‘ದಾರುಲ ಉಲೂಮ ದೇವಬಂದ’ನ ಜಾಲತಾಣದ ವಿಚಾರಣೆ ನಡೆಸಿರಿ ! – ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದಿಂದ ಉತ್ತರಪ್ರದೇಶ ಸರಕಾರಕ್ಕೆ ಆದೇಶ

‘ದೇವಬಂದ’ನಿಂದ ಅವರ ಜಾಲತಾಣದ ಮೂಲಕ ನೀಡಲಾಗುವ ಅನಧಿಕೃತ ಫತ್ವಾಗಳ ಪ್ರಕರಣ

ಇಂತಹ ಫತ್ವಾ ಬಗ್ಗೆ ಪ್ರಗತಿ(ಅಧೋ)ಪರರು ಚಕಾರವನ್ನೂ ಎತ್ತುವುದಿಲ್ಲ, ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು !

ಈ ರೀತಿ ಆದೇಶವನ್ನು ಏಕೆ ನೀಡಬೇಕಾಗುತ್ತದೆ ? ಸರಕಾರ ತಾವಾಗಿಯೇ ಇದರ ವಿರುದ್ಧ ಏಕೆ ಕ್ರಮವನ್ನು ಜರುಗಿಸುವುದಿಲ್ಲ ?

ಲಕ್ಷ್ಮಣಪುರಿ(ಉತ್ತರಪ್ರದೇಶ) – ‘ದಾರುಲ ಉಲೂಮ ದೇವಬಂದ’ ಸಂಘಟನೆಯಿಂದ ನೀಡಲಾಗುವ ಅನಧಿಕೃತ ಮತ್ತು ದಾರಿ ತಪ್ಪಿಸುವ ಫತ್ವಾದ ಪ್ರಕರಣದಲ್ಲಿ ಅವರ ಜಾಲತಾಣವನ್ನು ಆಳವಾಗಿ ವಿಚಾರಣೆ ನಡೆಸಬೇಕು, ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗವು ಉತ್ತರಪ್ರದೇಶ ಸರಕಾರಕ್ಕೆ ಆದೇಶ ನೀಡಿದೆ. ದಾರುಲ ಉಲೂಮ ದೇವಬಂದ ಜಾಲತಾಣಗಳ ಮೇಲಿರುವ ಫತ್ವಾಗಳು ನೇರವಾಗಿ ದೇಶದ ಕಾನೂನಿನ ವಿರುದ್ಧವಿರುತ್ತದೆ, ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ಅದಕ್ಕನುಗುಣವಾಗಿ ಆಯೋಗವು ಮೇಲಿನಂತೆ ಆದೇಶ ನೀಡಿದೆ.

ಜಾಲತಾಣದ ಪರಿಶೀಲನೆಯನ್ನು ನಡೆಸಿದಾಗ ಆಯೋಗಕ್ಕೆ, ಜನರು ನೀಡಿರುವ ದೂರಿನನ್ವಯ ದೇವಬಂದನಿಂದ ನೀಡಲಾಗಿರುವ ಉತ್ತರಗಳು ದೇಶದ ಕಾನೂನು ಮತ್ತು ನಿಯಮಗಳ ಅನುಸಾರ ಇಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಕಾನೂನುವಿರೋಧಿ ಹೇಳಿಕೆಗಳು, ಹಿಂಸಾಚಾರ, ಅವ್ಯವಹಾರ, ಹಿಂಸೆ ಮತ್ತು ಮಕ್ಕಳಲ್ಲಿ ಬೇಧಭಾವ ಮಾಡುವ ಪ್ರಕರಣಗಳ ಪ್ರಸಾರವನ್ನು ತಡೆಯುವುದು ಇದಕ್ಕಾಗಿ ಜಾಲತಾಣಗಳ ಮೇಲಿರುವ ವಿಷಯಗಳನ್ನು ತೆಗೆದುಹಾಕಬೇಕು. ಅಲ್ಲಿಯವರೆಗೆ ಈ ಜಾಲತಾಣವನ್ನು ಸ್ಥಗಿತಗೊಳಿಸಬೇಕು. ಎಂದು ಹೇಳಿದೆ. ಆಯೋಗವು ರಾಜ್ಯ ಸರಕಾರಕ್ಕೆ ದಾರುಲ ಉಲೂಮ ದೇವಬಂದ ವಿರುದ್ಧ ಅಗತ್ಯವಿರುವ ಕ್ರಮವನ್ನು ಜರುಗಿಸಲು ಮತ್ತು ಮುಂದಿನ ೧೦ ದಿನಗಳಲ್ಲಿ ಕ್ರಮ ಜರುಗಿಸಿ ವರದಿಯನ್ನು ಒಪ್ಪಿಸುವಂತೆ ಆದೇಶಿಸಿದೆ.