‘ಕರ್ನಾಟಕದಲ್ಲಿ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸುವುದು ಧಾರ್ಮಿಕ ಮಾಫಿಯಾದ ಪಿತೂರಿ !’ (ಅಂತೆ) – ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ

ದೇವಸ್ಥಾನಗಳ ಸರಕಾರೀಕರಣ ಮಾಡುವುದೇ ರಾಜಕೀಯದಲ್ಲಿನ ಧಾರ್ಮಿಕ ಮಾಫಿಯಾಗಳ ಷಡ್ಯಂತ್ರವಾಗಿದೆ, ಎಂದು ಹೇಳಿದರೆ ತಪ್ಪಾಗದು !

ಕಾಂಗ್ರೆಸ್ ಚರ್ಚ್, ಮಸೀದಿಗಳನ್ನು ಸರಕಾರೀಕರಣ ಮಾಡದಿರುವುದು, ಇದು ಯಾವ ಮಾಫಿಯಾಗಳ ಷಡ್ಯಂತ್ರವಾಗಿದೆ, ಎಂಬುದು ಸಿದ್ದರಾಮಯ್ಯ ಹೇಳುವರೇ ?

ಬೆಂಗಳೂರು – ’ಹಿಂದೂ ದೇವಾಲಯಗಳನ್ನು ಸ್ವತಂತ್ರಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರ, ದೇವರ ಹೆಸರಿನಲ್ಲಿ ದಂಧೆ ನಡೆಸುವ ಧಾರ್ಮಿಕ ಮಾಫಿಯಾದ ಭೀಕರ ಹುನ್ನಾರ. ಶೇ. ೮೦ರಷ್ಟು ಹಿಂದೂಗಳ ಸಂಪತ್ತನ್ನು ದೋಚಿ ಶೇ. ೨-೩ರಷ್ಟು ಜನರಿಗೆ ಹಸ್ತಾಂತರಿಸುವ ತಂತ್ರ ಇದಾಗಿದೆ, ಎಂದು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ,

೧. ಒಂದು ವರ್ಗದ ದುಷ್ಟ ಕಣ್ಣು ದೇಗುಲಗಳ ಮೇಲೆ ಬಿದ್ದಿದೆ. ‘ಈ ಹಿಂದೂ ವಿರೋಧಿ, ಧಾರ್ಮಿಕ ಬಂಡವಾಳವಾದಿ ಪರ ಧೋರಣೆಯನ್ನು ಎಲ್ಲರೂ ವಿರೋಧಿಸಬೇಕು. ಬಿಜೆಪಿಯ ಮೂಲಭೂತ ಸ್ವಭಾವದಲ್ಲಿ ಸಾಮಾಜಿಕ ನ್ಯಾಯವನ್ನು ತುಳಿದು, ಶೂದ್ರರು, ದಲಿತರು, ಮಹಿಳೆಯರನ್ನು ಗುಲಾಮಗಿರಿಗೆ ತಳ್ಳುವ ನೀಚ ಕಾರ್ಯಸೂಚಿಯಿದೆ. ಅದಕ್ಕೆ ಸಂಬಂಧಿಸಿದ ಕಾಯ್ದೆಗಳನ್ನು ಬಿಜೆಪಿಯವರು ರೂಪಿಸುತ್ತಿದ್ದಾರೆ.

೨. ‘ಒಂದು ಸಾವಿರ ವರ್ಷಗಳಿಂದ ನಮ್ಮ ಹಿರಿಯರು ನಡೆಸಿದ ಹೋರಾಟದಿಂದಾಗಿ ಮನುವಾದಿ ವಿಷವೃಕ್ಷದ ಬೇರುಗಳು ದುರ್ಬಲವಾಗಿ, ಶಿಥಿಲಾವಸ್ಥೆಗೆ ತಲುಪಿದ್ದವು. ಬಿಜೆಪಿ ಸರ್ಕಾರ ದೇವಸ್ಥಾನಗಳಿಗೆ ಸ್ವಾಯತ್ತತೆ ಮೂಲಕ ಒಣಗುತ್ತಿದ್ದ ಬೇರುಗಳಿಗೆ ಟಾನಿಕ್ ನೀಡಲು ಹೊರಟಿದೆ. ಮನುವಾದಿ ಸಿದ್ಧಾಂತ ಮತ್ತೆ ಜೀವ ಪಡೆದರೆ ಅದು ರಾಕ್ಷಸ ರೂಪಿಯಾಗುತ್ತದೆ. ಇದನ್ನು ವಿರುದ್ಧ ಪಕ್ಷಾತೀತ, ಪಂಥಾತೀತವಾಗಿ ವಿರೋಧಿಸಬೇಕಿದೆ’ (ಹಿಂದೂಗಳಲ್ಲಿ ಜಾತಿ ತಾರತಮ್ಯವನ್ನು ಹುಟ್ಟುಹಾಕಿದ ಇತಿಹಾಸ ಕಾಂಗ್ರೆಸ್‌ನವರದ್ದಾಗಿದೆ. ಈಗ ದೇವಸ್ಥಾನಗಳನ್ನು ಸರಕಾರದಿಂದ ಮುಕ್ತಗೊಳಿಸುವುದರಿಂದ ಬ್ರಾಹ್ಮಣರ ಏಕಸ್ವಾಮ್ಯ ಹೆಚ್ಚಾಗುತ್ತದೆ, ಈ ರೀತಿಯ ವಿಚಿತ್ರ ಯುಕ್ತಿವಾದ ಮಾಡಿ ಹಿಂದೂಗಳನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಎಂದೂ ಇಲ್ಲದಷ್ಟು ಹಿಂದೂ ಸಂಘಟನೆ ಇರುವಾಗ ಅದನ್ನು ಹೆದರಿ ಹಿಂದೂದ್ವೇಷಿ ಕಾಂಗ್ರೆಸ್ ಹಿಂದೂವಿರೋಧಿ ಸಂಚನ್ನು ರೂಪಿಸುತ್ತಿರುವುದರಿಂದ ಹಿಂದೂಗಳು ಅದನ್ನು ಬಲವಾಗಿ ವಿರೋಧಿಸಬೇಕು ! – ಸಂಪಾದಕರು)

೩. ದೇವಸ್ಥಾನಗಳ ಮೇಲಿನ ಹಿಡಿತ ತಪ್ಪಿಸುವುದೆಂದರೆ ಜನ ಸಮುದಾಯಗಳ ಅಧಿಕಾರ ತಪ್ಪಿಸುವುದೆಂದೇ ಅರ್ಥ. ಸರ್ಕಾರ ಈಗಿನ ನಿರ್ಧಾರದ ಮೂಲಕ ಶೇ ೮೦ರಷ್ಟು ಜನ ಮತ್ತೆ ಊಳಿಗಮಾನ್ಯ ಸಮಾಜದ ಕ್ರೌರ್ಯವನ್ನು ಅನುಭವಿಸಬೇಕೆಂದು ತೀರ್ಮಾನಿಸಿದಂತೆ ಕಾಣುತ್ತಿದೆ.

೪. ಪುರೋಹಿತಶಾಹಿ ಶಕ್ತಿಗಳು ಭಾಜಪದಲ್ಲಿರುವ ಶೂದ್ರ ರಾಜಕಾರಣಿಗಳನ್ನು ಬಳಸಿಕೊಂಡು ದೇವಸ್ಥಾನಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಹಿಂದೂಗಳನ್ನು ಧಾರ್ಮಿಕ ಗುಲಾಮಗಿರಿಯತ್ತ ತಳ್ಳಲು ಪ್ರಯತ್ನಿಸುತ್ತಿದೆ.