|
|
ಲಕ್ಷ್ಮಣಪುರಿ (ಉತ್ತರಪ್ರದೇಶ) – ಸಮಾಜವಾದಿ ಪಕ್ಷವು ಉತ್ತರಪ್ರದೇಶ ವಿಧಾನಸಭೆಯ ಚುನಾವಣೆಯ ದೃಷ್ಟಿಯಿಂದ ಅನೇಕ ಚಿಕ್ಕ ಪಕ್ಷಗಳ ಜೊತೆ ಚುನಾವಣೆಯ ಮುನ್ನ ಮೈತ್ರಿ ಮಾಡಿಕೊಂಡಿದ್ದು ರಾಜ್ಯದ ಕೆಲವು ಸ್ಥಳಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ. ಅದರಲ್ಲಿ ಮಾಜಿ ಶಾಸಕ ನಾಹಿದ ಹಸನ ಗೂಂಡಾ ಕೂಡ ಇದ್ದೂ ಆತನ ವಿರುದ್ಧ ಅನೇಕ ಅಪರಾಧಗಳು ದಾಖಲಾಗಿವೆ. ಇದರೊಂದಿಗೆ ‘ಎರಡನೇ ಕಾಶ್ಮೀರ’ವೆಂದು ಹೆಸರುವಾಸಿಯಾಗಿರುವ ಕೈರಾನಾ ಗ್ರಾಮದ ಹಿಂದೂಗಳನ್ನು ಪಲಾಯನ ಗೈಯ್ಯುವಂತೆ ಮಾಡಿದ ಸಂಚಿನ ರುವಾರಿ (ಮಾಸ್ಟರಮೈಂಡ್) ಎಂದು ಹಸನ ಆಗಿದ್ದ ಎಂದು ಹೇಳಲಾಗುತ್ತಿದೆ. ಭಾಜಪವು ನಾಹಿದ ಹಸನ ಇವನ ಅಭ್ಯರ್ಥಿಯನ್ನಾಗಿ ಮಾಡಿರುವ ಸಮಾಜವಾದಿ ಪಕ್ಷದ ನಿರ್ಧಾರಕ್ಕೆ ‘ಜಿನ್ನಾವಾದ’ ಎಂದಿದೆ.
कैराना से हिन्दुओं के पलायन के मास्टरमाइंड गैंगस्टर नाहिद हसन और रफीक अंसारी को सपा ने फिर दिया टिकट, भाजपा ने बताया- ‘जिन्नावाद’#SamajwadiParty #UttarPradeshElection2022 #AkhileshYadavhttps://t.co/jQc3NomXfR
— ऑपइंडिया (@OpIndia_in) January 14, 2022
ನಾಹಿದ ಹಸನನು ಈ ಪ್ರದೇಶದ ಶಾಸಕನಾಗಿದ್ದನು. ಆತನ ತಾಯಿ ತಬಸ್ಸುಮ ಇವರು ಮಾಜಿ ಸಂಸದೆ ಆಗಿದ್ದರು. ಇವರಿಬ್ಬರ ವಿರೋಧದಲ್ಲಿ ಕಳೆದ ಜನವರಿ ತಿಂಗಳಿನಲ್ಲಿ ಪೊಲೀಸರು ‘ಉತ್ತರ ಪ್ರದೇಶ ಗೂಂಡಾ ಮತ್ತು ಸಮಾಜವಿರೋಧಿ ತತ್ತ್ವ ತಡೆಗಟ್ಟುವಿಕೆ’ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಂಡಿದ್ದರು. ಹಸನ ೧ ತಿಂಗಳು ಸೆರೆಮನೆಯಲ್ಲಿದ್ದನು. ಸಧ್ಯ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ.
ಇನ್ನೊಂದೆಡೆ ಪಶ್ಚಿಮ ಉತ್ತರ ಪ್ರದೇಶದಲ್ಲಿ ಮೇರಟ ನಗರದಿಂದ ಸಮಾಜವಾದಿ ಪಕ್ಷವು ರಫೀಕ್ ಅನ್ಸಾರಿ ಈ ಗೂಂಡಾನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಆತನ ವಿರುದ್ಧವೂ ಅನೇಕ ಅಪರಾಧಗಳು ದಾಖಲಾಲಾಗಿದೆ.