ಕಳೆದ ೨ ವರ್ಷಗಳಿಂದ ಅಕ್ರಮವಾಗಿ ಭಾರತದಲ್ಲಿರುವ ಶ್ರೀಲಂಕಾದ ಮತಾಂಧ ನಾಗರಿಕನ ಬಂಧನ

ವಿದೇಶಿ ನಾಗರಿಕನು ಭಾರತದಲ್ಲಿ ೨ ವರ್ಷಗಳಿಂದ ಕಾನೂನುಬಾಹಿರವಾಗಿ ಇರುವುದು ಭಾರತೀಯ ಗುಪ್ತಚರ ಇಲಾಖೆಗೆ ತಿಳಿದಿಲ್ಲವೋ ಅಥವಾ ಅವು ನಿದ್ರೆ ಮಾಡುತ್ತಿತ್ತೇ ?

ಅಬ್ದುಲ್ ಖಾದಿರ್ ಮಹಮ್ಮದ್ ನಜೀರ್

ಸಂಭಲ (ಉತ್ತರಪ್ರದೇಶ) – ಇಲ್ಲಿಯ ಲೋಧಿ ಸರಾಯ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಅಕ್ರಮವಾಗಿ ವಾಸಿಸುತ್ತಿದ್ದ ಅಬ್ದುಲ್ ಖಾದಿರ್ ಮಹಮ್ಮದ್ ನಜೀರ್ ಎಂಬ ಶ್ರೀಲಂಕಾದ ನಾಗರಿಕನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಕಳೆದ ಎರಡು ವರ್ಷಗಳಿಂದ ವಿಸಾದ (ವಿದೇಶದಲ್ಲಿ ಕೆಲವು ಸಮಯಕ್ಕಾಗಿ ಇರಲು ನೀಡಿರುವ ಅನುಮತಿ) ನವೀಕರಣ ಮಾಡಿಸಿರಲಿಲ್ಲ ಹಾಗೂ ಭಾರತದ ನಾಗರಿಕನಾಗಿರುವ ನಕಲಿ ಗುರುತಿನ ಚೀಟಿ ಮಾಡಿಸಿಕೊಂಡಿದ್ದನು. ಅಲ್ಲದೇ ಆತನ ಪತ್ನಿಯು ‘ಅವನು ವಜ್ರದ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದಾನೆ’ ಎಂದು ಆರೋಪಿಸಿದ್ದಾಳೆ.