ಕೇಂದ್ರ ಸರಕಾರವು ದೇಶಾದ್ಯಂತ ದೇವಭಾಷೆಯಾದ ಸಂಸ್ಕೃತಕ್ಕೆ ಆದ್ಯತೆ ನೀಡಲು ಪ್ರಯತ್ನಿಸಬೇಕು !
ಚೆನ್ನೈ : ಮದ್ರಾಸ ಉಚ್ಚ ನ್ಯಾಯಾಲಯವು ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ, ‘ರಾಜ್ಯದಲ್ಲಿ ಈಗಾಗಲೇ ತಮಿಳು ಮತ್ತು ಆಂಗ್ಲ ಭಾಷೆ ಕಲಿಸಲಾಗುತ್ತಿದೆ. ಶಾಲಾ ಪಠ್ಯಕ್ರಮದಲ್ಲಿ ಹಿಂದಿಯನ್ನು ತೃತೀಯ ಭಾಷೆಯಾಗಿ ಸೇರಿಸುವುದರಲ್ಲಿ ಏನು ಸಮಸ್ಯೆ ಇದೆ ? ಒಂದು ವೇಳೆ ಯಾರಿಗೆ ಹಿಂದಿ ಗೊತ್ತಿಲ್ಲದಿದ್ದರೆ, ಉತ್ತರ ಭಾರತದಲ್ಲಿ ಉದ್ಯೋಗ ಪಡೆಯಲು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ’ ಎಂದು ಹೇಳುತ್ತಾ ಮದ್ರಾಸ ಉಚ್ಚ ನ್ಯಾಯಾಲಯವು ಸಂಬಂಧ ಪಟ್ಟ ಸಂಸ್ಥೆಗೆ ೮ ವಾರಗಳಲ್ಲಿ ಈ ಬಗ್ಗೆ ಉತ್ತರ ನೀಡುವಂತೆ ತಿಳಿಸಿದೆ.
What harm will learning Hindi do? Madras high court asks Tamil Nadu govt
Read: https://t.co/7pzDXMJRSy pic.twitter.com/1ic47YeKFf
— The Times Of India (@timesofindia) January 26, 2022
ಈ ವೇಳೆ ಅಡ್ವೊಕೇಟ್ ಜನರಲ್ ಆರ್. ಷಣ್ಮುಗಾಸುಂದರಮ್ ಇವರು ರಾಜ್ಯ ಸರಕಾರದ ಪರವಾಗಿ ಮಂಡಿಸುತ್ತಾ, ‘ರಾಜ್ಯದಲ್ಲಿ ಪ್ರತಿಯೊಬ್ಬರೂ ಹಿಂದಿ ಕಲಿಯಲು ಸ್ವತಂತ್ರವಿದೆ. ಹಿಂದಿ ಕಲಿಸುವ ಸಂಸ್ಥೆಗಳಿಂದ ಹಿಂದಿ ಕಲಿಯಬಹುದು’ ಎಂದು ಹೇಳಿದರು.
(ಸೌಜನ್ಯ : India Ahead News)
ಈ ಕುರಿತು ನ್ಯಾಯಾಲಯವು, ‘ಕಲಿಯುವುದು’ ಮತ್ತು ‘ಕಲಿಸುವುದು’ ಇವೆರಡರಲ್ಲಿ ವ್ಯತ್ಯಾಸವಿದೆ ಎಂದು ಹೇಳಿದೆ.