ಹರ್ದೋಯಿ (ಉತ್ತರ ಪ್ರದೇಶ)ಯಲ್ಲಿ ೧೦ ವರ್ಷದ ಬಾಲಕನಿಗೆ ಮದರಸಾ ವಿದ್ಯಾರ್ಥಿಯಿಂದ ಲೈಂಗಿಕ ದೌರ್ಜನ್ಯ !

ಅನೇಕ ಮದರಸಾಗಳಲ್ಲಿ ಇಂತಹ ಖೇದಕರ ಕೃತ್ಯಗಳು ನಡೆಯುತ್ತಿರುವುದು ಆಗಾಗ ಬಹಿರಂಗವಾಗುತ್ತಿದ್ದರೂ ಸರಕಾರಿ ವ್ಯವಸ್ಥೆಗಳು ಇಂತಹ ಮದರಸಾಗಳನ್ನು ಮುಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಂಡಿರುವುದನ್ನು ಎಂದೂ ಕೇಳಿಲ್ಲ ! ಸರಕಾರಿ ವ್ಯವಸ್ಥೆ ಈಗಲಾದರೂ ಇಂತಹ ಮದರಸಾಗಳಿಗೆ ಬೀಗ ಹಾಕುವ ಧೈರ್ಯವನ್ನು ತೋರಿಸುವುದೇ ?- ಸಂಪಾದಕರು 

ಹರ್ದೋಯಿ (ಉತ್ತರಪ್ರದೇಶ) – ಇಲ್ಲಿಯ ಜಾಮಿಯಾ ಸಯ್ಯದ್ ಉಲ್ ಅಬ್ರಾರ್ ಮದರಸಾದಲ್ಲಿ ಓದುತ್ತಿರುವ ೧೦ ವರ್ಷದ ಬಾಲಕನನ್ನು ಮದರಸಾದಲ್ಲೇ ದುಷ್ಕೃತ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸದಂತೆ ಪೊಲೀಸರು ಅದೇ ಮದರಸಾದ ಹಾಫಿಜಾದ (ಕುರಾನ ಬೈಪಾಠ ಮಾಡಿಸುವ) ಪದವಿಯನ್ನು ಪಡೆದಿದ್ದ ಅರಬಾಜನನ್ನು ಬಂಧಿಸಿದ್ದಾರೆ.

ಈ ಪ್ರಕರಣ ಹರ್ದೋಯಿ ಜಿಲ್ಲೆಯ ಕೊತವಾಲಿ ಶಾಹಾಬಾದ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಜಾಮಿಯಾ ಸೈಯದ್ ಉಲ್ ಅಬ್ರಾರ್‌ನಲ್ಲಿ ಬಲೈಕೋಟ್ ಪ್ರದೇಶದಲ್ಲಿ ವಾಸಿಸುತ್ತಿರುವ ಅರಬಾಜ್‌ನು ಹಫೀಜಾನ ವಿದ್ಯಾರ್ಥಿಯಾಗಿದ್ದಾನೆ. ಮದರಸಾದಲ್ಲಿ ಕಲಿಯುತ್ತಿರುವ ೧೦ ವರ್ಷದ ಬಾಲಕನನ್ನು ಮದರಸಾದ ಕೋಣೆಗೆ ಕರೆದೊಯ್ದು ಅನೈಸರ್ಗಿಕ ಲೈಂಗಿಕ ಕಿರುಕುಳ ನೀಡಿದ ಆರೋಪ ಅವನ ಮೇಲಿದೆ. ಪೀಡಿತ ಬಾಲಕನು ಈ ಮಾಹಿತಿಯನ್ನು ಕುಟುಂಬದವರಿಗೆ ತಿಳಿಸಿದ್ದಾರೆ. ನಂತರ ಪೀಡಿತನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಅದರ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಲಮ್ ೧೭೭ ಮತ್ತು ಪೋಕ್ಸೋ ಕಾಯ್ದೆಯ ೫/೬ ರ ಕಲಮ್ ಅಡಿಯಲ್ಲಿ ದೂರನ್ನು ದಾಖಲಿಸಿಕೊಂಡಿದ್ದಾರೆ.

ಬಿಹಾರದ ಸೀತಾಮಢಿ ಮತ್ತು ಪಾಟಲೀಪುತ್ರದ ಮದರಸಾಗಳಲ್ಲಿ ಅತ್ಯಾಚಾರದ ಘಟನೆಗಳು !

ಬಿಹಾರದ ಸಿತಾಮಢಿ ಜಿಲ್ಲೆಯಲ್ಲಿ ಮೌಲ್ವಿ ತರಬೇಜ್‌ನು ತನ್ನದೇ ಮದರಸಾದಲ್ಲಿ ಓದಲು ಬಂದಿದ್ದ ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅವನು ಈ ಕುಕೃತ್ಯವನ್ನು ಧ್ವನಿಮುದ್ರಣ ಮಾಡಿದ ಮತ್ತು ಈ ವೀಡಿಯೋದ ಸಹಾಯದಿಂದ ಪೀಡಿತೆಯ ಮೇಲೆ ಹಲವಾರು ಬಾರಿ ಅತ್ಯಾಚಾರ ಮಾಡಿದ. ಆದ್ದರಿಂದ ಪೀಡಿತೆ ಗರ್ಭಿಣಿಯಾದಳು. ಮತ್ತೊಂದು ಘಟನೆಯಲ್ಲಿ ಪಾಟಲಿಪುತ್ರ (ಬಿಹಾರ) ದ ಮಾನೇರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಮದರಸಾದಲ್ಲಿ ಓದುತ್ತಿರುವ ಅಪ್ರಾಪ್ತ ಬಾಲಕಿಯ ಮೇಲೆ ಶಾಹಬಾಜ್ ರಜಾ ಎಂಬ ಮೌಲ್ವಿಯು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.