು ಸಿರಿಯಾದಲ್ಲಿ ಕೊಂದಿರುವ ಮಾಹಿತಿಯನ್ನು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೊ ಬಾಯಡೆನರವರು ಟ್ವಿಟ್ ಮಾಡಿ ಮಾಡಿದರು. ಈ ಕಾರ್ಯಾಚರಣೆಯಲ್ಲಿ ೬ ಮಕ್ಕಳು ಸೇರಿದಂತೆ ೧೩ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ತುರ್ಕಸ್ತಾನದ ಗಡಿಯ ಬಳಿ ಎಟಮೆಹ ನಗರದಲ್ಲಿ ಅಮೇರಿಕಾ ಸೈನ್ಯವು ಈ ಕಾರ್ಯಾಚರಣೆ ನಡೆಸಿತು. ಸೈನಿಕರು ನಗರದಲ್ಲಿನ ಒಂದು ಕಟ್ಟಡವನ್ನು ಗುರಿ ಮಾಡಿದರು. ಅಲ್ಲಿ ಯುದ್ಧದಿಂದ ಸಾವಿರಾರು ನಾಗರಿಕರು ನಿರಾಶ್ರಿತರಾಗಿ ವಾಸಿಸುತ್ತಿದ್ದರು.

ಬಾಯಡೆನರವರು, ಫೆಬ್ರುವರಿ ೩ರ ರಾತ್ರಿಯಂದು ನಮ್ಮ ಸೈನ್ಯವು ಭಯೋತ್ಪಾದಕರನ್ನು ಹಿಡಿಯಲು ತಲುಪಿರುವುದು ಗಮನಕ್ಕೆ ಬಂದ ತಕ್ಷಣ ಅವನು ಆ ಕಟ್ಟಡದಲ್ಲಿಯೇ ತನ್ನನ್ನು ಸ್ಫೋಟಗೊಳಿಸುವ ತೀರ್ಮಾನ ತೆಗೆದುಕೊಂಡನು. ತನ್ನ ಕುಟುಂಬದವರ ಅಥವಾ ಬೇರೆಯವರ ಜೀವದ ಬಗ್ಗೆ ಲೆಕ್ಕಿಸದೆ ಕುರೇಶೀಯು ಆ ಸ್ಫೋಟದ ಸಮಯದಲ್ಲಿ ತನ್ನ ಕುಟುಂಬದಲ್ಲಿನ ಅನೇಕ ಸದಸ್ಯರನ್ನು ಸೇರಿಸಿಕೊಂಡನು.