ಚೀನಾದ ಸೈನಿಕರಿಂದ ಅರುಣಾಚಲ ಪ್ರದೇಶದಲ್ಲಿ ನುಗ್ಗಿ ೧೭ ವರ್ಷದ ಯುವಕನ ಅಪಹರಣ !

‘ಚೀನಾದ ಗಡಿಯಲ್ಲಿ ಭಾರತದ ರಾಜ್ಯವಿದೆಯೋ, ಚೀನಾದ್ದೋ ? ಅಲ್ಲಿ ಭಾರತೀಯ ಸೈನಿಕರು ಏನು ಮಾಡುತ್ತಿದ್ದರು ?’ ಎನ್ನುವ ಪ್ರಶ್ನೆ ಮೂಡುತ್ತದೆ. ಚೀನಾ ನಿರಂತರವಾಗಿ ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕು ಸಾಧಿಸುತ್ತಿರುವಾಗ ಇಂತಹ ನಿಷ್ಕಾಳಜಿತನ ಸೈನ್ಯಕ್ಕೆ ಲಜ್ಜಾಸ್ಪದ !

ಇಟಾನಗರ (ಅರುಣಾಚಲ ಪ್ರದೇಶ) – ಚೀನಾದ ಸೈನ್ಯವು ಅರುಣಾಚಲ ಪ್ರದೇಶದಲ್ಲಿ ನುಗ್ಗಿ ೧೭ ವರ್ಷದ ಭಾರತೀಯ ಯುವಕ ಮೀರಮ ತಾರಣನನ್ನು ಅಪಹರಿಸಿರುವ ಘಟನೆ ನಡೆದಿದೆ. ಅರುಣಾಚಲ ಪ್ರದೇಶದ ಭಾಜಪ ಸಂಸದ ತಾಪೀರ ಗಾಓ ಮತ್ತು ಕಾಂಗ್ರೆಸ್ ಶಾಸಕ ನಿನಾನ್ಗ ಏರಿಂಗ ಇವರು ಭಾರತ ಸರಕಾರಕ್ಕೆ ತಕ್ಷಣವೇ ಅವನನ್ನು ಬಿಡುಗಡೆಗೊಳಿಸಲು ಕ್ರಮ ಕೈಕೊಳ್ಳುವಂತೆ ಕೋರಿದ್ದಾರೆ.

ಸಂಸದ ತಾಪೀರ ಗಾಓ ಮಾತನಾಡುತ್ತಾ, ಈ ಅಪಹರಣ ಸಿಯಾಂಗ ಜಿಲ್ಲೆಯ ಲುಂಗಟಾ ಜೋರ ಪ್ರದೇಶದಲ್ಲಿ ನಡೆದಿದೆ. ಚೀನಾದ ಸೈನ್ಯದ ವಶದಿಂದ ಓಡಿಬಂದಿದ್ದ ಬೇರೊಬ್ಬ ಬಾಲಕನು ಸ್ಥಳೀಯ ಅಧಿಕಾರಿಗಳಿಗೆ ಈ ಮಾಹಿತಿಯನ್ನು ನೀಡಿದನು. ಇಲ್ಲಿ ಚೀನಾ ೨೦೧೮ ರಲ್ಲಿ ಭಾರತದ ಗಡಿಯಲ್ಲಿ ೩-೪ ಕಿಲೋಮೀಟರಗಳಷ್ಟು ರಸ್ತೆಯನ್ನು ನಿರ್ಮಿಸಿದೆ.