ಭಗವಾನ ಶ್ರೀಕೃಷ್ಣ ಪ್ರತಿದಿನ ನನ್ನ ಕನಸ್ಸಿನಲ್ಲಿ ಬಂದು ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ರಾಮರಾಜ್ಯ ಸ್ಥಾಪನೆ ಮಾಡುವುದು ! (ಅಂತೆ)

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ ಅವರ ಹೇಳಿಕೆ !

* ೧೯೯೧ ಇಸ್ವಿಯಲ್ಲಿ ಕರಸೇವಕರನ್ನು ಗುಂಡು ಹಾರಿಸಿ ಹತ್ಯೆಗೈದು ಅವರ ಶವಗಳನ್ನು ಕಲ್ಲುಕಟ್ಟಿ ಸರಯೂ ನದಿಯಲ್ಲಿ ಎಸೆಯುವವರು ಹಾಗೂ ಬಾಬರನ ವಂಶಜರಾದ ಮತಾಂಧರಿಗೆ ಸಂತೋಷಪಡಿಸುವ ಸಮಾಜವಾದಿ ಪಕ್ಷ ಎಂದಾದರು ರಾಮರಾಜ್ಯ ಸ್ಥಾಪಿಸಲು ಸಾಧ್ಯವೇ ?- ಸಂಪಾದಕರು 

* ಇಂತಹ ಹಿಂದೂದ್ರೋಹಿ ರಾಜಕಾರಣಿಗಳ ಕನಸ್ಸಿನಲ್ಲಿ ಎಂದಾದರೂ ಭಗವಾನ್ ಶ್ರೀಕೃಷ್ಣನು ಬರಲು ಸಾಧ್ಯವೇ ? ತದ್ವಿರುದ್ಧ ಇಂತಹವರ ಕನಸ್ಸಿನಲ್ಲಿ ಕಂಸ ಅಥವಾ ರಾವಣ ಬರುತ್ತಿದ್ದಾರೆ ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ!- ಸಂಪಾದಕರು 

ಲಕ್ಷ್ಮಣಪುರಿ (ಉತ್ತರಪ್ರದೇಶ) – ಭಗವಾನ್ ಶ್ರೀಕೃಷ್ಣ ಪ್ರತಿದಿನ ರಾತ್ರಿ ನನ್ನ ಕನಸ್ಸಿನಲ್ಲಿ ಬರುತ್ತಾನೆ ಮತ್ತು ನಾನು (ಅಖಿಲೇಶ ಯಾದವ) ರಾಜ್ಯದ ಮುಂಬರುವ ವಿಧಾನಸಭೆ ಚುನಾವಣೆಯ ನಂತರ ಉತ್ತರಪ್ರದೇಶದಲ್ಲಿ ಸರಕಾರ ಸ್ಥಾಪಿಸಿ ರಾಮ ರಾಜ್ಯ ಸ್ಥಾಪನೆ ಮಾಡುವೆನು, ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಅಖಿಲೇಶ ಯಾದವ ಅವರು ಹೇಳಿದರು. ಭಾಜಪದ ಬಹಾರಾಯಿ ಇಲ್ಲಿಯ ಶಾಸಕೀ ಮಾಧುರಿ ವರ್ಮಾ ಇವರು ಸಮಾಜವಾದಿ ಪಕ್ಷದಲ್ಲಿ ಸಹಭಾಗಿ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ರಾಮರಾಜ್ಯದ ಮಾರ್ಗವು ಸಮಾಜವಾದದ ಮಾರ್ಗದಿಂದಿದೆ. ಯಾವ ದಿನ ಸಮಾಜವಾದ ಸ್ಥಾಪನೆಯಾಗುವುದು ಆ ದಿನವೇ ರಾಜ್ಯದಲ್ಲಿ ರಾಮರಾಜ್ಯ ಸ್ಥಾಪನೆಯಾಗುವುದು, ಎಂದು ಸಹ ಅಖಿಲೇಶ ಯಾದವ ಹೇಳಿದರು.(ರಾಮರಾಜ್ಯದ ಅರ್ಥ ತಿಳಿಯದೇ ಇರುವ ಅಖಿಲೇಶ ಯಾದವ ಇವರು ಸಮಾಜವಾದವು ರಾಮರಾಜ್ಯ ಸ್ಥಾಪನೆ ಮಾಡುವುದು ಅಂತೆ !- ಸಂಪಾದಕರು)