ಸಂಚಾರಿ ಪೊಲಿಸರು ತಡೆದಾಗ ಮತಾಂಧರು ಪರಾರಿಯಾಗಲು ಪ್ರಯತ್ನ : ಮುಂದೆ ೨೦ ನಿಮಿಷಗಳಲ್ಲಿಯೇ ಮತಾಂಧರ ಗುಂಪಿನಿಂದ ಪೊಲಿಸರ ಮೇಲೆ ದಾಳಿ !
ಪೊಲಿಸ ಚೌಕಿಯ ಮೇಲೆ ದಾಳಿ ನಡೆಸಿ ಪೊಲಿಸರಿಗೆ ಥಳಿಸುವಷ್ಟು ಮತಾಂಧರು ಉದ್ಧಟರಾಗಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! ಇಂತಹವರನ್ನು ಸರಿದಾರಿಗೆ ತರಲು ಕಠಿಣ ಉಪಾಯೋಜನೆಗಳನ್ನು ಜಾರಿಗೊಳಿಸುವುದು ಆವಶ್ಯಕವಾಗಿವೆ ! ಮತಾಂಧರ ಕೈಯಿಂದ ಹೊಡೆತ ತಿನ್ನುವ ಪೊಲಿಸರು ಜನರ ರಕ್ಷಣೆಯನ್ನು ಮಾಡಬಲ್ಲರೇ ? |
ಲಕ್ಷ್ಮಣಪುರಿ – ಉತ್ತರಪ್ರದೇಶದ ಮೇರಠ ಜಿಲ್ಲೆಯ ನೌಚಂದಿಯಲ್ಲಿ ಜನೇವರಿ ೧೭ ರಂದು ಮತಾಂಧರು ಪೊಲಿಸ ಠಾಣೆಯ ಮೇಲೆ ದಾಳಿ ನಡೆಸಿದರು. ಈ ಸಮಯದಲ್ಲಿ ಮತಾಂಧರು ಪೊಲಿಸರನ್ನು ಥಳಿಸಿದರು. ಗುಂಪು ಹಿಂಸಾತ್ಮಕವಾಗಿದ್ದರಿಂದ ವಿವಿಧ ಪೊಲಿಸ ಠಾಣೆಗಳಿಂದ ಪೊಲಿಸ ತುಕಡಿಗಳನ್ನು ಕರೆಸಬೇಕಾಯಿತು. ಈ ಪ್ರಕರಣದಲ್ಲಿ ಪೊಲಿಸರು ಮೆಹಬೂಬ, ತಾಹಿರ, ಖಾಲಿದ ಮತ್ತು ಇತರರ ವಿರುದ್ಧ ದೂರು ದಾಖಲಿಸಿದ್ದಾರೆ.
ಜನೇವರಿ ೧೭ ರಂದು ಪೊಲಿಸರು ಎಂದಿನಂತೆ ಸಂಜೆ ರಸ್ತೆಯ ಮೇಲೆ ವಾಹನಗಳ ತಪಾಸಣೆಯನ್ನು ನಡೆಸುತ್ತಿದ್ದರು. ಆ ಸಮಯದಲ್ಲಿ ಪೊಲಿಸರು ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಮೆಹಬೂಬನನ್ನು ನಿಲ್ಲಿಸುವಂತೆ ಹೇಳಿದ್ದರು; ಆದರೆ ಮೆಹಬೂಬ ಪೊಲಿಸರ ಮಾತನ್ನು ಕೇಳದೇ ಅಲ್ಲಿಂದ ಓಡಿ ಹೋದನು. ಪೊಲಿಸರು ಅವನ ಬೆನ್ನು ಹತ್ತಿ ಅವನ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದರು; ಆದರೆ ಘಟನೆಯ ಸ್ಥಳದಿಂದ ಮೆಹಬೂಬ ಓಡಿ ಹೋದನು. ಸಾಧಾರಣವಾಗಿ ೨೦ ನಿಮಿಷಗಳ ಬಳಿಕ ಮೆಹಬೂಬ ಗುಂಪನ್ನು ಕರೆದುಕೊಂಡು ಪೊಲಿಸ ಠಾಣೆಯ ಬಳಿ ತಲುಪಿದನು ಮತ್ತು ಗುಂಪು ಪೊಲಿಸರನ್ನು ಥಳಿಸಿದರು. ತದನಂತರ ಗುಂಪು ಪೊಲಿಸ ಠಾಣೆಯಲ್ಲಿ ನುಗ್ಗಿ, ಧ್ವಂಸ ಮಾಡಲು ಆರಂಭಿಸಿದರು. ಈ ಬಗ್ಗೆ ಮಾಹಿತಿ ಸಿಕ್ಕ ಬಳಿಕ ಪೊಲಿಸ ಠಾಣೆಯ ಪೊಲಿಸ ನಿರೀಕ್ಷಕ ಜಿತೇಂದ್ರಕುಮಾರ ಸಿಂಹ ಘಟನಾ ಸ್ಥಳಕ್ಕೆ ತಲುಪಿದರು. ಅವರು ಘಟನಾಸ್ಥಳದಲ್ಲಿ ತಾಹಿರ ಮತ್ತು ಖಾಲಿದರನ್ನು ಬಂಧಿಸಿದರು. ಇತರೆ ಪೊಲಿಸ ಠಾಣೆಗಳ ಪೊಲಿಸ ತುಕಡಿಗಳು ಘಟನಾಸ್ಥಳಕ್ಕೆ ತಲುಪಿದ ಬಳಿಕ ಗುಂಪನ್ನು ನಿಯಂತ್ರಿಸಲಾಯಿತು. ಓಡಿ ಹೋಗಿರುವ ಆರೋಪಿಗಳನ್ನು ಶೋಧಿಸಲಾಗುತ್ತಿದೆ.