ತಮಿಳುನಾಡಿನಲ್ಲಿ ಹಿಂದೂದ್ವೇಷಿ ದ್ರಮುಕ ಸರಕಾರ ಹಿಂದೂಗಳ ಮಂದಿರದ ಪಕ್ಕದಲ್ಲಿ ಹಿಂದೂಗಳ ಮಂದಿರದ ದುಡ್ಡಿನಿಂದಲೇ ಮೀನಿನ ಮಾರುಕಟ್ಟೆ ನಿರ್ಮಿಸಲಿದೆ !

ಹಿಂದೂ ಧರ್ಮದ ಬುಡಕ್ಕೆ ಕೊಡಲಿ ಏಟು ನೀಡುವ ದ್ರಮೂಕ ಸರಕಾರ ! ತಮಿಳುನಾಡಿನಲ್ಲಿ ಹಿಂದೂದ್ವೇಷಿ ಚಟುವಟಿಕೆಗಳನ್ನು ತಡೆಗಟ್ಟಲು ಪ್ರಭಾವಿಯಾದ ಹಿಂದೂ ಸಂಘಟನೆಗಳು ಬಿಟ್ಟರೆ ಬೇರೆ ಪರ್ಯಾಯವಿಲ್ಲ !

ಚೆನ್ನೈ – ತಮಿಳುನಾಡು ರಾಜ್ಯದಲ್ಲಿ ಆಡಳಿತಾರೂಢ ದ್ರಮುಕ್ (ದ್ರಾವಿಡ ಮುನ್ನೇತ್ರ ಕಳಘಂ ಅಂದರೆ ದ್ರಾವಿಡ ಪ್ರಗತಿ ಸಂಘ) ಸರಕಾರದ ದತ್ತಿ ಇಲಾಖೆಯು ನಗರದಲ್ಲಿ ಮೀನಿನ ಮಾರುಕಟ್ಟೆ ಕಟ್ಟುವ ಪ್ರಕಲ್ಪಕ್ಕೆ ಅನುಮತಿ ನೀಡಿದೆ. ಈ ಮೀಲಿನ ಮಾರುಕಟ್ಟೆ ದೇವಸ್ಥಾನದ ಪಕ್ಕದಲ್ಲಿ ನಿರ್ಮಿಸಲಾಗುತ್ತಿದ್ದು ಅದಕ್ಕಾಗಿ ಮೂರು ಬೇರೆಬೇರೆ ದೇವಸ್ಥಾನಗಳಿಂದ ಸಾಲ ಪಡೆಯಲಿದೆ.
ಸರಕಾರದಿಂದ ಮೀನಿನ ಮಾರುಕಟ್ಟೆ ಕಟ್ಟುವ ಬಗ್ಗೆ ವಿಧಾನಸಭೆಯಲ್ಲಿ ಘೋಷಿಸಿದನಂತರ ದತ್ತಿ ಇಲಾಖೆಯು ಅದಕ್ಕೆ ಸರಕಾರದ ಅನುಮತಿ ನೀಡಿದೆ. ಈ ಸಂದರ್ಭದಲ್ಲಿ ದತ್ತಿ ಇಲಾಖೆ ಪ್ರಸ್ತುತಪಡಿಸಿರುವ ದಾಖಲೆಗಳು ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಅದರಲ್ಲಿ ಹೇಳಿರುವಂತೆ ಚೆನ್ನೈನಲ್ಲಿ ಹಳೆ ಮೀನಿನ ಮಾರುಕಟ್ಟೆ ಕೆಡವೀ ‘ಆದಿ ಮೊಟ್ಟಾಯಿ’ ದೇವಸ್ಥಾನದ ಪಕ್ಕದಲ್ಲಿ ಹೊಸ ಮೀನಿನ ಮಾರುಕಟ್ಟೆ ಕಟ್ಟಿಸಲು ಅನುಮತಿ ನೀಡಿದೆ. ಇದಕ್ಕೆ ೧ ಕೋಟಿ ೫೦ ಲಕ್ಷ ರೂಪಾಯಿ ಖರ್ಚು ಮಾಡಲಾಗುವುದು, ಅದಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ದೇವಿ ಕರುಮಾರಿ ಅಮ್ಮನ ದೇವಸ್ಥಾನ, ಕಾಮಾಕ್ಷಿ ಅಮ್ಮನ್ ಮತ್ತು ವೈಕುಂಠ ಪೇರುಮಲ್ ದೇವಸ್ಥಾನದಿಂದ ಸಾಲದ ರೂಪದಲ್ಲಿ ಹಣ ಪಡೆಯಲಿದೆ.

ಹಿಂದುತ್ವನಿಷ್ಠ ಸಂಘಟನೆ ಮತ್ತು ಭಾಜಪದಿಂದ ವಿರೋಧ

ವಿವಿಧ ಹಿಂದುತ್ವನಿಷ್ಠ ಸಂಘಟನೆ ಮತ್ತು ಭಾಜಪ ದೇವಸ್ಥಾನದ ಪಕ್ಕದಲ್ಲಿ ಮೀನಿನ ಮಾರುಕಟ್ಟೆ ಕಟ್ಟಿಸಲು ವಿರೋಧಿಸಿದೆ. ಈ ಮೂಲಕ ‘ದೇವಸ್ಥಾನದ ಪವಿತ್ರ ಭಂಗವಾಗಲಿದ್ದು ದತ್ತಿ ಇಲಾಖೆಯು ಮೀನಿನ ಮಾರುಕಟ್ಟೆಯನ್ನು ದೇವಸ್ಥಾನದ ಪಕ್ಕದಲ್ಲಿ ಕಟ್ಟಲು ಅನುಮತಿ ನೀಡಿ ಹಿಂದೂಗಳ ಧಾರ್ಮಿಕ ಭಾವನೆಯ ಅವಮಾನ ಮಾಡಿದ್ದಾರೆ, ಎಂದು ಹಿಂದುತ್ವನಿಷ್ಠರು ಹೇಳಿದ್ದಾರೆ. ‘ದ್ರಮುಕ ಸರಕಾರದ ಹಿಂದೂದ್ವೇಷ ಮಾನಸಿಕತೆ ನೋಡಿದರೆ ಮೀನಿನ ಮಾರುಕಟ್ಟೆಗಾಗಿ ದೇವಸ್ಥಾನದಿಂದ ಸಾಲದ ರೂಪದಲ್ಲಿ ಪಡೆಯುವ ಹಣ ಸರಕಾರ ಹಿಂತಿರುಗಿಸುವರೇ’, ಈ ವಿಷಯವಾಗಿ ಹಿಂದುತ್ವನಿಷ್ಠರಿಗೆ ಸಂದೇಹ ನಿರ್ಮಾಣವಾಗಿದೆ.