ಕರ್ಣಾವತಿಯಲ್ಲಿ ಹಿಂದುತ್ವನಿಷ್ಠ ಯುವಕನ ಹತ್ಯೆಯ ಹಿಂದೆ ಇಬ್ಬರು ಮೌಲ್ವಿಗಳ ಕೈವಾಡ !

(ಟಿಪ್ಪಣಿ : ಮೌಲ್ವಿ ಎಂದರೆ ಇಸ್ಲಾಂನ ಧಾರ್ಮಿಕ ನಾಯಕ)

‘ಭಾರತದಲ್ಲಿರುವ ಮುಸ್ಲಿಮರು ಅಸುರಕ್ಷಿತರಾಗಿದ್ದಾರೆ’, ಎಂದು ಕೂಗಾಡುವ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರ ಗುಂಪು ಈ ಬಗ್ಗೆ ಏನಾದರೂ ಹೇಳುವರೇ ?

ಸಾಂಧರ್ಭಿಕ ಚಿತ್ರ

ಕರ್ಣಾವತಿ (ಗುಜರಾತ) – ಇಲ್ಲಿ ಜನವರಿ ೨೫ ರಂದು ನಡೆದ ಹಿಂದುತ್ವನಿಷ್ಠ ಕಿಶನ್ ಬೊಲಿಯಾ ಅವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಮೂವರನ್ನು ಬಂಧಿಸಿದ್ದಾರೆ. ಅದರಲ್ಲಿ ಓರ್ವ ಮೌಲ್ವಿ ಭಾಗಿಯಾಗಿದ್ದಾರೆ. ಈ ಹತ್ಯೆಯ ಹಿಂದೆ ಒಟ್ಟು ಇಬ್ಬರು ಮೌಲ್ವಿಗಳ ಹೆಸರು ಬೆಳಕಿಗೆ ಬಂದಿದೆ. ಮುಂಬಯಿಯ ಮೌಲ್ವಿಯು ಹತ್ಯೆಗೆ ಆದೇಶ ನೀಡಿದ್ದರೆ, ಕರ್ಣಾವತಿ ಮೌಲ್ವಿಯು ಆರೋಪಿಗಳಿಗೆ ಶಸ್ತ್ರಾಸ್ತ್ರ ಒದಗಿಸಿದ್ದರು. ಕರ್ಣಾವತಿಯ ಮೌಲ್ವಿಯನ್ನು ಬಂಧಿಸಲಾಗಿದೆ. ಕಿಶನ್ ಇತ್ತೀಚೆಗೆ ಪ್ರವಾದಿ ಮೊಹಮ್ಮದ್ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಅದಕ್ಕಾಗಿ ಅವರಿಗೆ ಕೊಲೆಯ ಬೆದರಿಕೆ ಹಾಕಿದ್ದರು.

ಗುಜರಾತನ ಗೃಹ ಸಚಿವ ಹರ್ಷ ಸಂಘವಿಯವರು ಕಿಶನ್ ಬೋಲಿಯಾ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘವಿ, ನಾವು ಕಿಶನ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಬಿಡುವುದಿಲ್ಲ. ಕಿಶನ್‌ನನ್ನು ಕೊಲ್ಲಲು ೨೦ ವರ್ಷದ ಇಬ್ಬರು ಆರೋಪಿಗಳನ್ನು ಮೌಲ್ವಿಯು ಪ್ರಚೋದಿಸಿದ್ದರು. ಮೌಲ್ವಿಯ ಕೆಲಸ ಜನರಿಗೆ ಸರಿಯಾದ ದಾರಿ ತೋರಿಸುವುದಾಗಿರುತ್ತದೆ; ಆದರೆ ಅವರು ಹತ್ಯೆಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದರು.