ತಮಿಳುನಾಡಿನಲ್ಲಿ ಹಿಂದೂ ದೇವತೆಗಳ ೫ ಮೂರ್ತಿಯನ್ನು ಧ್ವಂಸಗೊಳಿಸಿದ ಮತಾಂಧ ಕ್ರೈಸ್ತನ ಬಂಧನ !

  • ಕ್ರೈಸ್ತ ಮೂರ್ತಿ ಧ್ವಂಸಗೊಳಿಸಿದವನನ್ನು ಬಂಧಿಸಲು ಪೊಲಿಸರ ಉದಾಸೀನತೆ !

  • ಹಿಂದೂ ಮುನ್ನಾನಿ (ಹಿಂದೂ ಮುಂಚೂಣಿ) ಸಂಘಟನೆಯು ಆಂದೋಲನ ಮಾಡಿದನಂತರ ಕ್ರೈಸ್ತನ ಬಂಧನ !

ತಮಿಳುನಾಡಿನಲ್ಲಿ ಹಿಂದೂದ್ವೇಷಿ ದ್ರಮುಕ ಸರಕಾರ ಇರುವುದರಿಂದ ಅಲ್ಲಿ ಹಿಂದೂ ದೇವತೆಗಳ ಮೂರ್ತಿಗಳನ್ನು ಭಗ್ನಗೊಳಿಸುವ ಘಟನೆ ಹೆಚ್ಚಾಗುತ್ತಿದೆ. ಅಲ್ಲಿ ಹಿಂದೂ ಧರ್ಮದ ಮೇಲಿನ ಆಘಾತವನ್ನು ತಡೆಯಲು ಹಿಂದೂಗಳ ಪರಿಣಾಮಕಾರಕ ಸಂಘಟನೆ ಅವಶ್ಯಕವಾಗಿದೆ !

ದೇವತೆಗಳ ಮೂರ್ತಿಯನ್ನು ಧ್ವಂಸಗೊಳಿಸುವ ಕ್ರೈಸ್ತನನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದ ಕ್ರೈಸ್ತಪ್ರೇಮಿ ಪೊಲಿಸ ಹಿಂದೂಗಳ ರಕ್ಷಣೆ ಏನು ಮಾಡುವರು ?

ಚೆನ್ನೈ : ತಮಿಳುನಾಡಿನಲ್ಲಿ ದಿಂಡಿಗುಲ ಜಿಲ್ಲೆಯ ವಡಾಮಡ್ಡುರಾಯಿಯ ಶ್ರೀ ಗಣೇಶ ದೇವಸ್ಥಾನದ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸುವ ಬಾಲಕೃಷ್ಣನ್ ಹೆಸರಿನ ಮತಾಂತರಗೊಂಡ ಕ್ರೈಸ್ತ ವ್ಯಕ್ತಿಯನ್ನು ಬಂಧಿಸಲಾಯಿತು. ಬಾಲಕೃಷ್ಣನ್ ಶ್ರೀ ಗಣೇಶನ ಮೂರ್ತಿ, ನಾಗದೇವತೆಯ ೪ ಮೂರ್ತಿ ಹೀಗೆ ಒಟ್ಟು ೫ ಮೂರ್ತಿಗಳನ್ನು ಭಗ್ನಗೊಳಿಸಿದನು. ಅವನು ಇದೇ ದೇವಸ್ಥಾನದ ಪಕ್ಕದಲ್ಲಿರುವ ವೀರಭದ್ರ ಮತ್ತು ರಾವಣೇಶ್ವರ ಮಂದಿರದ ವಿದ್ಯುತ್ ಯಂತ್ರವನ್ನು ನಾಶಗೊಳಿಸಿದನು. ಬಾಲಕೃಷ್ಣನ್ ಇವನನ್ನು ಬಂಧಿಸಲು ಪೊಲಿಸರು ಉದಾಸೀನತೆ ತೋರಿಸಿದ್ದರು; ಆದರೆ ಹಿಂದೂ ಮುನ್ನಾನಿ ಸಂಘಟನೆಯು ಪ್ರತಿಭಟಿಸಿದ ಬಳಿಕ ಪೊಲಿಸರು ಅವನನ್ನು ಬಂಧಿಸಿದರು.

ಮತಾಂತರಗೊಂಡ ಕ್ರೈಸ್ತನು ಮೂರ್ತಿ ಭಗ್ನಗೊಳಿಸಿರುವ ಸುದ್ದಿಯನ್ನು ಪ್ರಸಾರ ಮಾಡಲು ಮಾಧ್ಯಮಗಳು ಹಿಂದೆ ಮುಂದೆ ನೋಡಿದವು !

ಇಂತಹ ಪ್ರಸಾರ ಮಾಧ್ಯಮಗಳ ಮೇಲೆ ಹಿಂದೂಗಳು ಬಹಿಷ್ಕರಿಸಿದರೆ ಆಶ್ಚರ್ಯವೇನು ?

ತಮಿಳುನಾಡಿನ ಕೇವಲ ದಿನಾಮಲಾರ ದಿನಪತ್ರಿಕೆಯು ‘ಬಾಲಕೃಷ್ಣನ್ ಮತಾಂತರಗೊಂಡ ಕ್ರೈಸ್ತ ಆಗಿದ್ದಾನೆ’, ಎಂದು ಮಾಹಿತಿ ನೀಡಿದರು; ಆದರೆ ಇತರೆ ಪ್ರಸಾರ ಮಾಧ್ಯಮಗಳು ಈ ಅಂಶಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಹಾಕಿದವು. ತಮಿಳುನಾಡಿನಲ್ಲಿ ಈ ಮೊದಲೂ ಮೂರ್ತಿ ಭಗ್ನಗೊಳಿಸಿರುವ ಅನೇಕ ಪ್ರಕರಣಗಳು ನಡೆದಿವೆ; ಆದರೆ ಅದಕ್ಕೆ ಮತಾಂಧರು ಜವಾಬ್ದಾರರಾಗಿದ್ದರೂ, ಕೆಲವು ನಿರ್ದಿಷ್ಟ ಸುದ್ದಿ ಜಾಲತಾಣಗಳನ್ನು ಹೊರತುಪಡಿಸಿದರೆ, ಪ್ರಸಾರ ಮಾಧ್ಯಮಗಳು ಆ ವಿಷಯದಲ್ಲಿ ಬರೆಯಲು ಹಿಂದೆ ಮುಂದೆ ನೋಡುತ್ತಾರೆ.

ತಮಿಳುನಾಡಿನಲ್ಲಿ ಮೂರ್ತಿ ಭಗ್ನಗೊಳಿಸುವ ಘಟನೆಗಳು ಹೆಚ್ಚುತ್ತಿದೆ

೧. ಜೂನ ೨೧, ೨೦೨೧ : ಪುಡುಕೊಟ್ಟಾಯಿ ಜಿಲ್ಲೆಯ ಶಿವಮಂದಿರದಲ್ಲಿ ಶಿವಲಿಂಗ ಹಾಗೆಯೇ ಮಾತಾ ಪಾರ್ವತಿ, ಶ್ರೀ ಗಣೇಶ ಮತ್ತು ನಂದಿಯ ಮೂರ್ತಿಗಳ ಧ್ವಂಸ

೨. ಜೂನ ೩೦, ೨೦೨೧ : ವೆಲ್ಲಿಪೂರಮ್‌ನಲ್ಲಿರುವ ಅಮ್ಮನದೇವಿಯ ಮೂರ್ತಿಯ ಧ್ವಂಸ

೩. ಜುಲೈ ೨೫, ೨೦೨೧ : ಮತಾಂಧರು ರಾಣಿಪೇಠನಲ್ಲಿನ ೧ ಸಾವಿರ ೫೦೦ ವರ್ಷಗಳನ್ನು ಹಳೆಯ ದೇವಸ್ಥಾನದ ಶ್ರೀ ಅಮ್ಮನದೇವಿ ಮತ್ತು ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿನ ವಸ್ತ್ರವನ್ನು ಹರಿದರು ಮತ್ತು ಮೂರ್ತಿಯ ಮೇಲೆ ವೀರ್ಯವನ್ನು ಚೆಲ್ಲಿದರು.

೪. ಸಪ್ಟೆಂಬರ ೭, ೨೦೨೧ : ಪೆರಾಲಂಬೂರನಲ್ಲಿ ಮತಾಂಧನು ಯಾತ್ರೆಯ ಸಮಯದಲ್ಲಿ ದೇವತೆಯ ಮೂರ್ತಿಯ ಮೆರವಣಿಗೆಗಾಗಿ ಉಪಯೋಗಿಸಲಾಗುವ ೨ ರಥಗಳಿಗೆ ಬೆಂಕಿ ಹಚ್ಚಿದನು.

೫. ಅಕ್ಟೋಬರ ೭, ೨೦೨೧ : ಸಿರೂವಾಚೂರನಲ್ಲಿ ೯ ಮೂರ್ತಿಗಳ ಧ್ವಂಸ