ಮಿಶೋ ಸಂಸ್ಥೆಯಿಂದ ತ್ರಿವರ್ಣ ಮಾಸ್ಕ್‌ಗಳ ಮಾರಾಟ !

ಹಿಂದೂ ಜನಜಾಗೃತಿ ಸಮಿತಿಯ ವಿರೋಧದ ನಂತರ ಜಾಲತಾಣದಿಂದ ಮಾಸ್ಕ್ ತೆಗೆಯಲಾಯಿತು !

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕರು

ಮುಂಬಯಿ : ‘ಮಿಶೋ’ ಈ ಆನ್‌ಲೈನ್ ವಸ್ತು ಮಾರಾಟ ಮಾಡುವ ಸಂಸ್ಥೆಯು ತನ್ನ ಜಾಲತಾಣದಲ್ಲಿ ಭಾರತದ ರಾಷ್ಟ್ರಧ್ವಜದ ಬಣ್ಣ ಹೋಲುವಂತೆ ಮಸ್ಕಅನ್ನು ಮಾರಾಟಕ್ಕೆ ಇಟ್ಟಿತ್ತು. ಈ ಬಗ್ಗೆ ರಾಷ್ಟ್ರಪ್ರೇಮಿಗಳಿಗೆ ಮಾಹಿತಿ ಸಿಕ್ಕಿದ ನಂತರ ಅವರು ಹಿಂದೂ ಜನಜಾಗೃತಿ ಸಮಿತಿಗೆ ಈ ಬಗ್ಗೆ ತಿಳಿಸಿದ್ದರು. ಸಮಿತಿಯು ಈ ಬಗ್ಗೆ ಟ್ವೀಟ್ ಮಾಡಿ ಮಿಶೋ ಸಂಸ್ಥೆಯನ್ನು ಮಾಸ್ಕಅನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿತ್ತು. ಸಮಿತಿಯು ಟ್ವೀಟ್‌ನಲ್ಲಿ, ರಾಷ್ಟ್ರಧ್ವಜವನ್ನು ವಸ್ತುಗಳ ಮೇಲೆ ಬಳಸುವುದು ಅಪರಾಧವಾಗಿರುವುದರಿಂದ ಮಾಸ್ಕಅನ್ನು ತೆಗೆದುಹಾಕಬೇಕು ಎಂದು ತಿಳಿಸಿತ್ತು. ಈ ಟ್ವೀಟ್‌ಗೆ ಮಿಶೋ ಸಂಸ್ಥೆಯು ತಕ್ಷಣವೇ ಪ್ರತಿಕ್ರಿಯಿಸಿತು ಮತ್ತು ಜಾಲತಾಣದಿಂದ ಮಾಸ್ಕಅನ್ನು ತೆಗೆದುಹಾಕಿತು.