ಜಾರಿ ನಿರ್ದೇಶನಾಲಯದಿಂದ ೪೮ ಲಕ್ಷ ರೂಪಾಯಿಗಳ ಸಂಪತ್ತು ವಶಕ್ಕೆ !
|
ನವದೆಹಲಿ – ಹಣಕ್ಕಾಗಿ ಚೀನಾ ಗೂಢಚಾರರಿಗೆ ಭಾರತದ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ಪೂರೈಸಿರುವ ಸ್ವತಂತ್ರ್ಯ ಪತ್ರಕರ್ತ ರಾಜೀವ ಶರ್ಮಾ ಇವನ ೪೮ ಲಕ್ಷ ರೂಪಾಯಿಗಳ ಸಂಪತ್ತು ಜಾರಿ ನಿರ್ದೇಶನಾಲಯ(ಇ.ಡಿ) ವಶಕ್ಕೆ ಪಡೆಯಿತು. ಈ ಪ್ರಕರಣವನ್ನು ಅವನ ವಿರುದ್ಧ ಪೊಲಿಸರು ದೂರು ದಾಖಲಿಸಿದ್ದಾರೆ. ಶರ್ಮಾರ ಕೃತ್ಯವನ್ನು ರಾಷ್ಟ್ರೀಯ ಭದ್ರತೆಯೊಂದಿಗೆ ಹೊಂದಾಣಿಕೆ ಮಾಡುವವರಾಗಿದ್ದಾರೆ, ಎಂದು ಪೊಲಿಸರು ದೂರಿನಲ್ಲಿ ತಿಳಿಸಿದ್ದಾರೆ.
ED seizes assets worth Rs 48 lakhs from journalist Rajeev Sharma in Chinese espionage casehttps://t.co/6A3zGVCwgj
— OpIndia.com (@OpIndia_com) January 16, 2022
೧. ಝಂಗ ಚೆಂಗ ಅಲಿಯಾಸ್ ಸೂರಜ, ಝಂಗ ಲಕ್ಸಿಯಾ ಅಲಿಯಾಸ್ ಉಷಾ, ಕ್ವಿಂಗ ಶೀ ಈ ಚೀನಿ ನಾಗರಿಕರು ಅಲ್ಲದೇ ಶೇರ ಸಿಂಹ ಅಲಿಯಾಸ್ ರಾಜ ಬೊಹರಾ ಈ ನೇಪಾಳಿ ನಾಗರಿಕ, ಹೀಗೆ ನಾಲ್ವರು ದೆಹಲಿಯ ಮಹಿಪಾಲಪೂರದಲ್ಲಿ ‘ಶೆಲ್’ ಈ ಕಂಪನಿಯನ್ನು ನಡೆಸುತ್ತಿದ್ದರು. ಚೀನಾ ಗೂಢಚಾರರಿಂದ ಈ ಕಂಪನಿಗೆ ಹಾಗೂ ಈ ಕಂಪನಿಯಿಂದ ಶರ್ಮಾನಿಗೆ ಹಣ ಪೂರೈಸಲಾಗುತ್ತಿತ್ತು. ಶರ್ಮಾನಿಗೆ ಕೆಲವೊಮ್ಮೆ ಹಣದ ರೂಪದಲ್ಲಿ ಮತ್ತೆ ಕೆಲವೊಮ್ಮೆ ಮಿತ್ರರ ಮಾಧ್ಯಮದಿಂದ ಹಣವನ್ನು ಪೂರೈಸಲಾಗುತ್ತಿತ್ತು. (ಈ ಮಾಹಿತಿ ಗೂಢಚಾರ ಇಲಾಖೆಗೆ ಹೇಗೆ ಸಿಕ್ಕಿರಲಿಲ್ಲ ? ಈ ಕಂಪನಿಗೆ ಅನುಮತಿ ನೀಡುವ ಅಧಿಕಾರಿ ಮತ್ತು ಪೊಲಿಸರ ವಿಚಾರಣೆಯನ್ನು ಸರಕಾರ ಮಾಡಬೇಕು !- ಸಂಪಾದಕರು)
೨. ಶರ್ಮಾನು ಸ್ವತಂತ್ರ ವರದಿಗಾರಿಕೆ ಮಾಡುತ್ತಿದ್ದ. ಕಳೆದ ೨ ದಶಕಗಳಿಂದ ಅವನು ‘ದಿ ಕ್ವೀಂಟ’, ‘ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ’, ‘ದಿ ಟ್ರಿಬ್ಯೂನ’, ‘ಫ್ರೀ ಪ್ರೆಸ್ ಜರ್ನಲ್’, ‘ಸಕಾಳ’ ಮುಂತಾದ ಹೆಸರಾಂತ ವಾರ್ತಾಪತ್ರಿಕೆಗಳಿಗೆ ‘ಭದ್ರತೆ ಮತ್ತು ವಿದೇಶ ವ್ಯವಹಾರ’ ಈ ವಿಷಯದ ಮೇಲೆ ವರದಿಗಾರಿಕೆಯನ್ನು ಮಾಡಿದ್ದನು. ಅವನು ಚೀನಾದ ಕಮ್ಯುನಿಸ್ಟ ಪಕ್ಷದ ಮುಖವಾಣಿ ‘ಗ್ಲೋಬಲ ಟೈಮ್ಸ’ ಪತ್ರಿಕೆಗೂ ಅನೇಕ ಬಾರಿ ಅಂಕಣವನ್ನು ಬರೆದಿದ್ದಾನೆ.