ಕಾಲಿಚರಣ ಮಹಾರಾಜರನ್ನು ೨೪ ಗಂಟೆಯೊಳಗೆ ಬಿಡುಗಡೆ ಮಾಡದಿದ್ದರೆ ಹಿಂದೂ ಮಹಾಸಭಾ ಆಂದೋಲನ ಮಾಡುವುದು !

ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ತ್ರಿದಂಡಿ ಮಹಾರಾಜರ ಘೋಷಣೆ

ಕಾಲಿಚರಣ ಮಹಾರಾಜ

ನವ ದೆಹಲಿ – ಮ. ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಛತ್ತೀಸಗಢ ಪೊಲೀಸರು ಬಂಧಿಸಿರುವ ಕಾಲಿಚರಣ ಮಹಾರಾಜರನ್ನು ಮುಂದಿನ ೨೪ ಗಂಟೆಗಳಲ್ಲಿ ಬಿಡುಗಡೆ ಮಾಡದಿದ್ದರೆ ಹಿಂದೂ ಮಹಾಸಭಾ ಬೀದಿಗಿಳಿದು ಪ್ರತಿಭಟನೆ ನಡೆಸಲಿದೆ ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ತ್ರಿದಂಡಿ ಮಹಾರಾಜರು ಎಚ್ಚರಿಸಿದ್ದಾರೆ.

ಸ್ವಾಮಿ ತ್ರಿದಂಡಿ ಮಹಾರಾಜ

ಭಾರತವನ್ನು ‘ವಾಮಾಚಾರ’ ಎಂದು ಕರೆಯುವವರು ರಾಜಾರೋಶವಾಗಿ ತಿರುಗಾಡುತ್ತಿದ್ದಾರೆ, ಸೀತಾ ಮಾತೆ ಮತ್ತು ಭಗವಾನ ಶ್ರೀರಾಮನನ್ನು ನಿಂದಿಸುವವರ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ, ರಾಷ್ಟ್ರಧ್ವಜವನ್ನು ಸುಡುವವರನ್ನೂ ಉಳಿಸಲಾಗುತ್ತದೆ, ಸನಾತನ ಸಂಸ್ಕೃತಿಯನ್ನು ಒಡೆಯುವವರಿಗೆ ಸರಕಾರದ ಬೆಂಬಲವಿದೆ; ಆದರೆ ನೂರಾರು ಕ್ರಾಂತಿಕಾರಿಗಳ ಮತ್ತು ವಿಭಜನೆಯ ಸಮಯದಲ್ಲಿ ಲಕ್ಷಾಂತರ ಜನರ ಸಾವಿಗೆ ಕಾರಣರಾದ ಆ ಗಾಂಧಿಯವರನ್ನು ಕಾಲಿಚರಣ ಮಹಾರಾಜರು ಮಹಾತ್ಮ ಎಂದು ಹೇಳದೇ ಇದ್ದರಿಂದ ಅವರನ್ನು ಬಂಧಿಸಲಾಗುತ್ತದೆಯೇ ? ಎಂದು ಅವರು ಪ್ರಶ್ನೆ ಕೇಳಿದರು.

ಕಾಲಿಚರಣ ಮಹಾರಾಜರ ಬಂಧನ ಕಾನೂನುಬಾಹಿರ ! – ನ್ಯಾಯವಾದಿ ವಿಷ್ಣುಶಂಕರ ಜೈನ್

ನ್ಯಾಯವಾದಿ ವಿಷ್ಣುಶಂಕರ ಜೈನ್

ಮಧ್ಯಪ್ರದೇಶದ ಖಜುರಾಹೊದಲ್ಲಿ ಕಾಲಿಚರಣ ಮಹಾರಾಜರನ್ನು ಬಂಧಿಸುವಾಗ ಛತ್ತೀಸಗಢ ಪೊಲೀಸರು ಮಧ್ಯಪ್ರದೇಶ ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಛತ್ತೀಸಗಢ ಪೊಲೀಸರ ಈ ವರ್ತನೆ ಕಾನೂನುಬಾಹಿರವಾಗಿದೆ. ಈ ಬಗ್ಗೆ ನ್ಯಾಯವಾದಿ ವಿಷ್ಣುಶಂಕರ ಜೈನ್ ಟ್ವೀಟ್ ಮಾಡಿದ್ದು, ‘ಕಾಲಿಚರಣ ಮಹಾರಾಜರ ಬಂಧನ ಕಾನೂನುಬಾಹಿರವಾಗಿದೆ’, ಎಂದು ಹೇಳಿದರು.

ಹಿಂದೂ ದೇವತೆಗಳ ಅವಮಾನವಾಗುತ್ತಿರುವಾಗ, ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ’ ! – ಜುನಾ ಅಖಾಡದ ಮಹಾಮಂಡಲೇಶ್ವರ ಯತಿದ್ರಾನಂದ ಗಿರಿ

ಜುನಾ ಅಖಾಡದ ಮಹಾಮಂಡಲೇಶ್ವರ ಯತಿದ್ರಾನಂದ ಗಿರಿ

ಕಾಲಿಚರಣ ಮಹಾರಾಜರು ಗಾಂಧಿಯನ್ನು ಅವಮಾನಿಸಿದರು. ಅದನ್ನು ಬೆಂಬಲಿಸಲಾಗುವುದಿಲ್ಲ; ಆದರೆ, ದೇಶದಲ್ಲಿ ಭಗವಾನ ಶ್ರೀರಾಮನನ್ನು ಪದೇ ಪದೇ ಅವಮಾನಿಸಲಾಯಿತು, ಸೀತಾಮಾತೆಯನ್ನು ವೇಶ್ಯೆ ಎಂದು ಕರೆಯಲಾಯಿತು, ದೂರದರ್ಶನದ ಮಾಲಿಕೆಗಳು ಮತ್ತು ಚಲನಚಿತ್ರಗಳಲ್ಲಿ ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡಲಾಯಿತು ಮತ್ತು ಅವರ ನಗ್ನ ಚಿತ್ರಗಳನ್ನು ಬಿಡಲಾಯಿತು. ಆ ಸಮಯದಲ್ಲಿ ಏಕೆ ಕ್ರಮ ಕೈಗೊಂಡಿಲ್ಲ ? ಆ ಸಮಯದಲ್ಲಿ ಯಾರೂ ಏಕೆ ಮಾತನಾಡುವುದಿಲ್ಲ ? ಯಾವುದೇ ವಾರ್ತಾವಾಹಿನಿಗಳು ಈ ಸೂತ್ರಗಳನ್ನು ಏಕೆ ಮಂಡಿಸುವುದಿಲ್ಲ ? ಎಲ್ಲ ಜಾತ್ಯತೀತವಾದಿಗಳು ಎಲ್ಲಿ ಅಡಗಿಕೊಳ್ಳುತ್ತಾರೆ ? ಎಂದು ಪ್ರತಿಕ್ರಿಯೆಯನ್ನು ಜುನಾ ಆಖಾಡಾದ ಮಹಾಮಂಡಲೇಶ್ವರ ಯತಿದ್ರಾನಂದ ಗಿರಿಯವರು ವ್ಯಕ್ತಪಡಿಸಿದ್ದಾರೆ.

ಮಹಾಮಂಡಲೇಶ್ವರ ಯತಿದ್ರಾನಂದ ಗಿರಿಯವರು ಮಾತನಾಡುತ್ತಾ, ಸ್ವಾತಂತ್ರ್ಯದ ಶ್ರೇಯಸ್ಸು ಒಬ್ಬರಿಗೆ ಮಾತ್ರ ನೀಡಲು ಸಾಧ್ಯವಿಲ್ಲ. ಈ ಹೋರಾಟದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಸ್ವಾತಂತ್ರ್ಯವೀರ ಸಾವರಕರ್, ಬಾಲಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್ ಮುಂತಾದವರು ಪಾಲ್ಗೊಂಡಿದ್ದರು. ಗಾಂಧಿಯವರು ಆಫ್ರಿಕಾದಿಂದ ಭಾರತಕ್ಕೆ ಬರುವ ಮೊದಲು ಅಂಡಮಾನ್ ಜೈಲುಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಚಿತ್ರಹಿಂಸೆ ಅನುಭವಿಸುತ್ತಿದ್ದರು. ಆದ್ದರಿಂದ ಒಬ್ಬ ವ್ಯಕ್ತಿಯಿಂದಾಗಿ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಸ್ವಾತಂತ್ರ್ಯವೀರ ಸಾವರಕರ್ ಅವರನ್ನು ಅವಮಾನಿಸುವವರು ಏಕೆ ಮುಕ್ತವಾಗಿದ್ದಾರೆ ? – ವಿಹಿಂಪನ ವಕ್ತಾರ ವಿನೋದ್ ಬಂಸಲ್

ವಿಹಿಂಪನ ವಕ್ತಾರ ವಿನೋದ್ ಬಂಸಲ್

ವಿಶ್ವ ಹಿಂದೂ ಪರಿಷತ್ ವಕ್ತಾರ ವಿನೋದ್ ಬಂಸಾಲ್ ಅವರು ಟ್ವೀಟ್ ಮಾಡುತ್ತಾ, ಛತ್ತೀಸಗಢ ಸರಕಾರವು ಗಾಂಧಿ ಬಗ್ಗೆ ಮಾತನಾಡುವವರನ್ನು ಮಧ್ಯಪ್ರದೇಶದೊಳಗೆ ನುಗ್ಗಿ ಎಳೆದೊಯ್ದಿದ್ದಾರೆ; ಆದರೆ ಸ್ವಾತಂತ್ರ್ಯವೀರ ಸಾವರಕರ್ ಮತ್ತು ನಿರಂತರವಾಗಿ ಹಿಂದೂಗಳ ಮೇಲೆ ದಾಳಿ ಮಾಡುವವರು ಮತ್ತು ಭಯೋತ್ಪಾದಕರನ್ನು ಬೆಂಬಲಿಸುವವರು ಮಧ್ಯಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ವಿರುದ್ಧ ಏನಾದರೂ ಕ್ರಮ ಕೈಗೊಳ್ಳಲಾಗುತ್ತದೆಯೇ ? ಎಂದು ಪ್ರಶ್ನೆ ಕೇಳಿದರು. ಬಂಸಾಲ್ ಅವರ ಗುರಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ಮೇಲಿದೆ.

ತಬ್ಲೀಘಿಯ ಮೌಲಾನಾ ಸಾದ್‌ನನ್ನು ಇನ್ನೂ ಏಕೆ ಬಂಧಿಸಿಲ್ಲ ? – ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನೆ

ಕಾಲಿಚರಣ ಮಹಾರಾಜರ ಬಂಧನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಟೀಕೆ ವ್ಯಕ್ತವಾಗುತ್ತಿದೆ. ಓರ್ವ ವ್ಯಕ್ತಿಯು, ಕಾಲಿಚರಣ ಮಹಾರಾಜರು ಹಿಂದೂ ಆಗಿರುವುದರಿಂದ ಅವರನ್ನು ಸುಲಭವಾಗಿ ಬಂಧಿಸಲಾಯಿತು; ಆದರೆ ತಬ್ಲಿಘಿ ಜಮಾತ್‌ನ ಅಧ್ಯಕ್ಷ ಮೌಲಾನಾ (ಇಸ್ಲಾಮಿಕ್ ವಿದ್ವಾಂಸ) ಸಾದ್ ನನ್ನು ಬಂಧಿಸಲು ಏನು ಅಡ್ಡಿ ಇತ್ತು ? ೨೦೨೦ ರಲ್ಲಿ ದೆಹಲಿಯ ತಬ್ಲಿಘಿ ಜಮಾತ್‌ನ ಪ್ರಧಾನ ಕಚೇರಿಯಿಂದ ದೇಶದಾದ್ಯಂತ ಹಿಂತಿರುಗಿದ ಸದಸ್ಯರಿಂದ ಕೊರೋನಾ ಹರಡಿತು. ಈ ಪ್ರಕರಣದಲ್ಲಿ ತಬ್ಲಿಘಿ ಮುಖ್ಯಸ್ಥ ಮೌಲಾನಾ ಸಾದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ; ಆದರೆ, ಆತನನ್ನು ಇನ್ನೂ ಬಂಧಿಸಿಲ್ಲ. (ಸುಮಾರು ಒಂದೂವರೆ ವರ್ಷ ಕಳೆದರೂ ಜನತಾದ್ರೋಹಿ ಕೃತ್ಯ ಎಸಗಿದವರನ್ನು ಬಂಧಿಸದ ಪೊಲೀಸರು ಕಾನೂನಿನ ರಕ್ಷಕರೋ, ಭಕ್ಷಕರೋ ? ಪೊಲೀಸರು ತಾವಾಗಿಯೇ ಕ್ರಮ ಕೈಗೊಳ್ಳಲು ತಪ್ಪಿಸಿದರೋ ಅಥವಾ ಅವರಿಗೆ ‘ಮೇಲಿಂದ’ ಆದೇಶ ಇರುವುದರಿಂದ ಅವರ ಮೇಲೆ ಕ್ರಮ ಕೈಗೊಳ್ಳಲಿಲ್ಲವೇ ? ಇದನ್ನು ಅವರು ಜನರ ಮುಂದೆ ಹೇಳಬೇಕು. ಹಿಂದೂಗಳಿಗೆ ಒಂದು ನ್ಯಾಯ ಮತ್ತು ಮತಾಂಧರಿಗೆ ಒಂದು ನ್ಯಾಯ, ಈ ಸ್ಥಿತಿಯನ್ನು ಹಿಂದೂ ರಾಷ್ಟ್ರವನ್ನು ಅನಿವಾರ್ಯವಾಗಿಸುತ್ತದೆ ! – ಸಂಪಾದಕರು)