ಸಮಾನ ನಾಗರಿಕ ಕಾನೂನನ್ನು ಜಾರಿಗೆ ತರಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿ !

ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಕುಲಪತಿ ಫಿರೋಜ್ ಬಖ್ತ್ ಅವರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ

* ಮೂಲತಃ ಇಂತಹ ಬೇಡಿಕೆಯನ್ನೇ ಮಾಡುವ ಪ್ರಮೇಯ ಬರಬಾರದು ! ಕೇಂದ್ರ ಸರಕಾರವು ತಾವಾಗಿಯೇ ತುರ್ತಾಗಿ ದೇಶದಲ್ಲಿ ಸಮಾನ ನಾಗರಿಕ ಕಾನೂನನ್ನು ಜಾರಿಗೊಳಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು 

* ಸಮಾನ ನಾಗರಿಕ ಕಾನೂನಿಗೆ ಬಖ್ತ್ ಅವರ ಧರ್ಮಬಾಂಧವರ ವಿರೋಧವಿದೆ. ಆದ್ದರಿಂದ ಬಖ್ತ್ ಇವರು ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಅವರ ಧರ್ಮಬಾಂಧವರಲ್ಲಿಯೂ ಜಾಗೃತಿ ಮೂಡಿಸಲು ಪ್ರಯತ್ನಿಸಬೇಕು !- ಸಂಪಾದಕರು 

(ಎಡದಲ್ಲಿ) ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಕುಲಪತಿ ಫಿರೋಜ್ ಬಖ್ತ್ ಅಹ್ಮದ್

ನವ ದೆಹಲಿ : ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಕುಲಪತಿ ಫಿರೋಜ್ ಬಖ್ತ್ ಅಹ್ಮದ್ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ‘ಸಮಾನ ನಾಗರಿಕ ಕಾನೂನನ್ನು ಜಾರಿಗೊಳಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು’, ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ, ಬಖ್ತ್ ಇವರು ಕೇಂದ್ರಕ್ಕೆ ಮೂರು ತಿಂಗಳೊಳಗೆ ಸಮಾನ ನಾಗರಿಕ ಸಂಹಿತೆಯನ್ನು ಸಿದ್ಧಪಡಿಸುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ಫಿರೋಜ್ ಬಖ್ತ್ ಇವರು ದೇಶದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಹಿರಿಯ ಸಹೋದರನನ ಮೊಮ್ಮಗನಾಗಿದ್ದಾರೆ. ಇದಕ್ಕೂ ಮೊದಲು ಬಖ್ತ್ ಇವರು ಜನಸಂಖ್ಯಾ ನಿಯಂತ್ರಣಕ್ಕೆ ಪರಿಣಾಮಕಾರಿ ನಿಯಮಗಳು, ಕಾನೂನುಗಳು ಮತ್ತು ಮಾರ್ಗಸೂಚಿಗಳನ್ನು ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.

೧. ಫಿರೊಜ ಬಖ್ತ್ ತಮ್ಮ ಮನವಿಯಲ್ಲಿ, ಕೇಂದ್ರವು ಸೌಹಾರ್ದ, ಐಕ್ಯತೆ ಮತ್ತು ರಾಷ್ಟ್ರೀಯ ಏಕತೆ ಸೇರಿದಂತೆ ಲೈಂಗಿಕ ನ್ಯಾಯ ಮತ್ತು ಲೈಂಗಿಕ ಸಮಾನತೆಯನ್ನು ಉತ್ತೇಜಿಸಲು ಎಲ್ಲಾ ಧರ್ಮಗಳು ಮತ್ತು ಸಂಪ್ರದಾಯಗಳ ಉತ್ತಮ ಆಚರಣೆಗಳನ್ನು ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ನಾಗರಿಕ ಕಾನೂನನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಸಂವಿಧಾನದ ಭಾವನೆಗಳಿಗನುಸಾರ ಸಮಾನ ನಾಗರಿಕ ಕಾನೂನನ್ನು ೩ ತಿಂಗಳಲ್ಲಿ ಸಿದ್ಧ ಪಡಿಸಬೇಕು ಎಂದು ಹೇಳಿದ್ದಾರೆ.

೨. ಬಖ್ತ್ ತಮ್ಮ ಮನವಿಯಲ್ಲಿ, ಭಾರತವು ವಿಶ್ವ ಗುರು ಆಗುವ ಹಾದಿಯಲ್ಲಿದೆ; ಆದರೆ ವೈಯಕ್ತಿಕ ಕಾನೂನುಗಳಿಂದಾಗಿ, ಸಂವಿಧಾನದ ಸಾಮಾನ್ಯ ಕಾರ್ಯಚಟುವಟಿಕೆಗಳಲ್ಲಿ ಸಾಕಷ್ಟು ಹಸ್ತಕ್ಷೇಪ ಮಾಡಲಾಗುತ್ತಿದೆ, ಇದರಿಂದ ದೇಶವನ್ನು ನಡೆಸಲು ಅಡ್ಡಿಯಾಗುತ್ತಿದೆ ಎಂದಿದ್ದಾರೆ.

ಸಮಾನ ನಾಗರಿಕ ಕಾನೂನು ಎಂದರೇನು ?

ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನಿಗೆ, ಧರ್ಮ ಅಥವಾ ಜಾತಿಯನ್ನು ಲೆಕ್ಕಿಸದೆ ಒಂದೇ ಕಾನೂನು ಇರುವುದು, ಅಂದರೆ ಸಮಾನ ನಾಗರಿಕ ಕಾನೂನು ಆಗಿದೆ. ಸಮಾನ ನಾಗರಿಕ ಕಾನೂನಿನಲ್ಲಿ, ಆಸ್ತಿ ಹಂಚಿಕೆ ಸೇರಿದಂತೆ ಮದುವೆ, ವಿಚ್ಛೇದನ ಮತ್ತು ದತ್ತು ಪಡೆಯುವುದು ಇವುಗಳೆಲ್ಲ ಎಲ್ಲ ಧರ್ಮಗಳಿಗೂ ಒಂದೇ ಕಾನೂನು ಅನ್ವಯಿಸುತ್ತದೆ. ಹೇಗೆ ಹಿಂದೂಗಳಿಗೆ ೨ ಮದುವೆಯಾಗಲು ಅವಕಾಶವಿಲ್ಲವೋ, ಹಾಗೆಯೇ ಮುಸಲ್ಮಾನರಿಗೆ ೨ ಮದುವೆಯಾಗಲು ಅನುಮತಿ ಇರುವುದಿಲ್ಲ.