ಪ್ರಧಾನಿ ಮೋದಿ ಅವರ ಪಂಜಾಬಿನ ಭದ್ರತೆಯ ಪ್ರಕರಣದಲ್ಲಿ ಎಲ್ಲಾ ದಾಖಲೆಗಳನ್ನು ಸೀಲ್ ಮಾಡಲು ಸರ್ವೋಚ್ಚ ನ್ಯಾಯಾಲಯದ ಆದೇಶ

ನವ ದೆಹಲಿ – ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬಿನ ಪ್ರವಾಸದ ಸಮಯದಲ್ಲಿ ಭದ್ರತಾ ಲೋಪದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಪ್ರವಾಸದ ದಾಖಲೆ ಮತ್ತು ತನಿಖಾ ದಳಕ್ಕೆ ಸಿಕ್ಕಿರುವ ಸಾಕ್ಷಿಗಳನ್ನು ಸುರಕ್ಷಿತವಾಗಿ ಇಡುವಂತೆ ಆದೇಶಿಸಿದೆ. ಹಾಗೂ ನ್ಯಾಯಾಲಯವು ಪಂಜಾಬ ಪೊಲೀಸ್ ಅಧಿಕಾರಿ, ರಾಷ್ಟ್ರೀಯ ಭದ್ರತಾ ದಳ (ಎಸ್.ಪಿ.ಜಿ) ಮತ್ತು ಇತರ ವ್ಯವಸ್ಥೆಯವರಿಗೆ ಸಹಕಾರ ನೀಡಲು ಮತ್ತು ಸಂಪೂರ್ಣ ದಾಖಲೆಗಳನ್ನು ಸೀಲ್ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಲು ಹೇಳಲಾಗಿದೆ. ನ್ಯಾಯವಾದಿ ಮನಿಂದರ ಸಿಂಹ ಇವರು ಈ ಸಂದರ್ಭದಲ್ಲಿ ದಾಖಲಿಸಿರುವ ಅರ್ಜಿಯ ಮೇಲಿನ ಆಲಿಕೆಯ ಸಮಯದಲ್ಲಿ ನ್ಯಾಯಾಲಯ ಈ ಆದೇಶ ನೀಡಿತು.

1. ಕೇಂದ್ರ ಹಾಗೂ ಪಂಜಾಬ ಸರಕಾರ ಈ ಆಲಿಕೆಯ ಸಮಯದಲ್ಲಿ ಪರಸ್ಪರ ವಿಚಾರಣೆಯ ಸಮಿತಿಯ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದರು. ಕೇಂದ್ರ ಸರಕಾರ ಮತ್ತು ನ್ಯಾಯವಾದಿ ಮನಿಂದರ ಸಿಂಹ ಇವರು ಈ ಘಟನೆಯ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೂ ಸಹಭಾಗಿ ಮಾಡುವ ಬೇಡಿಕೆ ಇಟ್ಟಿದೆ, ಆದರೆ ಪಂಜಾಬ ಸರಕಾರವು ಅದರ ಸಮಿತಿ ಈಗಾಗಲೇ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ ಎಂದು ಹೇಳಿದೆ.

2. ಎಲ್ಲಾ ಯುಕ್ತಿವಾದ ಕೇಳಿದನಂತರ ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದ ಆಲಿಕೆಯನ್ನು ಜನವರಿ 10 ರ ವರೆಗೆ ಸ್ಥಗಿತಗೊಳಿಸಿದೆ. ಈ ಪ್ರಕರಣದ ಸಂಬಂಧಪಟ್ಟ ಕ್ರಮ ಜನವರಿ 10 ರವರೆಗೂ ನಿಲ್ಲಿಸುವಂತೆ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ.