ಜಾಗೃತ ಹಿಂದೂಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಿದ ಪರಿಣಾಮ
ನೆಸ್ಲೆಯ ‘ಕಿಟ್‌ಕ್ಯಾಟ್’ ಚಾಕೊಲೇಟ್‌ನ ರ‍್ಯಾಪರ್ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸುವುದರ ವಿರುದ್ಧ ತಕ್ಷಣವೇ ಧ್ವನಿ ಎತ್ತಿರುವ ಜಾಗೃತ ಹಿಂದೂಗಳಿಗೆ ಅಭಿನಂದನೆಗಳು !
ನವದೆಹಲಿ : ಬಹುರಾಷ್ಟ್ರೀಯ ಸಂಸ್ಥೆ ‘ನೆಸ್ಲೆ’ ತನ್ನ ಚಾಕೊಲೇಟ್ ‘ಕಿಟ್‌ಕಾಟ್’ನ ರ‍್ಯಾಪರ್ ಮೇಲೆ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ತಾಯಿ ಸುಭದ್ರೆಯ ಚಿತ್ರಗಳನ್ನು ಮುದ್ರಿಸಿತ್ತು. ಜಾಗೃತ ಹಿಂದೂಗಳು ಇದರ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ಧ್ವನಿ ಎತ್ತಿದರು. ಇದರಿಂದ ವಿವಾದಗಳು ನಿರ್ಮಾಣವಾಗಿದ್ದರಿಂದ ‘ನೆಸ್ಲೆ’ ಕ್ಷಮೆಯಾಚಿಸಿದೆ ಮತ್ತು ಕಂಪನಿಯು ಅಂತಹ ಎಲ್ಲಾ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ.
Nestle India to remove Lord Jagannath’s picture on KitKat wrapper after facing backlash https://t.co/k3KBo18DNH
— Republic (@republic) January 19, 2022
೧. ಸಾಮಾಜಿಕ ಮಾಧ್ಯಮದವರು, ಚಾಕೊಲೇಟ್ ತಿಂದ ನಂತರ ಜನರು ಅದರ ರ‍್ಯಾಪರನ್ನು ಇತರ ಕಡೆಗಳಲ್ಲಿ ಅಥವಾ ಕಸದ ಬುಟ್ಟಿಗೆ ಎಸೆಯುತ್ತಾರೆ. ಇದರಿಂದ ಈ ರ‍್ಯಾಪರ್ ಮೇಲೆ ದೇವತೆಗಳನ್ನು ಚಿತ್ರಿಸುವುದರಿಂದ ಅವಮಾನವಾಗುತ್ತದೆ ಎಂದು ಹೇಳಿದರು.
೨. ಈ ಬಗ್ಗೆ ‘ನೆಸ್ಲೆ’ ಸ್ಪಷ್ಟೀಕರಣ ನೀಡುತ್ತಾ, ಅವರ ‘ಟ್ರಾವೆಲ್ ಬ್ರೇಕ್ ಪ್ಯಾಕ್’ನ(ಪ್ರವಾಸದಲ್ಲಿ ವಿಶ್ರಾಂತಿಯ ಸಮುದಲ್ಲಿ ತಿನ್ನಲು ನಿರ್ಮಿಸಿದ ಬಿಸ್ಕೆಟ) ನ ಉದ್ದೇಶ ಸ್ಥಳಿಯ ಡೆಸ್ಟಿನೇಶನಿಸ್‌ನ ವೈಭವಿಕರಿಸುವುದಾಗಿತ್ತು. ಅಂದರಂತೆ ಈ ಪ್ಯಾಕ್‌ನಲ್ಲಿ ಒಡಿಶಾ ಸಂಸ್ಕೃತಿಯನ್ನು ತೋರಿಸಿದ್ದರು. ಇದಕ್ಕಾಗಿ, ಅವರು ಈ ಪ್ಯಾಕ್‌ನಲ್ಲಿ ಚಿತ್ರಕಲೆಯ ವಿಶಿಷ್ಟ ಕಲೆಯ ನೋಟವನ್ನು ತೋರಿಸುವ ವಿನ್ಯಾಸಯನ್ನು ಈ ಪ್ಯಾಕ್‌ನಲ್ಲಿ ಬಳಸಿತ್ತು ಎಂದು ಹೇಳಿದೆ.
೩. ಸಂಸ್ಥೆಯು, ರ‍್ಯಾಪರನಲ್ಲಿ ಬಳಸಲಾದ ಚಿತ್ರವು ಸರಕಾರದ ಪ್ರವಾಸೋದ್ಯಮ ಜಾಲತಾಣದಿಂದ ತೆಗೆದುಕೊಳ್ಳಲಾಗಿತ್ತು. ನಮಗೆ ಈ ಕಲೆಗೆ ಸಂಬಂಧಿಸಿದ ಕಲಾವಿದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಜನರನ್ನು ಪ್ರೇರೇಪಿಸಲು ನಾವು ಬಯಸಿದ್ದೇವೆ. ಇಂತಹ ಸುಂದರ ವಿನ್ಯಾಸಗಳನ್ನು ಗ್ರಾಹಕರು ತಮ್ಮ ಬಳಿ ಇಟ್ಟುಕೊಳ್ಳುವುದು ಗಮನಕ್ಕೆ ಬಂದಿದೆ ಎಂದು ಹೇಳಿದೆ.
೪. ನೆಸ್ಲೆಯು ತನ್ನ ಕ್ಷಮೆಯಾಚನೆಯಲ್ಲಿ, ಗೊತ್ತಿಲ್ಲದೇ ಈ ತಪ್ಪಿನಿಂದ ಯಾರೊಬ್ಬರ ಭಾವನೆಗಳನ್ನು ನೋಯಿಸಿದರೆ, ಅವರು ಕ್ಷಮೆಯಾಚಿಸುತ್ತಾರೆ ಎಂದು ಹೇಳಿದೆ.