ಸಾಬೂನು, ಶಾಂಪು, ಟೂಥ್ ಪೇಸ್ಟ್ , ಇತ್ಯಾದಿ ವಸ್ತುಗಳ ಮೇಲೆ ಶಾಖಾಹಾರಿ ಅಥವಾ ಮಾಂಸಾಹಾರಿ ನಮೂದಿಸುವುದು ಕಡ್ಡಾಯವಲ್ಲ !

ನವ ದೆಹಲಿ – ‘ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್’ (ಸಿ.ಡಿ.ಎಸ್.ಸಿ.ಓ.) ಈ ಸಂಸ್ಥೆಯು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಪ್ರಮಾಣಪತ್ರ ಮಂಡಿಸುತ್ತಾ, ಕಾಸ್ಮೇಟಿಕ್ ವಸ್ತು ತಯಾರಿಸುವ ಕಂಪನಿ ಅವರ ಉತ್ಪಾದನೆಗಳ ಮೇಲೆ ಮಾಂಸಹಾರಿ ಅಥವಾ ಶಾಕಾಹಾರಿ ಎಂಬುದು ನಮೂದಿಸುವುದು ಕಡ್ಡಾಯಗೊಳಿಸುವುದು ಸಾಧ್ಯವಿಲ್ಲ.

ಡಿಸೆಂಬರ್ ೧೦, ೨೦೨೧ ರಂದು ಈ ಬಗ್ಗೆ ಸರಕಾರದಿಂದ ಮಾರ್ಗಸೂಚಿ ಜಾರಿ ಮಾಡಲಾಗಿತ್ತು. ಅದಕ್ಕನುಸಾರ ಸಾಬೂನು, ಶಾಂಪೂ, ಟೂಥಪೆಸ್ಟ ಮುಂತಾದ ವಸ್ತುಗಳ ಮೇಲೆ ಮಾಂಸಾಹಾರ ಅಥವಾ ಶಾಕಾಹಾರಿ ಎಂಬುದು ನಮೂದಿಸುವುದು ಐಚ್ಚಿಕವಾಗಿದೆ ಎಂದು ಹೇಳಿದೆ. ಇದರ ವಿರುದ್ಧ ‘ರಾಮ ಗೋ ರಕ್ಷಕ ದಳ’ದಿಂದ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿತ್ತು, ಅದರ ನಂತರ ಸರಕಾರದಿಂದ ಮೇಲಿನ ಪ್ರಮಾಣ ಪತ್ರ ಮಂಡಿಸಲಾಗಿದೆ. ಈ ಬಗ್ಗೆ ಮುಂದಿನ ವಿಚಾರಣೆ ಜನವರಿ ೩೧ ರಂದು ನಡೆಯಲಿದೆ.