ಸೂರ್ಯನಮಸ್ಕಾರದ ಕಾರ್ಯಕ್ರಮ ಭಾರತೀಯ ಸಂವಿಧಾನದ ಧರ್ಮನಿರಪೇಕ್ಷತೆಯ ವಿರುದ್ಧವಾಗಿದೆ ! (ಯಂತೆ)

ಸ್ವಾತಂತ್ರ್ಯದ ೭೫ ನೆಯ ವಾರ್ಷಿಕೋತ್ಸವದ ಪ್ರಯುಕ್ತ ಶಾನೆಗಳಲ್ಲಿ ಆಯೋಜಿಸಲಾದ ಸೂರ್ಯನಮಸ್ಕಾರದ ಕಾರ್ಯಕ್ರಮಕ್ಕೆ ಅಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ದ ವಿರೋಧ

ಮುಸಲ್ಮಾನ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಸಹಭಾಗಿ ಆಗದಿರಲು ಕರೆ !

ಧರ್ಮನಿರಪೇಕ್ಷತೆಯ ಹೆಸರಿನಲ್ಲಿ ರಸ್ತೆಯ ಮೇಲೆ ನಮಾಜು ಮಾಡಿ ಅನ್ಯಧರ್ಮೀಯರಿಗೆ ತೊಂದರೆ ಕೊಟ್ಟರೆ ನಡೆಯುತ್ತದೆಯೇ ? ಧರ್ಮನಿರಪೇಕ್ಷತೆಯ ಹೆಸರಿನಲ್ಲಿ ಹಿಂದುಗಳ ದೇವಸ್ಥಾನದಲ್ಲಿ ನಮಾಜುಪಠಣ ಹೇಗೆ ಮಾಡುತ್ತಾರೆ ? ಇದೇ ನ್ಯಾಯದಿಂದ ಧರ್ಮನಿರಪೇಕ್ಷತೆಯ ಹೆಸರಿನಲ್ಲಿ ಸೂರ್ಯನಮಸ್ಕಾರದ ಕಾರ್ಯಕ್ರಮ ಸರಕಾರ ಆಯೋಜಿಸಿದೆ, ಅದು ಯೋಗ್ಯವೇ ಆಗಿದೆ !- ಸಂಪಾದಕರು

ನವ ದೆಹಲಿ – ಸ್ವಾತಂತ್ರ್ಯದ ೭೫ ನೆಯ ವಾರ್ಷಿಕೋತ್ಸವದ ಪ್ರಯುಕ್ತ ಶಾಲೆಗಳಲ್ಲಿ ಸೂರ್ಯ ನಮಸ್ಕಾರದ ಕಾರ್ಯಕ್ರಮ ಆಯೋಜನೆಯನ್ನು ಅಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವಿರೋಧಿಸಿದೆ. ಅದರಿಂದ ಮುಸಲ್ಮಾನ್ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಸಹ ಭಾಗ ಆಗದಿರಲು ಕರೆ ನೀಡಿದೆ. ಕೇಂದ್ರ ಸರಕಾರ ಎಲ್ಲ ರಾಜ್ಯಗಳಲ್ಲಿ ಒಂದರಿಂದ ಜನವರಿ ಏಳರ ವರೆಗಿನ ಈ ಸಮಯ ಸೂರ್ಯ ನಮಸ್ಕಾರ ದ ಕಾರ್ಯಕ್ರಮ ಆಯೋಜಿಸುವ ಆದೇಶ ನೀಡಿದೆ. ಭಾರತ ಸರಕಾರದ ಶಿಕ್ಷಣ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆದೇಶ ನೀಡಿದೆ. ಈ ಆದೇಶದ ಬೋರ್ಡಿನ ಕಾರ್ಯದರ್ಶಿ ಮತ್ತು ಮಹಾಸಚಿವ ಮೌಲಾನ (ಇಸ್ಲಾಮಿ ವಿದ್ವಾನ) ಖಾಲಿದ್ ಸೈಫುಲ್ಲಾ ರಹಮಾನಿ ಇವರು ವಿರೋಧಿಸಿದ್ದಾರೆ.

ಮೌಲಾನಾ ರೆಹಮಾನಿ ಇವರು ಮುದ್ರಿಸಿರುವ ಕರಪತ್ರದಲ್ಲಿ , ಭಾರತವೊಂದು ಧರ್ಮನಿರಪೇಕ್ಷ ದೇಶ. ಇಲ್ಲಿ ಬಹುಸಂಖ್ಯಾತ ಸಮಾಜದ ರೂಢಿ ಪರಂಪರೆ , ಮತ್ತು ಪೂಜಾಪದ್ಧತಿ ಅನ್ಯಧರ್ಮೀಯರ ಮೇಲೆ ಹೇರಲು ಸಾಧ್ಯವಿಲ್ಲ. ಈ ಆದೇಶ ಸಂವಿಧಾನದ ವಿರುದ್ಧವಾಗಿದೆ. ಸಂವಿಧಾನದಲ್ಲಿ ಪ್ರತಿಯೊಂದು ಪಂಥದವರಿಗೆ ಅವರ ಪಂಥದ ರೀತಿಯಲ್ಲಿ ಪೂಜಾ ಅರ್ಚನೆ ಮಾಡುವ ಅಧಿಕಾರ ನೀಡಲಾಗಿದೆ, ಇಂತಹ ಸಮಯದಲ್ಲಿ ಒಂದು ವಿಶೇಷ ಧರ್ಮದ ಪೂಜಾ ಪದ್ಧತಿ ಅನ್ಯಧರ್ಮೀಯರು ಮೇಲೆ ಹೇರಲು ಸಾಧ್ಯವಿಲ್ಲ. ಇಸ್ಲಾಮ ದಲ್ಲಿ ಸೂರ್ಯನಿಗೆ ದೇವತೆಯೆಂದು ಅವರ ಪೂಜೆ ಮಾಡುವ ಅನುಮತಿ ನೀಡಲಾಗಿಲ್ಲ. ಸರಕಾರ ಸಂವಿಧಾನದ ಧರ್ಮನಿರಪೇಕ್ಷತೆಗೆ ಗೌರವ ನೀಡಿ ಆದೇಶ ಹಿಂಪಡೆಯಬೇಕು, ಎಂದು ಹೇಳಿದ್ದಾರೆ.