ಒಂದು ವರ್ಷದ ಹಿಂದೆ ಖಲಿಸ್ತಾನವಾದಿಗಳು ಪ್ರಧಾನಿ ಮೋದಿಯ ಹತ್ಯೆ ಮಾಡಲು ರಚಿಸಿದ್ದ ವಿಡಿಯೋದಂತೆಯೇ ಪಂಜಾಬನ ಮೋದಿಯವರ ರಸ್ತೆ ತಡೆಹಿಡಿದ ಪ್ರಕರಣ !

ಇದರಿಂದ ಖಲಿಸ್ತಾನವಾದಿಗಳು ಪ್ರಧಾನಿಯವರನ್ನು ಗುರಿ ಮಾಡಲು ನೋಡುದ್ದಾರೆ, ಎನ್ನುವುದು ಸ್ಪಷ್ಟವಾಗಿದೆ. ಖಲಿಸ್ತಾನ ಉಗ್ರರನ್ನು ಬೇರು ಕಿತ್ತೆಸೆಯಲು ಸರಕಾರ ಪ್ರಯತ್ನಿಸಬೇಕಾದ ಅಗತ್ಯವಾಗಿದೆ !- ಸಂಪಾದಕರು

ನವದೆಹಲಿ – ಪಂಜಾಬಿನ ಫಿರೋಜಪುರದಲ್ಲಿ ಜನೇವರಿ 5, 2022 ರಂದು ಪ್ರಧಾನಿ ಮೋದಿಯವರ ಬೆಂಗಾವಲುಗಳನ್ನು ರೈತ ಪ್ರತಿಭಟನಾಕಾರರು ಫ್ಲೈಓವರ್ ಮೇಲೆ 20 ನಿಮಿಷಗಳ ಕಾಲ ತಡೆದಿದ್ದರು. ಇದರಿಂದ ಪ್ರಧಾನ ಮಂತ್ರಿ ಮೋದಿಯವರು ಮುಂದಿನ ಪ್ರವಾಸ ಮಾಡುವ ಬದಲಾಗಿ ಹಿಂದಕ್ಕೆ ತೆರಳಬೇಕಾಯಿತು. ಇದರಿಂದ ‘ಖಲಿಸ್ತಾನಿಯವರಿಂದ ಪ್ರಧಾನಮಂತ್ರಿ ಮೋದಿಯವರನ್ನು ಹತ್ಯೆ ಮಾಡುವ ಸಂಚು ರಚಿಸಿದ್ದರು’, ಎಂದು ಆರೋಪಿಸುತ್ತಿರುವಾಗ ಕಳೆದ ವರ್ಷ ಖಲಿಸ್ತಾನವಾದಿಗಳು ಮೋದಿಯವರ ಹತ್ಯೆ ಮಾಡಿರುವಂತಹ ಒಂದು `ಅನಿಮೇಟೆಡ್’ (ವ್ಯಂಗಚಿತ್ರ) ವಿಡಿಯೊ ಬೆಳಕಿಗೆ ಬಂದಿದೆ. ಭಾಜಪ ಮುಖಂಡ ಕಪಿಲ ಮಿಶ್ರಾ ಇವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಖಲಿಸ್ತಾನವಾದಿಗಳು ಪ್ರಧಾನಮಂತ್ರಿ ಮೋದಿಯವರನ್ನು ನಾಲ್ಕೂ ದಿಕ್ಕುಗಳಿಂದ ಸುತ್ತುವರಿದು ನಂತರ ಫ್ಲೈಓವರನಿಂದ ಕೆಳಗೆ ತಳ್ಳುತ್ತಿರುವಂತೆ ತೋರಿಸಲಾಗಿದೆ.

1. ಈ ವಿಡಿಯೋ ಡಿಸೆಂಬರ 1, 2020 ರಂದು ಖಲಿಸ್ತಾನ ಸಂಘಟನೆಯಿಂದ ಯು ಟ್ಯೂಬ ಚಾನೆಲ್ ‘ಧಕ್ಕಾ ಗೇಮಿಂಗ’ ಮೇಲೆ ಅಪಲೋಡ ಮಾಡಲಾಗಿತ್ತು. ಈ ವಿಡಿಯೋದಲ್ಲಿ ಒಂದು ಬದಿಯಿಂದ ಪ್ರಧಾನಮಂತ್ರಿ ಮೋದಿಯವರು ತಮ್ಮ ವಾಹನ ಭದ್ರತಾ ಸಿಬ್ಬಂದಿಯೊಂದಿಗೆ ಬರುತ್ತಿರುತ್ತದೆ, ಎದುರಿನಿಂದ ರೈತರು ಟ್ರ್ಯಾಕ್ಟರ ಮೂಲಕ ಬರುತ್ತಾರೆ ಮತ್ತು ಅವರು ಪ್ರಧಾನಮಂತ್ರಿ ಮೋದಿಯವರ ವಾಹನವನ್ನು ತಡೆಯುತ್ತಾರೆ. ಆಗ ಮೋದಿಯವರು ವಾಹನದಿಂದ ಹೊರಗೆ ಬರುತ್ತಾರೆ. ಅದೇ ಸಮಯದಲ್ಲಿ ಪ್ರತಿಭಟನಾಕಾರರು ಮೋದಿಯವರ ದಿಕ್ಕಿನಲ್ಲಿ ಓಡುತ್ತಾ ಬರುತ್ತಾರೆ. ಇದನ್ನು ನೋಡಿ ಮೋದಿಯವರು ಮತ್ತೊಂದು ಕಡೆಗೆ ಓಡಲು ಪ್ರಯತ್ನಿಸುತ್ತಾರೆ. ಆಗ ಒಂದು ಟ್ರ್ಯಾಕ್ಟರ ಅವರ ಮಾರ್ಗವನ್ನು ತಡೆಯುತ್ತದೆ. ಅಲ್ಲಿಂದಲೂ ಅವರು ಓಡಲು ಪ್ರಯತ್ನಿಸುತ್ತಾರೆ; ಆದರೆ ಪ್ರತಿಭಟನಾಕಾರರು ಅವರನ್ನು ತಡೆಯುತ್ತಾರೆ. ಅವರ ಹತ್ತಿರ ಕೋಲುಗಳು ಇರುತ್ತವೆ. ತದನಂತರ ಪ್ರತಿಭಟನಾಕಾರರು ಮೋದಿಯವರನ್ನು ಹಿಡಿದು ಅವರ ಕಾಲುಗಳನ್ನು ಕಟ್ಟಿ ಅವರನ್ನು ಫ್ಲೈಓವರ್‍ನಿಂದ ಕೆಳಗೆ ತಳ್ಳುತ್ತಾರೆ ಎನ್ನುವಂತೆ ತೋರಿಸಲಾಗಿದೆ.

2. ಇನ್ನೊಂದೆಡೆ ನಿರ್ಬಂದ ಹೇರಿದ್ದ ಖಲಿಸ್ತಾನವಾದಿ ಸಂಘಟನೆ `ಸಿಖ್ ಫಾರ ಜಸ್ಟೀಸ’ ಸಂಸ್ಥಾಪಕ ಗುರಪತವಂತಸಿಂಗ ಪನ್ನೂ ಇವರು ಒಂದು ವಿಡಿಯೋ ಮೂಲಕ, ಮೋದಿಯವರ ಪ್ರವಾಸದ ಘಟನೆಯು ಪಂಜಾಬ ಸ್ವತಂತ್ರಗೊಳಿಸುವ ದೃಷ್ಟಿಯಿಂದ ಎತ್ತಿರುವ ಮುಂದಿನ ಹೆಜ್ಜೆಯಾಗಿದೆ, ಎಂದು ಬೆದರಿಕೆ ಹಾಕಿದ್ದಾರೆ.