ಆಂಧ್ರಪ್ರದೇಶ ರಾಜ್ಯದಲ್ಲಿ, ಬಾಲಾಜಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ `ಶ್ರೀ ಬಾಲಾಜಿ’ ಮತ್ತು ಶ್ರೀ ಸತ್ಯ ಸಾಯಿಬಾಬಾ ಇವರಿಗೆ ಸಂಬಂಧಿಸಿದಂತೆ `ಶ್ರೀ ಸತ್ಯ ಸಾಯಿ’ ಎಂಬ ಹೆಸರಿನ ಹೊಸ ಜಿಲ್ಲೆಗಳು !

ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶ ರಾಜ್ಯ ಸರಕಾರವು ಅಧಿಸೂಚನೆ ಹೊರಡಿಸಿದ್ದು, ರಾಜ್ಯದಲ್ಲಿನ 13 ಜಿಲ್ಲೆಗಳ ಸಂಖ್ಯೆ ಈಗ 26 ಕ್ಕೆ ಏರಿಸಲಾಗಿದೆ ಎಂದು ಘೋಷಿಸಿದೆ. ಇದರಲ್ಲಿ ಬಾಲಾಜಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ `ಶ್ರೀ ಬಾಲಾಜಿ’ ಹಾಗೂ ಶ್ರೀ ಸತ್ಯ ಸಾಯಿಬಾಬಾ ಇವರಿಗೆ ಸಂಬಂಧಿಸಿದಂತೆ `ಶ್ರೀ ಸತ್ಯ ಸಾಯಿ’ ಎಂಬ ಹೊಸ ಜಿಲ್ಲೆಗಳಿಗೆ ಹೆಸರಿಸಲಾಗಿದೆ.

ಉಳಿದ 11 ಜಿಲ್ಲೆಗಳೆಂದರೆ `ಮಾನ್ಯಂ, ಅಲ್ಲೂರಿ, ಸೀತಾರಾಮ ರಾಜು, ಅನಕಾಪಲ್ಲಿ, ಕಾಕಿನಾಡಾ, ಕೋನಾ ಸೀಮಾ, ಎಲ್ಲುರು, ಎನ್‍ಟಿಆರ್, ಬಾಪಾಟಿಯಾ, ಪಲನಾಡು, ನಂದಯಾಲ, ಅನ್ನಾಮಯ್ಯಾ’ ಎಂದಾಗಿದೆ.

ಆಯಾ ಪ್ರದೇಶಗಳ ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಹಿತದೃಷ್ಟಿಯಿಂದ ಹೊಸ ಜಿಲ್ಲೆಗಳನ್ನು ರಚಿಸಲು ಸರಕಾರ ನಿರ್ಧರಿಸಿದೆ’, ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಸಮೀರ ಶರ್ಮಾ ಇವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.