ಉತ್ತರಪ್ರದೇಶದಲ್ಲಿ ಬಿಜೆಪಿಯಿಂದ ಮುಕ್ತಗೊಳಿಸುವುದು ೧೯೪೭ ರಲ್ಲಿ ಸಿಕ್ಕಿದ್ದಕ್ಕ್ಕಿಂತಲೂ ದೊಡ್ಡ ಸ್ವಾತಂತ್ರ್ಯವಾಗಿದೆ !’ (ಅಂತೆ)

ಕಾಶ್ಮೀರದ ಪಿಡಿಪಿಯ ನಾಯಕಿ ಮೆಹಬೂಬಾ ಮುಫ್ತಿಯ ನುಡಿಮುತ್ತುಗಳು

ಮುಫ್ತಿಯವರಿಗೆ ತಾವು ಪಾರತಂತ್ರದಲ್ಲಿದ್ದೇವೆ ಎಂದು ಅನಿಸುತ್ತಿದ್ದರೆ, ಅವರು ತಮ್ಮ ನೆಚ್ಚಿನ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯವನ್ನು ಭೋಗಿಸಲು ತೊಲಗಲಿ !
ಜಮ್ಮು ಮತ್ತು ಕಾಶ್ಮೀರದ ವಿಭಜನೆಯ ಕನಸು ಕಾಣುವ ಮತ್ತು ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸುವ ಮುಫ್ತಿಯವರಂತಹ ಪ್ರವೃತ್ತಿಯನ್ನು ದೇಶದಿಂದ ತೊಡೆದುಹಾಕಬೇಕು, ಎಂದು ಜನರಿಗೆ ಅನಿಸುತ್ತದೆ !


ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶವನ್ನು ಭಾಜಪದಿಂದ ಮುಕ್ತಗೊಳಿಸುವುದು, ಇದು ೧೯೪೭ ರ ವರ್ಷಕ್ಕಿಂತ (ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದಕ್ಕಿಂತ) ದೊಡ್ಡ ಸ್ವಾತಂತ್ರ್ಯವಾಗಿದೆ; ಏಕೆಂದರೆ ಭಾಜಪ ದೇಶವನ್ನು ವಿಭಜಿಸಲು ಬಯಸುತ್ತಿದೆ, ಎಂದು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ನುಡಿಮುತ್ತನ್ನು ಉದುರಿಸಿದ್ದಾರೆ. ಉತ್ತರಪ್ರದೇಶದಲ್ಲಿ ನಡೆದ ಬುಡಕಟ್ಟು ಯುವ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

೧. ಮುಫ್ತಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾಜಪ ಅಧಿಕಾರಕ್ಕಾಗಿ ಹಿಂದೂ ಮತ್ತು ಮುಸಲ್ಮಾನರ ನಡುವೆ ದ್ವೇಷ ಸೃಷ್ಟಿಸುತ್ತಿದೆ. ಭಾಜಪದವರು ದೇಶವನ್ನು ಒಡೆಯಲು ಬಯಸುತ್ತಿದ್ದಾರೆ. (ಕಾಶ್ಮೀರವನ್ನು ದೇಶದಿಂದ ಬೇರ್ಪಡಿಸಲು ಯಾರು ಸಂಚು ಹೂಡುತ್ತಿದ್ದಾರೆ ಎಂಬುದು ಜನರಿಗೆ ತಿಳಿದಿದೆ ! – ಸಂಪಾದಕರು) ಆದ್ದರಿಂದ ದೇಶಕ್ಕೆ ಭಾಜಪದಿಂದ ಸ್ವಾತಂತ್ರ್ಯ ಬೇಕಿದೆ ಎಂದು ಹೇಳಿದರು.

೨. ಯುವಕರು ಬರವಣಿಗೆ ಮತ್ತು ಚಿಂತನೆಯ ಆಧಾರದ ಮೇಲೆ ಭಾಜಪದೊಂದಿಗೆ ಹೋರಾಡಬೇಕು. ಕಲ್ಲುಗಳು ಅಥವಾ ಬಂದೂಕುಗಳನ್ನು ಎಂದಿಗೂ ಕೈಗೆತ್ತಿಕೊಳ್ಳಬೇಡಿ. (ಸೇನೆಯ ಮೇಲೆ ಕಲ್ಲು ಎಸೆಯುವ ಜೊತೆಗೆ ನಿರಂತರವಾಗಿ ಭಯೋತ್ಪಾದಕರ ಪರ ನಿಲ್ಲುವ ಮುಫ್ತಿಯವರ ಹಾಸ್ಯಾಸ್ಪದ ಹೇಳಿಕೆ ! – ಸಂಪಾದಕರು) ಏಕೆಂದರೆ ಭಾಜಪ ಇದನ್ನೇ ಕಾಯುತ್ತಿದೆ ಎಂದು ಹೇಳಿದರು.