‘ನಮ್ಮ (ಸಮಾಜವಾದಿ ಪಕ್ಷದ) ಸರಕಾರ ಬಂದರೆ ಅವರನ್ನು (ಹಿಂದೂಗಳನ್ನು) ಬಿಡುವುದಿಲ್ಲ !’(ಅಂತೆ)

ಸಮಾಜವಾದಿ ಪಕ್ಷದ ಮೆರಠ ದಕ್ಷಿಣದ ಮತಾಂಧ ಅಭ್ಯರ್ಥಿ ಆದಿಲ್ ಚೌಧರಿಯಿಂದ ಬೆದರಿಕೆ

ರಾಜ್ಯದ ಭಾಜಪ ಸರಕಾರ ಕೂಡಲೇ ಇಂತಹ ಅಭ್ಯರ್ಥಿಗಳ ಮೇಲೆ ಅಪರಾಧ ದಾಖಲಿಸಿ ಜೈಲಿಗೆ ಹಾಕಬೇಕು ಹಾಗೂ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಕಠಿಣ ಶಿಕ್ಷೆಯಾಗಲು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಚುನಾವಣಾ ಆಯೋಗವು ಈ ಬೆದರಿಕೆಯನ್ನು ತಕ್ಷಣವೇ ಪರಿಗಣಿಸಬೇಕು ಮತ್ತು ಸಮಾಜವಾದಿ ಪಕ್ಷದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು !

ಮತಾಂಧ ನಾಯಕರು ಅಧಿಕಾರಕ್ಕೆ ಬಂದರೆ ಹಿಂದೂಗಳ ಸ್ಥಿತಿ ಏನಾಗಬಹುದು, ಎಂಬುದು ಬಹಿರಂಗವಾಗಿ ಹೇಳುತ್ತಿದ್ದಾರೆ, ಇದನ್ನು ನೋಡಿದರೆ ಹಿಂದೂಗಳು ಬೇಗ ಎಚ್ಚೆತ್ತುಕೊಂಡು ಹಿಂದೂ ರಾಷ್ಟ್ರ ಸ್ಥಾಪನೆಗೆ ಸಂಘಟಿತರಾಗುತ್ತಾರೆಯೇ ?

ಮೆರಠ (ಉತ್ತರ ಪ್ರದೇಶ) – ನಮ್ಮ ಸರಕಾರ ಬಂದರೆ, ಅವರನ್ನು (ಹಿಂದೂಗಳನ್ನು) ಬಿಡುವುದಿಲ್ಲ. ನಮ್ಮ ಮೇಲೆ ದಬ್ಬಾಳಿಕೆಯಾಗುತ್ತಿದೆ,

ಈ ಬಗ್ಗೆ ಒಬ್ಬೊಬ್ಬರನ್ನು ಹುಡುಕಿ ಸೇಡು ತೀರಿಸಿಕೊಳ್ಳುತ್ತೇವೆ. ಮುಂದಿನ ಬಾರಿ ನಮ್ಮ ಮೇಲೆ ದಬ್ಬಾಳಿಕೆ ಮಾಡುವಮುನ್ನ ಅವರು ೧೦೦ ಬಾರಿ ಯೋಚಿಸಬೇಕು, ಎಂದು ಅವರಿಗೆ ಅರಿವು ಮಾಡಿಕೊಡುತ್ತೇವೆ, ಎಂದು ಸಮಾಜವಾದಿ ಪಕ್ಷದ ಮೇರಠ ದಕ್ಷಿಣ ಚುನಾವಣಾಕ್ಷೇತ್ರದ ಮತಾಂಧ ಅಭ್ಯರ್ಥಿ ಆದಿಲ್ ಚೌಧರಿ ಕೊಣೆಯೊಂದರಲ್ಲಿ ಕೆಲವರ ಮುಂದೆ ಬೆದರಿಕೆ ಹಾಕುತ್ತಿರುವ ವೀಡಿಯೊ ಪ್ರಸಾರವಾಗುತ್ತಿದೆ.