|
ಈ ಗಣ್ಯರು ಎಂದಾದರೂ ‘೧೫ ನಿಮಿಷಗಳಿಗಾಗಿ ಪೊಲೀಸರನ್ನು ಬದಿಗಿರಿಸಿದರೆ ೧೦೦ ಕೋಟಿ ಹಿಂದೂಗಳನ್ನು ನೋಡಿಕೊಳ್ಳುತ್ತೇವೆ’ ಎಂದು ಬೆದರಿಕೆ ನೀಡಿದಾಗ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದರೇ ? ಮುಸಲ್ಮಾನೇತರ ಮತ್ತು ವಿಶೇಷವಾಗಿ ಹಿಂದೂಗಳ ವಿರುದ್ಧ ವಿಷಕಾರುವ ಅನೇಕರಿಗೆ ಭಯೋತ್ಪಾದಕ ಕೃತ್ಯಗಳನ್ನು ಮಾಡುವುದಾಗಿ ಬೆದರಿಕೆಯೊಡ್ಡುವ ಮತ್ತು ಇಂತಹ ಅನೇಕ ಕೊಲೆಗಡುಕ ಭಯೋತ್ಪಾದಕರ ಪ್ರೇರಣಾಸ್ಥಾನವಾಗಿರುವ ಝಾಕಿರ್ ನಾಯಿಕ ವಿರುದ್ಧ ಈ ಗಣ್ಯರು ಎಂದಾದರೂ ಚಕಾರವೆತ್ತಿದ್ದಾರೆಯೇ ? ಶುಕ್ರವಾರದ ನಮಾಜಿನ ನಂತರ ಮಸೀದಿಗಳ ಇಮಾಮರು ಮಾಡುವ ಜಿಹಾದಿ ವಿಚಾರಗಳ ಭಾಷಣದ ಬಗ್ಗೆ ಈ ಗಣ್ಯರು ಯಾವಾಗಲಾದರೂ ಪೊಲೀಸರಿಗೆ ಪತ್ರ ಬರೆದಿದ್ದಾರೆಯೇ ? ಇಂತಹ ಭಾಷಣಗಳಿಂದಲೇ ಫ್ರಾನ್ಸ್.ನಲ್ಲಿ ಮಸೀದಿಗಳಿಗೆ ಬೀಗ ಹಾಕಲಾಗುತ್ತಿದೆ ! ‘ಅಲ್ಲಾ ಹು ಅಕಬರ ’(ಅಲ್ಲಾ ಮಹಾನನಿದ್ದಾರೆ) ಎಂಬ ಘೋಷಣೆ ನೀಡಿ ಹಿಂದೂ ದೇವಸ್ಥಾನಗಳ ಮೇಲೆ, ಹಾಗೆಯೇ ಹಿಂದೂಗಳ ಮೇಲೆ ಆಕ್ರಮಣ ಮಾಡುವವರ ವಿರುದ್ಧ ಗಣ್ಯರು ಇಂತಹ ಪತ್ರವನ್ನು ಎಂದಾದರೂ ಬರೆದಿದ್ದಾರೆಯೇ ? ೩ ದಶಕಗಳ ಹಿಂದೆ ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ಮಾಡಿ ಅವರನ್ನು ಪಲಾಯನ ಮಾಡುವಂತೆ ಮಾಡಿರುವ ಪ್ರಕರಣದಲ್ಲಿ ಈ ಗಣ್ಯರು ‘ಚ’ಕಾರವೆತ್ತಿದ್ದಾರೆಯೇ ? ಕ್ರೈಸ್ತ ಮಿಶನರಿಗಳಿಂದ ಆದಿವಾಸಿ ಮತ್ತು ಬಡ ಹಿಂದೂಗಳಿಗೆ ಆಮಿಷಗಳನ್ನು ಒಡ್ಡಿ ನಡೆಯುತ್ತಿರುವ ಮತಾಂತರವನ್ನು ತಡೆಯಲು ಈ ಗಣ್ಯರು ತಮ್ಮ ಧ್ವನಿಯನ್ನು ಯಾವಾಗ ಎತ್ತಿದ್ದಾರೆ ? |
ನವ ದೆಹಲಿ – ಹಿಂದುತ್ವನಿಷ್ಠ ನೇತಾರರು ಹರಿದ್ವಾರ, ರಾಯಪುರ ಇತ್ಯಾದಿ ಕಡೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮುಸಲ್ಮಾನರ ಬಗ್ಗೆ ದ್ವೇಷವನ್ನು ಹಬ್ಬಿಸುವ ಹೇಳಿಕೆಗಳನ್ನು ನೀಡಿದ್ದಾರೆ. ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುವ ಇಂತಹ ಪ್ರಚೋದನಾಕಾರಿ ಹೇಳಿಕೆಗಳನ್ನು ಬಹಿರಂಗವಾಗಿ ಖಂಡಿಸಬೇಕು, ಹಾಗೆಯೇ ಅಪರಾಧಿಗಳ ಮೇಲೆ ಕಠಿಣ ಕಾರ್ಯಾಚರಣೆಯನ್ನು ಮಾಡಬೇಕು ಎಂದು ಬರೆದ ಪತ್ರವನ್ನು ೫ ಮಾಜಿ ನೌಕಾದಳ ಮತ್ತು ವಾಯುದಳದ ಪ್ರಮುಖರೊಂದಿಗೆ ೧೦೦ ಗಣ್ಯರು ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬರೆದಿದ್ದಾರೆ. ಇವರಲ್ಲಿ ಮಾಜಿ ನೌಕಾದಳ ಪ್ರಮುಖರಾದ ಎಲ್. ರಾಮದಾಸ, ವಿಷ್ಣು ಭಾಗವತ, ಅರುಣ ಪ್ರಕಾಶ, ಆರ್. ಕೆ. ಧೋವಾನ; ಮಾಜಿ ವಾಯುದಳ ಪ್ರಮುಖರಾದ ಎಸ್. ಪಿ. ತ್ಯಾಗಿ, ಹಾಗೆಯೇ ಇವರಲ್ಲಿ ಮಾಜಿ ಐಎಸ್ ಅಧಿಕಾರಿಗಳು, ಪತ್ರಕರ್ತರು, ನ್ಯಾಯವಾದಿಗಳು, ಅರ್ಥ ತಜ್ಞರೂ ಇದ್ದಾರೆ.
5-member SIT to probe Haridwar Dharma Sansad ‘hate speech’ case https://t.co/BkCclE36Dj
— TOI India (@TOIIndiaNews) January 2, 2022
ಈ ಪತ್ರದಲ್ಲಿ ಈ ರೀತಿಯಲ್ಲಿ ಹೇಳಲಾಗಿದೆ,
೧. ಹರಿದ್ವಾರದಲ್ಲಿ ನಡೆದ ೩ ದಿನಗಳ ಧರ್ಮಸಂಸತ್ತಿನಲ್ಲಿ ಹಿಂದುತ್ವನಿಷ್ಠ ನೇತಾರರು ಮತ್ತು ಸಾಧು-ಸಂತರು ಮಾಡಿರುವ ಪ್ರಚೋದನಾಕಾರಿ ಭಾಷಣಗಳನ್ನು ನಾವು ಖಂಡಿಸುತ್ತೇವೆ. ಈ ನೇತಾರರು ‘ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಬೇಕು, ಈ ಉದ್ದೇಶವನ್ನು ಪೂರ್ಣಗೊಳಿಸಲು ಪ್ರಸಂಗಕ್ಕೆ ತಕ್ಕಂತೆ ಶಸ್ತ್ರಗಳನ್ನು ಇಟ್ಟುಕೊಳ್ಳಬೇಕು’, ‘ಹಿಂದುತ್ವದ ಸಂರಕ್ಷಣೆಗಾಗಿ ವಿಶಿಷ್ಟ ಸಮುದಾಯದ ಹೆಡೆಮುರಿಕಟ್ಟಿ’ ಎಂಬಂತಹ ಹೇಳಿಕೆಗಳನ್ನು ನೀಡಿದ್ದಾರೆ.
೨. ಮ್ಯಾನ್ಮಾರ್ ನಂತೆ ಪೊಲೀಸರು, ಸೈನ್ಯ ಮತ್ತು ಪ್ರತಿಯೊಬ್ಬ ಹಿಂದೂಗಳು ಶಸ್ತ್ರಗಳನ್ನು ಹೊಂದಿರಬೇಕು ಮತ್ತು ಒಂದು ಸಮುದಾಯದ ನರಮೇಧ ಮಾಡಬೇಕು’, ಎಂದು ಹಿಂದೂ ರಕ್ಷಾ ಸೇನೆಯ ಸ್ವಾಮಿ ಪ್ರಬೋಧಾನಂದರು ಧರ್ಮಸಂಸತ್ತಿನಲ್ಲಿ ಉದ್ಗಾರ ತೆಗೆದಿದ್ದಾರೆ.
೩. ದೇಶದ ಗಡಿಯಲ್ಲಿ ಸದ್ಯ ಉದ್ವಿಗ್ನ ಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲಿ ದೇಶದಲ್ಲಿ ಕೆಲವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರಿಂದ ಹೊರಗಿನ ಶಕ್ತಿಗಳಿಗೆ ಅವಕಾಶ ಸಿಗಬಹುದು. ಪೊಲೀಸರು ಅಥವಾ ಸೈನ್ಯದಲ್ಲಿರುವ ಐಕ್ಯತೆಯ ಭಾವನೆಗೆ ಈ ಪ್ರಚೋದನಾಕಾರಿ ಭಾಷಣಗಳಿಂದ ಹಾನಿಯಾಗಬಹುದು. ಆದ್ದರಿಂದ ಎಲ್ಲಾ ಸಂಗತಿಗಳ ಕಡೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅತ್ಯಂತ ಗಂಭೀರತೆಯಿಂದ ನೋಡುವ ಅವಶ್ಯಕತೆ ಇದೆ.