ಅಮೇರಿಕವನ್ನು ಕ್ರೈಸ್ತ ರಾಷ್ಟ್ರವನ್ನಾಗಿಸಲು ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನ !

೨೮ ಗರ್ವನರ್ (ರಾಜ್ಯಗಳ ಮುಖ್ಯಸ್ಥರು) ಬೆಂಬಲ !

‘ಪ್ರಗತಿಪರ’ ಎಂದು ಗುರುತಿಸಲ್ಪಡುವ ಅಮೇರಿಕಾದಲ್ಲಿಯೂ ಬಹುಸಂಖ್ಯಾತರಾಗಿರುವ ಕ್ರೈಸ್ತರಿಗೆ ತಮ್ಮ ದೇಶವನ್ನು ‘ಕ್ರೈಸ್ತ ರಾಷ್ಟ್ರ’ ಆಗಬೇಕು’, ಎಂದು ಅನಿಸುತ್ತಿದ್ದರೆ, ಬಹುಸಂಖ್ಯಾತ ಹಿಂದೂಗಳಿಗೆ ತಮ್ಮ ಭಾರತವನ್ನು ‘ಹಿಂದೂ ರಾಷ್ಟ್ರ’ ಆಗಬೇಕು, ಎಂದು ಅನಿಸಿದರೆ ಅದರಲ್ಲಿ ತಪ್ಪೇನಿದೆ ?

ನವ ದೆಹಲಿ : ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ‘ಕ್ರೈಸ್ತ ರಾಷ್ಟ್ರ’ ಮಾಡಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ ೨೮ ಗವರ್ನರ್.ಗಳ ಬೆಂಬಲ ಸಿಕ್ಕಿದೆ. ಸದ್ಯ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ರಾಜ್ಯಗಳಲ್ಲಿನ ಚರ್ಚ್‌ಗಳಲ್ಲಿ ಭಾನುವಾರದಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಇದರಲ್ಲಿ ಟ್ರಂಪ್ ಅವರನ್ನು ‘ಕ್ರೈಸ್ತ ಅಮೆರಿಕದ ನಾಯಕ’ ಎಂದು ಕರೆಯಲಾಗುತ್ತಿದೆ. ಶ್ವೇತವರ್ಣದ ಈ ಕಾರ್ಯಕ್ರಮದಲ್ಲಿ ಟ್ರಂಪ್ ಅವರನ್ನು ಪ್ರವಾದಿ ಎಂದು ಹೇಳುತ್ತಾ ‘ಕ್ರೈಸ್ತ ಅಮೇರಿಕಾ’ ಅನ್ನು ಸ್ಥಾಪಿಸುವುದು ಗುರಿಯಾಗಿದೆ ಎಂದು ಹೇಳಲಾಗುತ್ತಿದೆ. ಟ್ರಂಪ್‌ಗೆ ಬೆಂಬಲವಾಗಿ ಪ್ರಾರ್ಥನೆಗಳೂ ನಡೆಯುತ್ತಿವೆ.