ಪ್ರಧಾನಿ ಮೋದಿಯವರ ಭದ್ರತಾ ಲೋಪದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲು !

  • ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯ ಮಾರ್ಗವನ್ನು ಆಂದೋಲನಕಾರರು ಧಿಡೀರನೆ ತಡೆದ ಪ್ರಕರಣ !

  • ಕೇಂದ್ರ ಗ್ರಹಸಚಿವಾಲಯವು ಪಂಜಾಬ ಸರಕಾರದಿಂದ ವರದಿ ಕೇಳಿದೆ !

ನವ ದೆಹಲಿ – ಪಂಜಾಬಿನ ಫಿರೋಜಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಅಕ್ಷಮ್ಯ ತಪ್ಪಿನ ಕುರಿತು ಕೇಂದ್ರೀಯ ಗೃಹ ಸಚಿವಾಲಯವು ಪಂಜಾಬ ಸರಕಾರದಿಂದ ವರದಿ ಕೇಳಿದೆ ಹಾಗೂ ಇನ್ನೊಂದೆಡೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಪಂಜಾಬ ಸರಕಾರವು ಈ ಪ್ರಕರಣದ ತನಿಖೆ ನಡೆಸಲು ಉನ್ನತ ಮಟ್ಟದದ ಸಮಿತಿಯನ್ನು ಸ್ಥಾಪಿಸಿದೆ.

೧. ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿರುವ ಅರ್ಜಿಯಲ್ಲಿ ‘ಪಂಜಾಬ ಸರಕಾರಕ್ಕೆ ಸೂಕ್ತ ಆದೇಶ ನೀಡಿ ಕಾರಣಕರ್ತರ ಮೇಲೆ ಕ್ರಮ ಕೈಗೊಳ್ಳಬೇಕು’, ಎಂದು ಒತ್ತಾಯಿಸಲಾಗಿದೆ. ಹಾಗೂ ಭವಿಷ್ಯದಲ್ಲಿ ಈ ರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳಲು ಹೇಳಲಾಗಿದೆ.

೨. ಭಾಜಪಾದ ನಾಯಕರು ಪಂಜಾಬದ ರಾಜ್ಯಪಾಲರನ್ನು ಭೇಟಿ ಮಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿನ ಲೋಪಗಳನ್ನು ಹೇಳಲಾಗಿದೆ. ಅವರು ಗೃಹ ಸಚಿವ ಮತ್ತು ಪೊಲೀಸ ಅಧಿಕಾರಿಯನ್ನು ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಲಾಗಿದೆ.