ಈಗ ಕೇವಲ ಹೇಳಿಕೆ ಮಾತ್ರವಲ್ಲ, ಸಕ್ಷಮ ಸೇನಾಪ್ರಮುಖರ ನೇತೃತ್ವದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಪ್ರತ್ಯಕ್ಷ ಕೃತಿ ಮಾಡಬೇಕು ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !
ನವದೆಹಲಿ – ಗಡಿ ಪ್ರದಶದಲ್ಲಿ ಪಾಕಿಸ್ತಾನದ ಕುತಂತ್ರವು ನಡೆಯುತ್ತಲೇ ಇದೆ. ಭಯೋತ್ಪಾದಕರಿಂದ ಪದೇಪದೇ ನುಸುಳುವಿಕೆಯ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಯತ್ನಗಳನ್ನು ಭಾರತೀಯ ಸೈನಿಕರು ವಿಫಲಗೊಳಿಸಲು ಪ್ರಯತ್ನಿಸುತ್ತಿದ್ದರೂ ಇದರಿಂದ ಪಾಕಿಸ್ತಾನದ ಅಡಗಿರುವ ಅಜೆಂಡಾ (ಧೋರಣೆ) ಸಾಬೀತಾಗುತ್ತಿರುವುದು ಕಂಡುಬರುತ್ತದೆ, ಎಂಬ ಹೇಳಿಕೆಯನ್ನು ಭಾರತದ ಸೇನಾ ಪ್ರಮುಖರಾದ ಮನೋಜ ನರವಣೆಯವರು ಭಾರತದ ಭೂಮಿಕೆಯನ್ನು ಸ್ಪಷ್ಟಪಡಿಸುವಾಗ ನೀಡಿದ್ದಾರೆ. ಭಯೋತ್ಪಾದನೆಯ ಅಂಶದ ಮೇಲೆ ನರವಣೆಯವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುತ್ತ ‘ನಮಗೆ ಕಾರ್ಯಾಚರಣೆ ಮಾಡಲು ಒತ್ತಡ ಹೇರಿದರೆ ದೊಡ್ಡ ಬೆಲೆಯನ್ನು ತೆರ ಬೇಕಾಗಬಹುದು’ ಎಂದು ಸೇನಾಪ್ರಮುಖ ನರವಣೆಯವರು ಪಾಕಿಸ್ತಾನವನ್ನು ಉದ್ದೇಶಿಸಿ ಹೇಳಿದ್ದಾರೆ.
ಭಾರತ ಮತ್ತು ಚೀನಾದ ನಡುವೆ 14ನೇ ಸೈನ್ಯ ಮಟ್ಟದಲ್ಲಿನ ಚರ್ಚೆಯನ್ನು ಆಯೋಜಿಸಲಾಗಿತ್ತು. ಈ ಚರ್ಚೆಯಲ್ಲಿ ಸೇನಾಪ್ರಮುಖ ನರವಣೆಯವರೂ ಸಹಭಾಗಿಯಾಗಿದ್ದರು. ಈ ಸಮಯದಲ್ಲಿ ಅವರು ತೆಗೆದುಕೊಂಡ ಪತ್ರಿಕಾ ಪರಿಷತ್ತಿನಲ್ಲಿ ಗಡಿಭಾಗದಲ್ಲಿನ ನುಸುಳುವಿಕೆ ಮತ್ತು ಪಾಕಿಸ್ತಾನ, ಹಾಗೆಯೇ ಚೀನಾದೊಂದಿಗಿನ ಭಾರತದ ಸಂಬಂಧದ ಬಗ್ಗೆ ತಮ್ಮ ಭೂಮಿಕೆಯನ್ನು ಸ್ಪಷ್ಟಪಡಿಸಿದರು.
ಜನರಲ ನರವಣೆಯವರು ಹೀಗೆ ಹೇಳಿದ್ದಾರೆ,
1. ಚೀನಾದ ಕಡೆಯಲ್ಲಿರುವ ಗಡಿರೇಖೆಯಲ್ಲಿನ ಭಾರತೀಯ ಸೈನ್ಯವು ಯಾವುದೇ ಕಾರ್ಯಾಚರಣೆಯನ್ನು ಮಾಡಲು ಸಿದ್ಧವಿದೆ.
2. ಕಳೆದ ವರ್ಷ ಜನವರಿ ತಿಂಗಳಿನಿಂದ ಉತ್ತರ ಮತ್ತು ಪಶ್ಚಿಮದಲ್ಲಿನ ಗಡಿಭಾಗದಲ್ಲಿ ಸಕಾರಾತ್ಮಕ ಘಟನೆಗಳು ನಡೆಯುತ್ತಿವೆ. ಒಂದು ಕಡೆಯಲ್ಲಿ ನಾವು ಚರ್ಚೆಯ ಮಾರ್ಗದಿಂದ ಶಾಂತಿಯನ್ನು ತರಲು ಪ್ರಯತ್ನಿಸುತ್ತಿರುವಾಗಲೇ ಉತ್ತರದ ಗಡಿಭಾಗದಲ್ಲಿನ ಭಾರತೀಯ ಸೈನ್ಯ ಯಾವುದೇ ರೀತಿಯ ಕಾರ್ಯಾಚರಣೆಗಾಗಿ ಸಿದ್ಧವಾಗಿದೆ.