ದೆಹಲಿಯ ಫಿರೋಜ ಶಾಹ ಕೋಟ್ಲಾ ಕೋಟೆಯಲ್ಲಿ ಅನಧಿಕೃತವಾಗಿ ನುಗ್ಗಿ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ ಮತ್ತು ಸಹಚರರಿಂದ ನಮಾಜಪಠಣ !

‘ಹಿಂದೂ ಆರ್ಮಿ’ ಸಂಘಟನೆಯಿಂದ ನಮಾಜಪಠಣದ ವಿರುದ್ಧ ಹನುಮಾನ ಚಾಲೀಸಾ ಪಠಣ

ಮತಾಂಧರ ‘ಕೋಟೆ ಜಿಹಾದ’ ಕೇವಲ ಮಹಾರಾಷ್ಟ್ರದಲ್ಲಿಯಷ್ಟೇ ಅಲ್ಲ, ದೆಹಲಿಯಲ್ಲಿಯೂ ಇದೆ, ಎನ್ನುವುದನ್ನು ಈ ಘಟನೆ ತೋರಿಸುತ್ತದೆ ! ಇದಕ್ಕಾಗಿ ಈಗ ಕೇಂದ್ರದ ಭಾಜಪ ಸರಕಾರವು ಪುರಾತತ್ವ ಇಲಾಖೆಯ ಕಡೆಗೆ ಹೆಚ್ಚು ಗಮನಹರಿಸಿ ಈ ಜಿಹಾದ ನಾಶಗೊಳಿಸಲು ಸಮರೋಪಾದಿಯಲ್ಲಿ ಪ್ರಯತ್ನಿಸಬೇಕಾಗಿದೆಯೆಂದು ಹಿಂದೂಗಳಿಗೆ ಅನಿಸುತ್ತದೆ !

ತಮ್ಮನ್ನು ‘ಜಾತ್ಯತೀತ’ ಎಂದು ಹೇಳಿಕೊಳ್ಳುವ ಆಮ್ ಆದ್ಮಿ ಪಕ್ಷದ ಸ್ವರ್ವಸ್ವವೂ ಆಗಿರುವ ಅರವಿಂದ ಕೇಜರಿವಾಲ ಈ ವಿಷಯದಲ್ಲಿ ಬಾಯಿ ಬಿಡುವರೇ ? ಅವರ ಶಾಸಕ ಕಾನೂನಿನ ರಾಜ್ಯ ನೀಡುತ್ತಿದ್ದಾರೆಯೇ ?

ನವದೆಹಲಿ – ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ ಇವರು ಇಲ್ಲಿಯ ಫಿರೋಜ ಶಾಹ ಕೋಟ್ಲಾ ಕೋಟೆಯಲ್ಲಿ ನುಗ್ಗಿ ನಮಾಜಪಠಣ ಮಾಡಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ಇದರಲ್ಲಿ ಕೋಟೆಯೊಳಗೆ ಹೋಗಲು ತಿಕಿಟು ತೆಗೆದುಕೊಳ್ಳಬೇಕಾಗಿರುವಾಗ ಅಮಾನತುಲ್ಲಾ ಖಾನ ಮತ್ತು ಅವನ ೧೫ ಜನ ಸಹಚರರು ಭದ್ರತಾ ಸಿಬ್ಬಂದಿಯನ್ನು ತಳ್ಳುತ್ತಾ ಕೋಟೆಯೊಳಗೆ ನುಗ್ಗಿ ನಮಾಜಪಠಣ ಮಾಡಿರುವುದು ಈ ವಿಡಿಯೋದಿಂದ ಬಯಲಾಗಿದೆ. ಇದಕ್ಕೆ ಪ್ರತ್ಯುತ್ತರವೆನ್ನುವಂತೆ ‘ಹಿಂದೂ ಆರ್ಮಿ’ ಸಂಘಟನೆಯ ಅಧ್ಯಕ್ಷ ಶ್ರೀ. ಸಂಜೀವ ಭಾಟಿಯವರು ಈ ಕೋಟೆಯ ಹತ್ತಿರ ನಿಂತುಕೊಂಡು ಒಂದು ವಿಡಿಯೋ ತಯಾರಿಸಿ ಇಲ್ಲಿ ಪ್ರತಿ ಮಂಗಳವಾರ ಹನುಮಾನ ಚಾಲಿಸಾ ಪಠಣ ಮಾಡುವಂತೆ ಹಿಂದೂಗಳಿಗೆ ಕರೆ ನೀಡಿದ್ದಾರೆ. ಅದರಂತೆ ಮಂಗಳವಾರ ಜನವರಿ ೧೮ ರಂದು ಶ್ರೀ. ಸಂಜೀವ ಭಾಟಿ ತಮ್ಮ ಸಹಚರರೊಂದಿಗೆ ಇಲ್ಲಿ ಹನುಮಾನ ಚಾಲಿಸಾ ಪಠಣ ಮಾಡಲು ಬಂದಾಗ ಪೊಲೀಸರು ಅಲ್ಲಿ ಬ್ಯಾರಿಕೇಡಗಳನ್ನು ಇಟ್ಟಿರುವುದು ಕಂಡು ಬಂದಿದೆ. ಆಗ ಶ್ರೀ. ಭಾಟಿ ಮತ್ತು ಅವರ ಸಹಚರರು ಅಲ್ಲಿಯೇ ಕುಳಿತುಕೊಂಡು ಹನುಮಾನ ಚಾಲೀಸಾ ಪಠಣ ಮಾಡಿದರು.

ಶಾಸಕ ಅಮಾನತುಲ್ಲಾ ಖಾನ ಇವರಿಂದ ಹಿಂದೂತ್ವನಿಷ್ಠರಿಗೆ ಬೆದರಿಕೆ !

ಈ ಬಗ್ಗೆ ಶ್ರೀ. ಸಂಜೀವ ಭಾಟಿಯವರು ಮಾತನಾಡುತ್ತಾ, ಈ ಕೋಟೆ ಪುರಾತತ್ವ ಇಲಾಖೆಯ ಉಸ್ತುವಾರಿಯಲ್ಲಿ ಬರುತ್ತದೆ. ಕೋಟೆಯನ್ನು ನೋಡಲು ತಿಕೀಟು ಪಡೆಯಬೇಕಾಗುತ್ತದೆ, ಕಳೆದ ಅನೇಕ ವರ್ಷಗಳಿಂದ ಈ ಕೋಟೆಯಲ್ಲಿ ನಮಾಜಪಠಣ ಮಾಡಲಾಗುತ್ತಿದೆ. ಕೆಲವು ದಿನಗಳ ಹಿಂದೆ ಕೆಲವು ಜನರು ನಮಾಜ ಪಠಣ ಮಾಡಲು ಬರುವವರನ್ನು ತಡೆದು ಅವರಿಗೆ ತಿಕೀಟು ತೆಗೆದುಕೊಳ್ಳಲು ಹೇಳಿದ ಬಳಿಕ ಶಾಸಕ ಅಮಾನತುಲ್ಲಾ ಖಾನ ತನ್ನ ಸಹಚರರೊಂದಿಗೆ ಇಲ್ಲಿರುವ ಭದ್ರತಾ ಸಿಬ್ಬಂದಿಯನ್ನು ತಳ್ಳುತ್ತಾ ನಮಾಜಪಠಣ ಮಾಡಿದ್ದರು. ಇದು ‘ಭೂಮಿ ಜಿಹಾದ’(ಲ್ಯಾಂಡ ಜಿಹಾದ) ಪ್ರಕಾರವಾಗಿದೆ. ಈ ವಿಷಯದಲ್ಲಿ ನಾವೂ ಜನರನ್ನು ಜಾಗೃತಗೊಳಿಸುತ್ತಿದ್ದೇವೆ. ಈ ವಿಷಯದಲ್ಲಿ ಈಗಾಗಲೇ ದೂರು ನೀಡಿದ್ದೇವೆ. ನಮಗೆ ಖಾನರಿಂದ ಬೆದರಿಕೆ ಕರೆಗಳು ಬರುತ್ತಿವೆ. ಈ ವಿಷಯದಲ್ಲಿ ನಾವು ದೂರು ನೀಡುವವರಿದ್ದೇವೆ ಎಂದು ಹೇಳಿದರು. (ದೆಹಲಿಯಲ್ಲಿ ಕೇಂದ್ರ ಸರಕಾರದ, ಅಂದರೆ ಭಾಜಪ ಸರಕಾರದ ಪೊಲಿಸರಿದ್ದಾರೆ. ಈ ವಿಷಯದಲ್ಲಿ ಪೊಲಿಸರು ತಕ್ಷಣವೇ ಕ್ರಮ ಜರುಗಿಸಿ ಖಾನರನ್ನು ಕಾರಾಗೃಹಕ್ಕೆ ದಬ್ಬಲು ಸರಕಾರ ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು)