ನಕ್ಸಲರಿಗೆ ನಿಧಿ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಕ್ಕಾಗಿ ಬಾಂಗ್ಲಾದೇಶದ ನುಸುಳುಕೋರ ಮಹಿಳೆಯನ್ನು ದೆಹಲಿಯಿಂದ ಬಂಧನ!

ಬಾಂಗ್ಲಾದೇಶದ ನುಸುಳುಕೋರರು ಭಾರತದಲ್ಲಿ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ, ಎಂಬುದಕ್ಕೆ ಮತ್ತೊಂದು ಉದಾಹರಣೆ !

* ಬಾಂಗ್ಲಾದೇಶದ ನುಸುಳುಕೋರರು ಇಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಮತ್ತು ಭಾರತೀಯ ಆಡಳಿತ, ಪೊಲೀಸ್ ಮತ್ತು ಭದ್ರತಾ ವ್ಯವಸ್ಥೆಗಳಿಗೆ ಅವರು ಎಲ್ಲಿದ್ದಾರೆಂದು ತಿಳಿದಿಲ್ಲ, ಇದು ನಾಚಿಕೆಗೇಡಿನಸಂಗತಿ !

* ನಕ್ಸಲರೊಂದಿಗಿನ ಬಾಂಗ್ಲಾದೇಶದ ನುಸುಳುಕೋರರ ಹಿತಸಂಬಂಧಗಳನ್ನು ಪರಿಗಣಿಸಿದರೆ ಜಿಹಾದಿ ಭಯೋತ್ಪಾದನೆಯಷ್ಟೇ ನಕ್ಸಲರಸಮಸ್ಯೆಯು ಗಂಭೀರವಾಗಿ ಪರಿಣಮಿಸಿದೆ ಮತ್ತು ಅದನ್ನು ನಿರ್ಮೂಲನೆ ಮಾಡಲು ಸರಕಾರವು ಅಭಿಯಾನವನ್ನು ಹಮ್ಮಿಕೊಳ್ಳುವುದು ಅಗತ್ಯ !

ರಾಂಚಿ – ನಕ್ಸಲೀಯರಿಗೆ ನಿಧಿ ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ ಬಾಂಗ್ಲಾದೇಶದ ನುಸುಳುಕೋರ ಮಹಿಳೆಯನ್ನು ಜಾರ್ಖಂಡ್ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ. ಈ ಮಹಿಳೆಯಿಂದ 71 ಲಕ್ಷ ರೂಪಾಯಿ ನಗದು ಹಾಗೂ ಎರಡು ದುಬಾರಿ ಚತುಷ್ಚಚಕ್ರವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಾಂಗ್ಲಾದೇಶಿಮಹಿಳೆಯ ಹೆಸರು ಕನಿಜ್ ಫಾತಿಮಾ ಆಗಿದ್ದು, 7 ವರ್ಷಗಳ ಹಿಂದೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದಳು.

ಈ ಮಹಿಳೆ ತನ್ನ ಹೆಸರನ್ನು ಅಂಜಲಿ ಪಟೇಲ್ ಎಂದು ಬದಲಾಯಿಸಿಕೊಂಡಿದ್ದಳು. ಕೆಲಕಾಲ ಬೆಂಗಳೂರಿನಲ್ಲಿ ನೆಲೆಸಿದ್ದ ಆಕೆ ಆ ಬಳಿಕ ದೆಹಲಿಯಲ್ಲಿ ನೆಲೆಸಿದ್ದಳು. ದೆಹಲಿಯಲ್ಲಿ ಆಕೆ ನಿವೇಶ್ ಕುಮಾರ್ ಎಂಬ ನಕ್ಸಲನ ಸಂಪರ್ಕಕ್ಕೆ ಬಂದಳು. ಅವಳು ನಿವೇಶ್ ಕುಮಾರ್ ಅವರ ನಿಕಟ ಸಹವರ್ತಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದಳು. ನಿವೇಶ ಕುಮಾರನನ್ನು ನಿಷೇಧಿತ ನಕ್ಸಲೀಯ ಗುಂಪು `ಪಿ.ಎಲ್.ಎಫ್.ಐ.’ಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ನಿವೇಶಕುಮಾರ ಬಿಹಾರದ ನಿವಾಸಿಯಾಗಿದ್ದು, ಆತರಾಂಚಿಯಲ್ಲಿ ವಾಸಿಸುತ್ತಿದ್ದನು, ಎಂದು ರಾಂಚಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.