‘ಪುಷ್ಪ’ ಮತ್ತು ‘ಭೌಕಾಲ’ ಈ ಚಲನಚಿತ್ರಗಳಲ್ಲಿನ ಅಪರಾಧಿ ಕಥೆಯ ಪ್ರಭಾವದಿಂದ ಅಪ್ರಾಪ್ತ ಹುಡುಗನಿಂದ ಯುವಕನ ಹತ್ಯೆ !

ಅಪ್ರಾಪ್ತ ಹುಡುಗರು ತಮ್ಮದೇ ಆದ ಒಂದು ಗೂಂಡಾಗಳ ಗುಂಪನ್ನು ಕಟ್ಟಿದ್ದರು !

ಚಲನಚಿತ್ರಗಳಲ್ಲಿನ ನಕಾರಾತ್ಮಕ ಕಥೆಯಿಂದ ಸಣ್ಣ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ, ಇದೇ ಈ ಘಟನೆಯಿಂದ ಸ್ಪಷ್ಟವಾಗುತ್ತದೆ. ಆದ್ದರಿಂದ ಇಂತಹ ಚಲನಚಿತ್ರಗಳಿಗೆ ಕೇಂದ್ರೀಯ ಸೆಂಸರ ಬೋರ್ಡ್ ಪ್ರಮಾಣಪತ್ರ ನೀಡಲು ನಿರಾಕರಿಸಬೇಕು ಮತ್ತು ಸಮಾಜವೂ ಸಹ ಇಂತಹ ಚಲನಚಿತ್ರಗಳನ್ನು ಕಾನೂನಿನ ಮೂಲಕ ವಿರೋಧಿಸಬೇಕು !- ಸಂಪಾದಕರು

ನವ ದೆಹಲಿ – ಇಲ್ಲಿಯ ಜಹಾಂಗೀರಪುರಿ ಪ್ರದೇಶದಲ್ಲಿ ಬಾಬು ಜಗಜೀವನ ರಾಮ ಮೆಮೋರಿಯಲ್ ಆಸ್ಪತ್ರೆಯಲ್ಲಿ ೩ ಅಪ್ರಾಪ್ತ ಹುಡುಗರು ಒಬ್ಬ ೨೪ ವಯಸ್ಸಿನ ಯುವಕನ ಹತ್ಯೆ ಮಾಡಿರುವ ಘಟನೆ ನಡೆದಿದೆ. ಈ ಹುಡುಗರನ್ನು ಬಂಧಿಸಲಾಗಿದೆ. ಈ ಹುಡುಗರಿಗೆ ಅಪರಾಧ ಜಗತ್ತಿನಲ್ಲಿ ಪ್ರಸಿದ್ಧವಾಗುವುದಿತ್ತು. ಅವರು ತಮ್ಮ ಅಪರಾಧಿ ಗುಂಪನ್ನು ನಿರ್ಮಾಣ ಮಾಡಿದ್ದರು. ‘ಪುಷ್ಪ’ ಮತ್ತು ‘ಭೌಕಾಲ’ ನಂತಹ ಚಲನಚಿತ್ರ ಮತ್ತು ‘ವೆಬ್ ಸರಣಿ’ಯಲ್ಲಿ ಚಿತ್ರೀಕರಿಸಿರುವ ಗೂಂಡಾಗಳ ಜೀವನಶೈಲಿಯನ್ನು ಅವರ ಮೇಲೆ ಪ್ರಭಾವ ಬೀರಿತ್ತು, ಎಂದು ಅಪ್ರಾಪ್ತ ಹುಡುಗರು ಪೊಲೀಸರಿಗೆ ತಿಳಿಸಿದ್ದಾರೆ.

೧. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆರೋಪಿಗಳು ಹತ್ಯೆ ಮಾಡಿದನಂತರ ಒಂದು ವಿಡಿಯೋ ತಯಾರಿಸಿದ್ದಾರೆ ಮತ್ತು ಅದನ್ನು ‘ಇನ್ಸ್ಟಾಗ್ರಾಮ್’ ‘ಆಪ್’ ನಲ್ಲಿ ಪ್ರಸಾರ ಮಾಡಿದ್ದಾರೆ. (ಇದರಿಂದ ಈ ಮಕ್ಕಳು ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಮುಂದುವರೆದಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ; ಆದರೆ ಅವರ ಮೇಲೆ ಯೋಗ್ಯ ಸಂಸ್ಕಾರ ಇಲ್ಲದೆ ಇರುವುದರಿಂದ ಕೇವಲ ಆಧುನಿಕ ಶಿಕ್ಷಣ ಉಪಯೋಗವಾಗುವುದಿಲ್ಲ, ಇದು ಈ ಘಟನೆಯನ್ನು ತೋರಿಸುತ್ತದೆ ! – ಸಂಪಾದಕರು)

೨. ಪೋಲಿಸ ಆಯುಕ್ತ (ಉತ್ತರ ಪಶ್ಚಿಮ) ಉಷಾ ರಂಗನಾನಿ ಇವರು, ‘ಸಿಸಿಟಿವಿ ಫೂಟೆಜ್’ನಿಂದ ಮೃತ ಹಾಗೂ ಆರೋಪಿ ಇವರ ಮಧ್ಯೆ ಜಗಳ ನಡೆದಿರುವುದು ಬೆಳಕಿಗೆ ಬಂದಿದೆ. ಈ ಅಪ್ರಾಪ್ತ ಹುಡುಗರು ತಮ್ಮ ಗುಂಪಿಗೆ ‘ಬದನಾಮ ಗ್ಯಾಂಗ್’ ಎಂದು ಹೆಸರು ಇಟ್ಟುಕೊಂಡಿದ್ದರು ಎಂದು ಹೇಳಿದರು.