‘ಪ್ರಾರ್ಥನಾಸ್ಥಳದಲ್ಲಿ ಚಪ್ಪಲಿ ಹಾಕಿ ಪ್ರವೇಶ ಮಾಡುವ ಸಂಘದ ಜನರ ಮೇಲೆ ಕಠಿಣ ಕ್ರಮ ಜರುಗಿಸಬೇಕು’ (ಅಂತೆ) – ಎಮ್.ಐ.ಎಮ್.

  • ಬೆಂಗಳೂರು ನಗರದ ರೇಲ್ವೆ ನಿಲ್ದಾಣದ ವಿಶ್ರಾಂತಿಗೃಹದ ಪ್ರಾರ್ಥನಾ ಸ್ಥಳವನ್ನಾಗಿಸಿದ್ದ ಪ್ರಕರಣ

  • ಕ್ರಮ ಜರುಗಿಸದಿದ್ದರೆ ಸಂಪೂರ್ಣ ಭಾರತದಲ್ಲಿ ಒತ್ತಡದ ವಾತಾವರಣ ನಿರ್ಮಾಣ ಮಾಡುವ ಬೆದರಿಕೆ

  • ‘ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಈ ವೃತ್ತಿಯ ! ಎಮ್.ಐ.ಎಮ್. ! ವಿಶ್ರಾಂತಿಗೃಹ ಅನಧಿಕೃತವಾಗಿ ವಶಕ್ಕೆ ಪಡೆದು ಅದನ್ನು ಪ್ರಾರ್ಥನಾ ಸ್ಥಳವಾಗಿ ರೂಪಾಂತರಗೊಳಿಸುವುದು ಮತ್ತು ಆ ವಿಷಯದಲ್ಲಿ ಧ್ವನಿ ಎತ್ತುವವರ ವಿರುದ್ಧ ಕ್ರಮ ಜರುಗಿಸುವಂತೆ ಕೋರುವುದೆಂದರೆ; ಕಳ್ಳನಿಗೊಂದು ಪಿಳ್ಳೆ ನೆವ ಎನ್ನುವಂತಾಗಿದೆ !
  • ಅನಧಿಕೃತ ಕೃತ್ಯಕ್ಕೆ ಬೆಂಬಲ ನೀಡುವ ಮತ್ತು ಅದಕ್ಕಾಗಿ ಸರಕಾರಕ್ಕೆ ಬೆದರಿಕೆ ಹಾಕುವ ಉದ್ಧಟ ಎಮ್.ಐ.ಎಮ್. ಮೇಲೆ ಭಾಜಪ ಸರಕಾರವು ಕ್ರಮ ಜರುಗಿಸುವುದು ಅಪೇಕ್ಷಿತವಿದೆ !

ಬೆಂಗಳೂರು : ಇಲ್ಲಿಯ ನಗರ ರೇಲ್ವೆ ನಿಲ್ದಾಣದಲ್ಲಿದ್ದ ಪ್ರಾರ್ಥನಾಸ್ಥಳದಲ್ಲಿ ಸಂಘದ ಜನರು ಚಪ್ಪಲಿ ಹಾಕಿಕೊಂಡು ಪ್ರವೇಶಿಸಿದರು. ಇದರಿಂದ ಭಾರತದಲ್ಲಿರುವ ಎಲ್ಲ ಮುಸಲ್ಮಾನ ಬಾಂಧವರ ಭಾವನೆಗೆ ನೋವಾಗಿದೆ. ಇದಕ್ಕೆ ಅವರು ಉತ್ತರಿಸಬೇಕು. ಹಾಗೆಯೇ ಅವರಿಗೆ ಈ ಪ್ರಾರ್ಥನಾಸ್ಥಳದಲ್ಲಿ ಪ್ರವೇಶ ಮಾಡುವುದರಿಂದ ಅಲ್ಲಿಯ ಪೊಲಿಸರು ಮತ್ತು ರೇಲ್ವೆ ಅಧಿಕಾರಿಗಳು ತಡೆಯಲಿಲ್ಲ ಇದು ಅತ್ಯಂತ ವಿಷಾದನೀಯವಾಗಿದೆ. ಒಂದು ವೇಳೆ ಹಿಂದೂ-ಮುಸಲ್ಮಾನರ ಸಹೋದರ ಭಾವನೆ ಸ್ಥಿರವಾಗಿರಬೇಕು ಎಂದು ಸರಕಾರಕ್ಕೆ ಅನಿಸುತ್ತಿದ್ದರೆ, ಗೃಹಸಚಿವರು ಶೀಘ್ರವಾಗಿ ಈ ಕಾರ್ಯಕರ್ತರನ್ನು ಬಂಧಿಸಲು ಆದೇಶಿಸಬೇಕು ಮತ್ತು ಅವರ ಮೇಲೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಹೀಗಾಗದಿದ್ದರೆ, ಸಂಪೂರ್ಣ ಭಾರತದಾದ್ಯಂತ ಒತ್ತಡದ ವಾತಾವರಣ ನಿರ್ಮಾಣವಾಗುವುದು ಮತ್ತು ಅದಕ್ಕೆ ಗೃಹ ಸಚಿವರೇ ಜವಾಬ್ದಾರರಾಗುವರು. ಎಂದು (ಆಲ್ ಇಂಡಿಯಾ ಮಜಲಿಸ್-ಇ- ಇತ್ತೇಹಾದೂಲ ಮುಸ್ಲಿಮ’(ಎಮ್.ಐ.ಎಮ್.) ಎಚ್ಚರಿಕೆ ನೀಡಿದೆ.
ಬೆಂಗಳೂರಿನ ದಕ್ಷಿಣ-ಪಶ್ಚಿಮ ರೇಲ್ವೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೇಲ್ವೆ ನಿಲ್ದಾಣದ ಪ್ಲಾಟ ಫಾರ್ಮ ಸಂ.೫ ರಲ್ಲಿ ಹಮಾಲಿಗಳ ವಿಶ್ರಾಂತಿ ಕಕ್ಷೆಯನ್ನೇ ಪ್ರಾರ್ಥನಾ ಸ್ಥಳವಾನ್ನಾಗಿಸಿದ್ದು ಬಯಲಾಗಿದೆ. ಇದರಿಂದ ಹಿಂದುತ್ವನಿಷ್ಠರು ಅದನ್ನು ಪರಿಶೀಲಿಸಿ ರೇಲ್ವೆ ನಿಲ್ದಾಣದ ಸಿಬ್ಬಂದಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅದಕ್ಕೆ ಎಮ್.ಐ.ಎಮ್. ಆಕ್ಷೇಪಿಸಿದೆ.

(ಸೌಜನ್ಯ : The Ancient Times)