‘ಬಲವಂತ ಮತಾಂತರದ ಕೇಂದ್ರಗಳಾಗುತ್ತಿರುವ ಕಾನ್ವೆಂಟ್‌ಗಳು !’ ಎಂಬ ವಿಷಯದ ಕುರಿತು ಆನ್‌ಲೈನ್ ವಿಶೇಷ ಸಂವಾದ !
ತಮಿಳುನಾಡಿನ ‘ಲಾವಣ್ಯ’ ಹೆಸರಿನ ಓರ್ವ ರೈತನ ಜಾಣ ಮಗಳು ಕ್ರೈಸ್ತರ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಳು. ಆಕೆಯ ಮೇಲೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಳು. ಕ್ರೈಸ್ತರಿಂದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಮತಾಂತರ ಮಾಡಲು ಹೆಚ್ಚೆಚ್ಚು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕಾನ್ವೆಂಟ್ ಶಾಲೆಗಳಲ್ಲಿ ಹಿಂದೂ ಸಂಸ್ಕೃತಿಯನ್ನು ಪಾಲಿಸಲು ವಿರೋಧಿಸಲಾಗುತ್ತಿದೆ. ಕ್ರೈಸ್ತರು ನಡೆಸುವ ಎಲ್ಲ ಶಾಲೆಗಳು ಮತಾಂತರದ ಕೇಂದ್ರಗಳಾಗುತ್ತಿವೆ. ಅದಕ್ಕೆ ರಾಜಕೀಯ ಬೆಂಬಲವೂ ಸಿಗುತ್ತಿದೆ. ಮದ್ರಾಸ್ ಉಚ್ಚ ನ್ಯಾಯಾಲಯವೂ ಈ ನಿಟ್ಟಿನಲ್ಲಿ ಪ್ರಶ್ನೆಗಳನ್ನು ಎತ್ತಿದೆ, ಎಂದು ‘ಹಿಂದೂ ಮಕ್ಕಲ ಕತ್ಛಿ’ಯ ಅಧ್ಯಕ್ಷ ಶ್ರೀ. ಅರ್ಜುನ ಸಂಪಥ ಇವರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯಿಂದ ‘ಮತಾಂತರದ ಕೇಂದ್ರವಾಗುತ್ತಿರುವ ಕಾನ್ವೆಂಟ ಶಾಲೆಗಳು !’ ಈ ಕುರಿತು ಆಯೋಜಿಸಲಾಗಿದ್ದ ‘ವಿಶೇಷ ಸಂವಾದ’ದಲ್ಲಿ ಮಾತನಾಡುತ್ತಿದ್ದರು.
ಈ ಸಮಯದಲ್ಲಿ ಶ್ರೀ. ಸಂಪಥ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಮತಾಂತರದಿಂದ ಕನ್ಯಾಕುಮಾರಿಯಂತಹ ಜಿಲ್ಲೆಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ರಾಜ್ಯದಲ್ಲಿ ಕ್ರೈಸ್ತಪರ ಸರಕಾರವಿದೆ. ಮುಖ್ಯಮಂತ್ರಿ ಸ್ಟಾಲಿನ್ ಅವರೇ ‘ಈ ಸರಕಾರ ಅಲ್ಪಸಂಖ್ಯಾತರಿಗಾಗಿ ಮಾತ್ರ ಇದೆ’, ಎಂದು ಒಂದು ಸಭೆಯಲ್ಲಿ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಇದರ ಪ್ರಭಾವ ಇಲ್ಲಿನ ಆಡಳಿತದ ಮೇಲೆ ಇದೆ. ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾನೂನನ್ನು ಜಾರಿಗೆ ತರಲಾಗಿದೆ. ತಮಿಳುನಾಡಿನಲ್ಲೂ ನಾವು ಇದೇ ಬೇಡಿಕೆ ಇಟ್ಟಿದ್ದೇವೆ ಎಂದು ಹೇಳಿದರು.
ಈ ವೇಳೆ ಆಂಗ್ಲ ದೈನಿಕ ‘ದಿ ಪಯೋನಿಯರ್’ನ ಹಿರಿಯ ಪತ್ರಕರ್ತರಾದ ಶ್ರೀ. ಕುಮಾರ ಚೆಲ್ಲಪ್ಪನ ಇವರು ಮಾತನಾಡುತ್ತಾ, ‘ಲಾವಣ್ಯ’ ಆತ್ಮಹತ್ಯೆ ಪ್ರಕರಣದ ಬಗ್ಗೆ ಇಲ್ಲಿನ ಯಾವುದೇ ಮಾಧ್ಯಮಗಳಲ್ಲಿ ವರದಿಯಾಗಿಲ್ಲ. ಶಾಲೆಯ ಹೆಸರು, ಹುಡುಗಿಯ ಹೆಸರು ಅಥವಾ ಈ ಘಟನೆಯ ಹಿಂದೆ ಯಾರಿದ್ದಾರೆ, ಅವರ ಹೆಸರನ್ನು ಮಾಧ್ಯಮಗಳು ನೀಡಿಲ್ಲ. ಇಲ್ಲಿನ ಮುಖ್ಯವಾಹಿನಿಯ ಪ್ರಸಾರ ಮಾಧ್ಯಮಗಳಲ್ಲಿ ಮಾರ್ಕ್ಸ್‌ವಾದಿಗಳು, ಕ್ರೈಸ್ತರು ಮತ್ತು ಮುಸ್ಲಿಮಪರರು ಇದ್ದಾರೆ. ಹಾಗಾಗಿ ಮತಾಂತರದಂತಹ ಸುದ್ದಿಗಳನ್ನು ಪ್ರಕಟಿಸುವುದಿಲ್ಲ. ಕ್ರೈಸ್ತ ಮತ್ತು ಮುಸ್ಲಿಂ ಕಟ್ಟರವಾದಿಗಳ ಹೇಳಿಕೆಗಳನ್ನು ಇಲ್ಲಿಯ ಪ್ರಸಾರ ಮಾಧ್ಯಮಗಳು ತಕ್ಷಣವೇ ಪ್ರಕಟಿಸುತ್ತವೆ. ಮುಖ್ಯಮಂತ್ರಿ ಸ್ಟಾಲಿನ್ ಇವರು ‘ಸನಾತನ ಧರ್ಮ ಅತ್ಯಂತ ಅಪಾಯಕಾರಿಯಾಗಿದೆ’, ಎಂದು ಹೇಳಿದ್ದರು. ‘ಇಲ್ಲಿಯ ಮಕ್ಕಳ ಕಲ್ಯಾಣ ಸರಕಾರೇತರ ಸಂಸ್ಥೆಗಳನ್ನು ಕ್ರೈಸ್ತರು ಮತ್ತು ಮುಸ್ಲಿಮರು ನಡೆಸುತ್ತಾರೆ. ಈ ಸಂಸ್ಥೆಗಳು ತಮಗೆ ಸಿಗುವ ವಿದೇಶ ನಿಧಿಯ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡುವುದಿಲ್ಲ. ಕೇರಳ ಮತ್ತು ತಮಿಳುನಾಡಿನಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ಅನೇಕ ಘಟನೆಗಳು ನಡೆಯುತ್ತಿವೆ. ಇದರಲ್ಲಿ ಕ್ರೈಸ್ತ ಮತ್ತು ಮುಸ್ಲಿಂ ಆರೋಪಿಗಳಿದ್ದರೆ, ಅಂತಹ ಆರೋಪಿಗಳನ್ನು ಇಲ್ಲಿಯ ಪ್ರಸಾರ ಮಾಧ್ಯಮಗಳು ಮುಚ್ಚಿಡುತ್ತವೆ. ಈಗ ಗ್ರಾಮ ಗ್ರಾಮಗಳಲ್ಲಿ ಮತಾಂತರ ನಡೆಯುತ್ತಿದೆ. ‘ಕಾನ್ವೆಂಟ್ ಶಾಲೆಗಳೇ ಉತ್ತಮ’ ಎಂಬ ಮಾನಸಿಕತೆಯನ್ನು ಹುಟ್ಟುಹಾಕಲಾಗಿದೆ; ಆದರೆ ನಾವು ಹಿಂದೂಗಳಿಗಾಗಿ ಶಾಲೆಯನ್ನು ನಡೆಸುವ ಮೂಲಕ ಮಕ್ಕಳಿಗೆ ನಮ್ಮ ಧರ್ಮದ ಅಮೂಲ್ಯವಾದ ಜ್ಞಾನವನ್ನು ನೀಡಬಹುದು. ಅವರಿಗೆ ಉತ್ತಮ ಇಂಜಿನಿಯರ್, ವೈದ್ಯರನ್ನಾಗಿ ಮಾಡಬಹುದು, ಎಂದು ಶ್ರೀ. ಕುಮಾರ ಚೆಲ್ಲಪ್ಪನ್ ಹೇಳಿದರು.