ಗಣರಾಜ್ಯ ದಿನಾಚರಣೆ ಹಿನ್ನಲೆಯಲ್ಲಿ ದೆಹಲಿಯ ಗಾಜಿಪುರದಲ್ಲಿ ಸ್ಪೋಟಕ ಪತ್ತೆ !

ಸ್ವಾತಂತ್ರ್ಯದ ೭೪ ವರ್ಷಗಳ ನಂತರವೂ ಗಣರಾಜ್ಯ ದಿನಾಚರಣೆದಂದು ಜಿಹಾದಿ ಉಗ್ರರ ಕರಿನೆರಳಿನಲ್ಲಿಯೇ ಆಚರಿಸಲಾಗುತ್ತಿರುವುದು, ಇದು ಈವರೆಗಿನ ಎಲ್ಲಾ ಪಕ್ಷಗಳ ಸರಕಾರಕ್ಕೆ ನಾಚಿಕೆಗೇಡು !

ನವದೆಹಲಿ – ದೇಶದ ೭೨ ನೇ ಗಣರಾಜ್ಯ ದಿನಾಚರಣೆ ಕೇವಲ ಕೆಲವೇ ದಿನಗಳು ಇರುವಾಗ ರಾಜಧಾನಿ ದೆಹಲಿಯಲ್ಲಿ ಗಾಜಿಪೂರ ಇಲ್ಲಿಯ ಹೂವಿನ ಮಾರುಕಟ್ಟೆಯಲ್ಲಿ ‘ಐಇಡಿ’ (ಇಂಪ್ರೋವೈಸ್ಡ ಎಕ್ಸಪ್ಲೊಸಿವ ಡಿವೈಸ್) ಸ್ಪೋಟಕದಿಂದ ತುಂಬಿರುವ ಒಂದು ಬ್ಯಾಗ ಪತ್ತೆಯಾಗಿದೆ. ಘಟನೆಯ ಬಗ್ಗೆ ಮಾಹಿತಿ ಸಿಗುತ್ತಲೇ ದೆಹಲಿ ಪೊಲೀಸ್, ವಿಶೇಷ ಪಡೆ, ಉಗ್ರ ನಿಗ್ರಹ ದಳ ಮತ್ತು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಇತರ ಸುರಕ್ಷಾ ವ್ಯವಸ್ಥೆ ಘಟನಾ ಸ್ಥಳಕ್ಕೆ ತಲುಪಿದರು. ಸ್ಪೋಟಕಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಸಿ ನಿಷ್ಕ್ರಿಯಗೊಳಿಸಲಾಗಿದೆ. ಗಾಜಿಪೂರ್ ಇಲ್ಲಿನ ಮಾರುಕಟ್ಟೆಯಲ್ಲಿ ಸ್ಪೋಟಕ ಹೇಗೆ ಬಂತು, ಯಾರು ತಂದರು, ಇದರ ಹುಡುಕಾಟ ನಡೆಸಲು ಪೊಲೀಸರು ಆರಂಭಿಸಿದ್ದಾರೆ.

ದೆಹಲಿ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಜನವರಿ ೧೪ ರಂದು ಬೆಳಿಗ್ಗೆ ಪೊಲೀಸರಿಗೆ ಒಂದು ದೂರವಾಣಿ ಕರೆ ಬಂದಿತ್ತು. ಅದರಲ್ಲಿ ಈ ಸ್ಫೋಟಕದ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ಪೊಲೀಸರು ಮತ್ತು ಭದ್ರತಾ ಪಡೆಯು ಸ್ಫೋಟಕದ ಹುಡುಕಾಟ ನಡೆಸಿದ್ದರು.