ಮಧ್ಯಪ್ರದೇಶದ ಪೊಲಿಸರು ಇನ್ನು ಉರ್ದು, ಪಾರಸಿ ಮುಂತಾದ ಭಾಷೆಯ ಶಬ್ದಗಳ ಬದಲು ಹಿಂದಿ ಶಬ್ದಗಳನ್ನೇ ಉಪಯೋಗಿಸುವರು !

ಮಧ್ಯಪ್ರದೇಶ ಪೊಲಿಸರ ಶ್ಲಾಘನಿಯ ನಿರ್ಣಯ ! ದೇಶದ ಪ್ರತಿಯೊಂದು ಇಲಾಖೆಯಲ್ಲಿ ಸ್ಥಳೀಯ ಭಾಷೆಯನ್ನು ಮತ್ತು ಹಿಂದಿ ಭಾಷೆಯನ್ನು ಉಪಯೋಗಿಸಬೇಕು ! ಮೊಗಲರು ಮತ್ತು ಆಂಗ್ಲರ ಗುಲಾಮಗಿರಿಯಿಂದ ಭಾರತ ಮುಕ್ತವಾಗಿದ್ದರೂ, ಭಾಷೆಯ ಗುಲಾಮಗಿರಿ ಇಂದಿಗೂ ಇರುವುದರಿಂದ ಅದನ್ನು ಗಂಭೀರತೆಯಿಂದ ಪರಿಗಣಿಸುವ ಆವಶ್ಯಕತೆಯಿದೆ. ಹಿಂದೂ ರಾಷ್ಟ್ರದಲ್ಲಿ ಪ್ರತಿಯೊಂದು ಸ್ಥಳದಲ್ಲಿಯೂ ಶುದ್ಧ ಭಾಷೆಗಳನ್ನು ಉಪಯೋಗಿಸಲಾಗುವುದು !

ಭೋಪಾಳ(ಮಧ್ಯಪ್ರದೇಶ) – ಮಧ್ಯಪ್ರದೇಶದ ಪೊಲಿಸರು ಉರ್ದು, ಪಾರಸಿ ಮುಂತಾದ ಭಾಷೆಗಳಲ್ಲಿರುವ ಅಹಿಂದಿ ಶಬ್ದಗಳನ್ನು ಉಪಯೋಗಿಸದಿರಲು ಪ್ರಯತ್ನವನ್ನು ಪ್ರಾರಂಭಿಸಿದ್ದಾರೆ. ರಾಜ್ಯದ ಗೃಹ ಸಚಿವ ನರೋತ್ತಮ ಮಿಶ್ರಾ ಇವರು ಕಳೆದ ತಿಂಗಳಲ್ಲಿ ಈ ಕುರಿತು ಪೊಲಿಸರಿಗೆ ಆದೇಶವನ್ನು ನೀಡಿದ್ದರು.

೧. ಮಧ್ಯಪ್ರದೇಶದ ಪೊಲಿಸ ಪ್ರಧಾನ ಕಛೇರಿಯು ಒಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿ ರಾಜ್ಯದ ಎಲ್ಲ ಜಿಲ್ಲೆಯ ಪೊಲಿಸ ಅಧಿಕಾರಿಗಳಿಗೆ ಅಹಿಂದಿ ಶಬ್ದಗಳ ಬದಲಾಗಿ ಹಿಂದಿ ಶಬ್ದಗಳನ್ನು ಉಪಯೋಗಿಸುವ ಕುರಿತು ಬರುವ ೭ ದಿನಗಳಲ್ಲಿ ಸುಧಾರಣೆಯನ್ನು ತಿಳಿಸುವಂತೆ ಆದೇಶಿಸಿದೆ.

೨. ಇದರಲ್ಲಿ, ಪೊಲಿಸರಿಗಾಗಿ ಹಿಂದಿ ಶಬ್ದಕೋಶವನ್ನು ಸಿದ್ಧಪಡಿಸಲಾಗುತ್ತಿದೆ. ಪೊಲಿಸರ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಇತರ ಭಾಷೆಯ ಶಬ್ದಗಳನ್ನು ಹಿಂದಿಯಲ್ಲಿ ಪರ್ಯಾಯ ಶಬ್ದವನ್ನು ಉಪಯೋಗಿಸಲು ಪ್ರಯತ್ನಿಸಲಾಗುತ್ತಿದೆ. ಈ ಶಬ್ದಕೋಶದ ಮುಖಾಂತರ ೨೦೦ ಕ್ಕೂ ಹೆಚ್ಚು ಅಹಿಂದಿ ಶಬ್ದಗಳಿಗೆ ಪರ್ಯಾಯ ಶಬ್ದಗಳನ್ನು ರಚಿಸಲಾಗುತ್ತಿದೆ. ಈ ಶಬ್ದಗಳನ್ನು ಪೊಲಿಸರ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ನಿಯಮಿತವಾಗಿ ಉಪಯೋಗಿಸುವರು. ಉದಾ. ‘ಹಲಫನಾಮಾ’ ಬದಲಾಗಿ ‘ಶಪಥಪತ್ರ’ ಇಂತಹ ಪರ್ಯಾಯ ಶಬ್ದಗಳನ್ನು ಉಪಯೋಗದಲ್ಲಿ ತರಲಾಗುತ್ತಿದೆ.