ಮುಸ್ಲಿಂ ವರನು ‘ಕೊರಗಜ್ಜ’ ದೇವರ ವೇಷ ಹಾಕಿದ್ದ ಪ್ರಕರಣದಲ್ಲಿ ಇಬ್ಬರು ಮತಾಂಧರನ್ನು ಬಂಧಿಸಿದ ದಕ್ಷಿಣ ಕನ್ನಡ ಪೊಲೀಸರು !

ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹಿಂದೂಗಳು ದೂರಿದ್ದರು * ಹಿಂದೂ ಜನಜಾಗೃತಿ ಸಮಿತಿಯಿಂದ ನಗರ ಬಂದ್‌ಗೆ ಕರೆ !

ಮಂಗಳೂರು (ಕರ್ನಾಟಕ) – ಮತಾಂಧ ವರನೊಬ್ಬನು ’ಕೊರಗಜ್ಜ’ ದೇವರ ವೇಷತೊಟ್ಟ ಪ್ರಕರಣಕ್ಕೆ ಸಂಬಮಧಿಸಿದಂತೆ ಇಬ್ಬರು ಮತಾಂಧರನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ. ಕೊರಗಜ್ಜ ಸ್ಥಳೀಯ ದೇವತೆಯಾಗಿದ್ದು ಶಿವನ ಅವತಾರವೆಂದು ನಂಬುತ್ತಾರೆ. ಮತಾಂಧ ವರನು ವಿಟ್ಲಾ ನಗರದಲ್ಲಿ ಕೊರಗಜ್ಜ ದೇವರ ವೇಷ ಧರಿಸಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅರ್ಧ ದಿನದ ಬಂದ್‌ಗೆ ಕರೆ ನೀಡಿತ್ತು. ಬಂಧಿತರಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯ ಅಹ್ಮದ್ ಮುಜಿತಾಬ್ ಮತ್ತು ಬಾಯಾರು ಪದವು ನಿವಾಸಿ ಮೊಯ್ದಿನ್ ಮುನೀಶ್ ಸೇರಿದ್ದಾರೆ. ಇಬ್ಬರೂ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪವಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜನವರಿ ೬, ೨೦೨೨ ರಂದು ತನ್ನ ಮದುವೆ ಸಮಾರಂಭದಲ್ಲಿ, ಕೇರಳದ ಉಪ್ಪಳನ ಉಮರುಲ್ಲಾ ಬಾಶಿತ್ ಈ ಮುಸಲ್ಮಾನ ವರನು ‘ಕೊರಗಜ್ಜ’ ದೇವರ ವೇಷದಲ್ಲಿ ಕರ್ನಾಟಕದ ವಿಟ್ಲನಲ್ಲಿರುವ ವಧುವಿನ ಮನೆಗೆ ಬಂದಿದ್ದ. ಎರಡು ಧಾರ್ಮಿಕ ಗುಂಪುಗಳು ಉದ್ದೇಶಪೂರ್ವಕವಾಗಿ ದ್ವೇಷ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಘಟನೆಯ ವಿರುದ್ಧ ವಿಶ್ವ ಹಿಂದೂ ಪರಿಷತ್ ಕೂಡ ಪ್ರತಿಭಟನೆ ನಡೆಸಿದೆ.

ಚಿತ್ರ ಪ್ರಕಟಿಸುವುದರ ಹಿಂದೆ ಯಾವುದೇ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶವಾಗಿರದೆ ನಿಜ ಸ್ಥಿತಿಯನ್ನು ತಿಳಿಸುವುದಾಗಿದೆ