ಸರಕಾರ ತನಿಖೆ ನಡೆಸಲಿದೆ !
|
ನವ ದೆಹಲಿ – ಶಾವೊಮಿ, ಒಪ್ಪೊ ಮತ್ತು ವಿವೋ ಈ ಚೀನಾ ಸಂಚಾರವಾಣಿ ಕಂಪನಿಯು ಭಾರತದಲ್ಲಿ ೧ ಲಕ್ಷ ಕೋಟಿ ರೂಪಾಯಿಯ ಗಳಿಸಿದೆ ಆದರೂ ಒಂದೇ ಒಂದು ರೂಪಾಯಿ ತೆರಿಗೆ ನೀಡಡಿರುವ ಖೇದಕರ ಘಟನೆ ಬೆಳಕಿಗೆ ಬಂದಿದೆ. ಆದ್ದರಿಂದ ಭಾರತ ಸರಕಾರ ಈಗ ಈ ಪ್ರಕರಣದ ಆಳವಾಗಿ ತನಿಖೆ ನಡೆಸಲಿದೆ.
Xiaomi, Oppo face Rs 1,000 crore fine for I-T norms violations https://t.co/m8j0TEztkG pic.twitter.com/LM8Zj56bkM
— The Times Of India (@timesofindia) December 31, 2021
ಭಾರತದಲ್ಲಿ ತೆರಿಗೆ ನೀಡದೆ ಚೀನಾ ಕಂಪನಿ ಅದರ ಉತ್ಪಾದನೆಯ ಮಾಹಿತಿ ಮತ್ತು ಲಾಭ ಮುಚ್ಚಿಟ್ಟಿರುವ ಆರೋಪ ಮಾಡಲಾಗುತ್ತಿದೆ. ಈ ಕಂಪನಿಯು ಸಂಚಾರ ವಾಣಿಯ ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದರೂ ಕಂಪನಿ ನಷ್ಟದಲ್ಲಿದೆ ಎಂದು ಸರಕಾರಕ್ಕೆ ಹೇಳುತ್ತಿದೆ. ಇದರ ಜೊತೆಗೆ ಓರ್ವ ಹಿರಿಯ ಅಧಿಕಾರಿ, ಕಳೆದ ವರ್ಷ ಚಿನಾ ಕಂಪನಿಯು ನಡೆಸಿರುವ ಆರ್ಥಿಕ ವರದಿಯ ಪ್ರಾರ್ಥಮಿಕ ಮೂಲ್ಯಾಂಕನದಲ್ಲಿ ವ್ಯತ್ಯಾಸ ಕಂಡುಬಂದಿದೆ ತೆರಿಗೆ ತಪ್ಪಿಸುವುದು, ಗಳಿಕೆ ಮುಚ್ಚಿಡುವುದು ಮತ್ತು ಅದರಲ್ಲಿ ಸತ್ಯವನ್ನು ತಿರುಚುವುದು ಹೀಗೆ ಅನೇಕ ರೀತಿಯ ತಪ್ಪುಗಳು ಬೆಳಕಿಗೆ ಬಂದಿದೆ. ಆದ್ದರಿಂದ ಈ ಕಂಪನಿಯ ವ್ಯವಸಾಯ ಪದ್ಧತಿಯ ತನಿಖೆ ನಡೆಸಲಾಗುವುದು. ಕೆಲವು ದಿನಗಳ ಹಿಂದೆ ಭಾರತದ ವಿವಿಧ ತನಿಖಾ ದಳದಿಂದ ವಿವಿಧ ಚೀನಾ ಸಂಚಾರವಾಣಿ ಕಂಪನಿಯ ಕಾರ್ಯಾಲಯಗಳ ಮೇಲೆ ದಾಳಿ ನಡೆಸಲಾಗಿತ್ತು.
ಭಾರತದಲ್ಲಿ ಸಂಚಾರವಾಣಿ ವ್ಯವಸಾಯದಲ್ಲಿ ಚೀನಾ ಕಂಪನಿಯ ಪ್ರಾಬಲ್ಯ : ಭಾರತೀಯ ಸಂಚಾರವಾಣಿ ಕಂಪನಿಯ ಪಾಲು ಒಟ್ಟು ಶೇ. ೧೦ ಕ್ಕಿಂತಲೂ ಕಡಿಮೆ !ಭಾರತದಲ್ಲಿ ಸಂಚಾರಾವಾಣಿಯ ಉದ್ಯೋಗದಲ್ಲಿ ಚೀನಾದ ಪ್ರಾಬಲ್ಯದಿಂದಾಗಿ ಭಾರತೀಯ ಕಂಪನಿಗಳು ದುರ್ಬಲಗೊಂಡಿವೆ. ಲಾವಾ, ಕಾರ್ಬನ್, ಮೈಕ್ರೊಮರಕ್ಸ್ ಮತ್ತು ಇಂಟೆಕ್ಸನಂತಹ ಭಾರತೀಯ ಕಂಪನಿಗಳ ಮಾರಾಟದಲ್ಲು ಭಾರಿ ಇಳಿಕೆ ಕಂಡಿದೆ. ಸಂಚಾರವಾಣಿಯ ಕಂಪನಿಯಲ್ಲಿ ಭಾರತೀಯ ಕಂಪನಿಗಳ ಪಾಲುದಾರಿಕೆ ಶೇ. ೧೦ ಕ್ಕಿಂತಲೂ ಕಡಿಮೆ ಇದೆ. |