* ಮಹಿಳಾ ಭಯೋತ್ಪಾದಕಿಯು ಕಾಂಗ್ರೆಸ್ಸಿನ ದಿವಂಗತ ಮಾಜಿ ಶಾಸಕನ ಸೊಸೆ !* ಮಹಿಳಾ ಭಯೋತ್ಪಾದಕಿಯು ಹಿಂದೂ ಧರ್ಮದಿಂದ ಮತಾಂತರವಾಗಿದ್ದಳು ! |
* ಇಸ್ಲಾಮಿನಲ್ಲಿ ಮತಾಂತರವಾದ ನಂತರ ಮುಂದೆ ಹಿಂದೂ ಹುಡುಗಿಯರ ಸ್ಥಿತಿ ಹೇಗಿರುತ್ತದೆ, ಎಂಬುದನ್ನು ದರ್ಶಿಸುವ ಇನ್ನೊಂದು ಉದಾಹರಣೆ !- ಸಂಪಾದಕರು

ಬೆಂಗಳೂರು – ರಾಷ್ಟ್ರೀಯ ತನಿಖಾ ದಳವು ಕರ್ನಾಟಕದಿಂದ ದೀಪ್ತಿ ಮಾರಲಾ ಉರ್ಫ್ ಮರಿಯಮ ಎಂಬ ಜಿಹಾದಿ ಭಯೋತ್ಪಾದಕಿಯನ್ನು ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟನೊಂದಿಗೆ ಸಂಬಂಧ ಇರುವುದರಿಂದ ಬಂಧಿಸಿದ್ದಾರೆ. ಈಕೆಯು ಕರ್ನಾಟಕದ ಕಾಂಗ್ರೆಸ್ಸಿನ ಮಾಜಿ ಸಂಸದರಾದ ದಿವಂಗತ ಬಿ. ಎಂ. ಇದಿನಬ್ಬಾರವರ ಸೊಸೆಯಾಗಿದ್ದು ಇದಿನಬ್ಬಾರವರ ಮಗನಾದ ಬಿ. ಎಂ. ಬಾಷಾರವರ ಪತ್ನಿಯಾಗಿದ್ದಾರೆ. ಭಾಷಾರವರ ಮನೆಯ ಮೇಲೆ ದಾಳಿ ನಡೆಸಿದಾಗ ಅಲ್ಲಿಂದ ಕೆಲವು ಆಕ್ಷೇಪಾರ್ಹ ಕಾಗದಪತ್ರಗಳನ್ನು ಜಪ್ತಿ ಮಾಡಲಾಯಿತು. ಆಗಸ್ಟ್ 2021ರಲ್ಲಿ ಇದೇ ಮನೆಯ ಮೇಲೆ ದಾಳಿ ನಡೆಸಿ ಬಾಷಾರವರ ಸಹೋದರನ ಮಗನಾದ ಅಮ್ಮಾರನನ್ನು ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ನಂಟಿರುವುದರಿಂದ ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಮರಿಯಮಳ ವಿಚಾರಣೆ ನಡೆಸಲಾಗಿತ್ತು. ಈಗ ಆಕೆಯ ವಿರುದ್ಧ ದೃಢವಾದ ಪುರಾವೆಗಳು ದೊರೆತಿದ್ದರಿಂದ ಆಕೆಯನ್ನು ಬಂಧಿಸಲಾಗಿದೆ. ಮರಿಯಮಳು ಮದುವೆಯ ಮೊದಲು ಹಿಂದೂ ಆಗಿದ್ದಳು. ಆಕೆಯು ಒಂದು ಶ್ರೀಮಂತ ಮನೆತನದವಳಾಗಿದ್ದಳು. ಮರಿಯಮ ಉರ್ಫ್ ದೀಪ್ತಿ ಮಾರಲಾರವರು ದುಬೈನಲ್ಲಿ ಶಿಕ್ಷಣ ಪಡೆಯುತ್ತಿರುವಾಗ ಇಸ್ಲಾಮಿಕ್ ಸ್ಟೇಟ್‌ನ ಮಹಿಳಾ ಭಯೋತ್ಪಾದಕಿಯಾದ ಅಜಮಲಳ ಸಂಪರ್ಕಕ್ಕೆ ಬಂದಿದ್ದಳು. ಅಜಮಲ ಇವಳು ಮಾಜಿ ಸಂಸದರಾದ ದಿವಂಗತ ಬಿ. ಎಂ. ಇದಿನಬ್ಬಾರವರ ಮಗನ ಮಗಳಾಗಿದ್ದಳು. (ಇದಿನಬ್ಬಾರವರ ಮನೆಯ ಪ್ರತಿಯೊಬ್ಬ ವ್ಯಕ್ತಿಯ ವಿಚಾರಣೆ ನಡೆಸಿ ಅವರ ಭಯೋತ್ಪಾದಕ ಸಂಘಟನೆ ಅಥವಾ ಜಿಹಾದಿಗಳೊಂದಿಗೆ ನಂಟಿದೆಯೇ ಎಂಬುದರ ಸಂಪೂರ್ಣ ವಿಚಾರಣೆ ಮಾಡುವುದು ಅವಶ್ಯಕವಾಗಿದೆ ! – ಸಂಪಾದಕರು) ದೀಪ್ತಿಯು ನಂತರ ಇಸ್ಲಾಮಿನ ಕಡೆಗೆ ಆಕರ್ಷಿತಳಾದಳು. ಅನಂತರ ಆಕೆಯು ಮತಾಂತರ ಮಾಡಿ ಇದಿನಬ್ಬಾರವರ ಮಗನಾದ ಅನಾಸ ಅಬ್ದುಲ ರೆಹಮಾನನೊಂದಿಗೆ ವಿವಾಹವಾದಳು. (ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರಿಗೆ ಹಿಂದೂ ಧರ್ಮದ ಮಹತ್ವ ಮತ್ತು ಮಹಾನತೆ ಗಮನಕ್ಕೆ ಬರುವುದಿಲ್ಲ. ಇಂತಹ ಹಿಂದೂಗಳು ಇತರ ಧರ್ಮೀಯರ ಆಮಿಷಗಳಿಗೆ ಬಲಿಯಾಗಿ ಆಯುಷ್ಯವನ್ನು ಹಾಳುಮಾಡಿಕೊಳ್ಳುತ್ತಾರೆ ! – ಸಂಪಾದಕರು)
Kerala ISIS module case: NIA arrests another ISIS operative in Karnataka https://t.co/FV0Xyewyua
— Republic (@republic) January 4, 2022
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
ಹೆರಿಗೆಯಾದ ಮಹಿಳೆಗೆ ತಪ್ಪು ರಕ್ತ; ಜೀವದೊಂದಿಗೆ ಆಸ್ಪತ್ರೆಯ ಚೆಲ್ಲಾಟ! : Hospital Blood Error
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್