ಬಾಂಗ್ಲಾದೇಶದಲ್ಲಿ ೨೦೨೧ ರಲ್ಲಿ ೨೭೩ ದೇವಸ್ಥಾನಗಳ ಮೇಲೆ ದಾಳಿ ಹಾಗೂ ೧೫೨ ಹಿಂದೂಗಳ ಹತ್ಯೆ !

  • ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಆಘಾತಗಳ ಸ್ಥಿತಿ

  • ಹಿಂದೂಗಳ ಮೇಲೆ ೧ ಸಾವಿರದ ೮೯೮ ಬಾರಿ ದಾಳಿಯಾಗಿವೆ

  • ಹಿಂದೂ ದೇವತೆಗಳ ೨ ಸಾವಿರದ ೧೩೦ ಮೂರ್ತಿಗಳು ಭಗ್ನ

  • ೪೧೧ ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ

  • ೧೫೧ ಹಿಂದೂಗಳ ಅಪಹರಣ

  • ಪಾಕಿಸ್ತಾನಕ್ಕಿಂತಲೂ ಬಾಂಗ್ಲಾದೇಶದಲ್ಲಿ ಹಿಂದೂಗಳು ಹೆಚ್ಚು ಅಸುರಕ್ಷಿತರಾಗಿದ್ದಾರೆ ! ಭಾರತದಿಂದಾಗಿ ನಿರ್ಮಾಣವಾದ ಬಾಂಗ್ಲಾದೇಶದಲ್ಲಿ ಹಿಂದೂಗಳು ಈ ಸ್ಥಿತಿಯಲ್ಲಿದ್ದಾರೆ ಎಂಬುದು ಭಾರತದಲ್ಲಿ ಇಂದಿನವರೆಗಿನ ಎಲ್ಲ ಪಕ್ಷಗಳ ರಾಜಕಾರಣಿಗಳಿಗೆ ಲಜ್ಜಾಸ್ಪದವಾಗಿದೆ !
  • ಬಾಂಗ್ಲಾದೇಶ ಸಹಿತ ಜಗತ್ತಿನಾದ್ಯಂತ ಇರುವ ಹಿಂದೂಗಳ ರಕ್ಷಣೆಗಾಗಿ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡದೇ ಪರ್ಯಾಯವಿಲ್ಲ !
  • ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುವ ದಾಳಿಗಳ ಭಯಾನಕತೆ ಮತ್ತು ವ್ಯಾಪ್ತಿಯನ್ನು ನೋಡುವಾಗ ಅಂತರರಾಷ್ಟ್ರೀಯ ಮಾನವಾಧಿಕಾರ ಆಯೋಗ ಹಾಗೂ ಭಾರತದಲ್ಲಿನ ಹಿಂದೂಗಳನ್ನು ‘ಹಿಂಸಾತ್ಮಕ’ ಮತ್ತು ‘ಅಸಹಿಷ್ಣು’ ಎಂದು ಹೇಳಿ ಹೀಯಾಳಿಸುವ ಪಾಶ್ಚಾತ್ಯ ಪ್ರಸಾರಮಾಧ್ಯಮಗಳು ಈಗ ಬಾಯಿ ಮುಚ್ಚಿ ಕುಳಿತಿವೆ ಎಂಬುದನ್ನು ಗಮನದಲ್ಲಿಡಿ !

ಗೌಹಾಟಿ (ಅಸ್ಸಾಂ) – ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ೨೦೨೧ ನೇ ವರ್ಷವು ಭಯ, ಹತ್ಯೆ, ರಕ್ತಪಾತ ಮತ್ತು ಕಣ್ಣೀರಿನಿಂದ ಕೂಡಿತ್ತು. ಅಕ್ಟೋಬರ್ ೨೦೨೧ ರಲ್ಲಿ ದುರ್ಗಾಪೂಜೆಯ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮೇಲಾದ ದೌರ್ಜನ್ಯವನ್ನು ಜಗತ್ತೇ ನೋಡಿತ್ತು. ಮತಾಂಧರು ಹಿಂದೂಗಳ ದೇವಸ್ಥಾನಗಳ ಮೇಲೆ ಮತ್ತು ದುರ್ಗಾದೇವಿಯ ಮಂಟಪದ ಮೇಲೆ ದಾಳಿ ಮಾಡಿದ್ದರು. ‘ಬಾಂಗ್ಲಾದೇಶ ಜಾತಿಯಾ ಹಿಂದೂ ಮೋಹಜೋತ’ (ಬಾಂಗ್ಲಾದೇಶ ರಾಷ್ಟ್ರೀಯ ಹಿಂದೂ ಸಂಘಟನೆ) ಎಂಬ ಸಂಘಟನೆಯು ೨೦೨೧ ರಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯಗಳ ಅಂಕಿಅಂಶದ ಮಾಹಿತಿಯನ್ನು ಘೋಷಿಸಿದೆ. ಅದಕ್ಕನುಸಾರ ಮತಾಂಧರು ೨೦೨೦-೨೧ ರಲ್ಲಿ ೩೦೧ ಹಿಂದೂಗಳ ಹತ್ಯೆ ಮಾಡಿದ್ದಾರೆ. ೨೦೨೦ ರಲ್ಲಿ ೧೪೯, ೨೦೨೧ ರಲ್ಲಿ ೧೫೨ ಜನರ ಹತ್ಯೆಯಾಗಿವೆ. ಮತಾಂಧರ ಗುಂಪು ಹಿಂದೂಗಳ ಮೇಲೆ ೧ ಸಾವಿರದ ೮೯೮ ಬಾರಿ ದಾಳಿ ಮಾಡಿವೆ. ಈ ಸಂಖ್ಯೆಯು ಹಿಂದಿನ ವರ್ಷದ ತುಲನೆಯಲ್ಲಿ ಶೇ. ೩೦೦ ರಷ್ಟು ಹೆಚ್ಚಾಗಿದೆ.

೧. ೨೦೨೦ ಮತ್ತು ೨೦೨೧ ರಲ್ಲಿ ಒಟ್ಟು ೨೫೫ ಹಿಂದೂಗಳ ಅಪಹರಣ ಮಾಡಲಾಯಿತು. ಇವುಗಳಲ್ಲಿ ೨೦೨೧ ರಲ್ಲಿ ಈ ಸಂಖ್ಯೆಯು ೧೫೧ ಆಗಿದೆ. ಅಪಹರಣವಾದ ಜನರಲ್ಲಿ ಶೇ. ೮೦ರಷ್ಟು ಜನರು ಹುಡುಗಿಯರು ಅಥವಾ ಮಹಿಳೆಯರಾಗಿದ್ದರು.

೨. ಮತಾಂಧರು ೨೦೨೧ ರಲ್ಲಿ ೨ ಸಾವಿರದ ೧೩೦ ಹಿಂದೂ ದೇವತೆಗಳ ಮೂರ್ತಿಗಳನ್ನು ಒಡೆದು ಹಾಕಿದ್ದಾರೆ. ಈ ಸಂಖ್ಯೆಯು ೨೦೨೦ ರ ತುಲನೆಯಲ್ಲಿ ಶೇ. ೫೦೦ ರಷ್ಟು (೫ ಪಟ್ಟು) ಹೆಚ್ಚಾಗಿದೆ.

೩. ೨೦೨೧ ರಲ್ಲಿ ಎರಡು ೨೭೩ ದೇವಸ್ಥಾನಗಳ ಮೇಲೆ ಆಕ್ರಮಣ ಮಾಡಲಾಯಿತು, ಇದು ೨೦೨೦ ರ ತುಲನೆಯಲ್ಲಿ ಶೇ. ೭೦೦ ರಷ್ಟು ಹೆಚ್ಚಾಗಿದೆ.

೪. ಮತಾಂಧರು ೨೦೨೧ ರಲ್ಲಿ ೩ ಸಾವಿರದ ೨೫೩ ಹಿಂದೂ ಕುಟುಂಬಗಳನ್ನು ದೋಚಿವೆ, ಇದು ೨೦೨೦ ರ ತುಲನೆಯಲ್ಲಿ ಶೇ. ೫೦೦ ರಷ್ಟು ಹೆಚ್ಚಾಗಿದೆ.

೫. ೨೦೨೧ ರಲ್ಲಿ ೧ ಲಕ್ಷದ ೨೩ ಸಾವಿರಕ್ಕಿಂತಲೂ ಹೆಚ್ಚಿನ ಕುಟುಂಬಗಳು, ದೇಶದಲ್ಲಿನ ಮತಾಂಧರ ಗುಂಪಿನ ಬೆದರಿಕೆಗಳಿಂದ ಅವರಿಗೆ ಅಸುರಕ್ಷಿತವೆನಿಸುತ್ತದೆ’, ಎಂದು ನೋಂದಾಯಿಸಿವೆ. ಇದು ಕಳೆದ ವರ್ಷದ ತುಲನೆಯಲ್ಲಿ ೨೦ ಪಟ್ಟಿಗಿಂತಲೂ ಹೆಚ್ಚಾಗಿದೆ.

೬. ಕೇವಲ ಒಂದೇ ವರ್ಷದಲ್ಲಿ ಮತಾಂಧರ ಆಕ್ರಮಣದಲ್ಲಿ ಸುಮಾರು ೧ ಲಕ್ಷದ ೩೫ ಸಾವಿರಕ್ಕಿಂತಲೂ ಹೆಚ್ಚಿನ ಮನೆ, ದೇವಸ್ಥಾನಗಳು ಮತ್ತು ವ್ಯವಸಾಯದ ಹಾನಿಯಾಗಿದೆ.

೭. ೨೦೨೧ ರಲ್ಲಿ ಬಾಂಗ್ಲಾದೇಶದಲ್ಲಿ ೫೬ ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರವಾಗಿತ್ತು ಮತ್ತು ೪೧೧ ಕ್ಕಿಂತಲೂ ಹೆಚ್ಚಿನ ಹಿಂದೂ ಮಹಿಳೆಯರ ಮಾನಭಂಗ ಅಥವಾ ಅವರ ಮೇಲೆ ಶಾರೀರಿಕ ಹಲ್ಲೆಗಳಾಗಿವೆ.

೮. ಮತಾಂಧರಿಂದ ೩೨ ಹಿಂದೂಗಳಿಗೆ ಗೋಮಾಂಸ ತಿನ್ನಿಸಿದರು.

೯. ೨೦೨೧ ರಲ್ಲಿ ಮತಾಂಧರು ಸುಮಾರು ೧ ಸಾವಿರ ಹಿಂದೂ ಕುಟುಂಬಗಳಿಗೆ ಬಾಂಗ್ಲಾದೇಶವನ್ನು ಬಿಡುವಂತೆ ಮಾಡಿದರು, ಇದು ಕಳೆದ ವರ್ಷದ ತುಲನೆಯಲ್ಲಿ ೫ ಪಟ್ಟು ಹೆಚ್ಚಾಗಿದೆ.

೧೦. ಮತಾಂಧರ ಗುಂಪುಗಳಿಂದ ಆಗಿರುವ ದೌರ್ಜನ್ಯಗಳಿಂದಾಗಿ ಈ ವರ್ಷ ಹಿಂದೂ ಸಮಾಜಕ್ಕೆ ಸುಮಾರು ೧ ಸಾವಿರದ ೧೪೬ ಕೋಟಿ ರೂಪಾಯಿಗಳ ಹಾನಿಯಾಗಿದೆ.