ಕಳೆದ ಒಂದು ಸಾವಿರ ವರ್ಷಗಳಲ್ಲಿ ಮುಸಲ್ಮಾನ ಆಕ್ರಮಣಕಾರರು ಮತ್ತು ಕ್ರೈಸ್ತ ಪೋರ್ಚುಗೀಸರು ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಿದರು. ಅವರ ವಂಶಜರಿಗೆ ಈಗ ಪುನಃ ಹಿಂದೂ ಧರ್ಮಕ್ಕೆ ಬರಬೇಕೆಂದು ಅನಿಸುತ್ತಿದ್ದರೆ, ಕೇಂದ್ರ ಸರಕಾರ ಅವರಿಗಾಗಿ ಕಾನೂನು ರೂಪಿಸಿ ಹಿಂದೂ ಧರ್ಮಕ್ಕೆ ಮರಳಲು ಸಹಾಯ ಮತ್ತು ರಕ್ಷಣೆ ನೀಡಬೇಕು. ಇದರಿಂದ ೧ ಸಾವಿರ ವರ್ಷಗಳ ಗುಲಾಮಗಿರಿ ತೊಲಗಿ ಭಾರತ ನಿಜವಾದ ಅರ್ಥದಲ್ಲಿ ಸ್ವತಂತ್ರವಾಗಲಿದೆ !
ಬೆಂಗಳೂರು – ಯಾರು ವಿವಿಧ ಕಾರಣಗಳಿಗಾಗಿ ಸನಾತನ ಧರ್ಮವನ್ನು ತ್ಯಜಿಸಿ ಇತರ ಧರ್ಮಕ್ಕೆ ಪ್ರವೇಶಿದರೋ ಅವರನ್ನು ಮರಳಿ ಕರೆತರಲು ದೇವಾಲಯಗಳು ಮತ್ತು ಮಠಗಳು ವರ್ಷಪೂರ್ತಿ ಗುರಿಗಳನ್ನು ನಿಗದಿಪಡಿಸಬೇಕು. ಇದನ್ನು ಬಿಟ್ಟರೆ ಬೇರೆ ದಾರಿಯಿಲ್ಲ ಮತ್ತು ವಿಶೇಷವೆಂದರೆ ಯಾರೂ ಸ್ವತಃ ಧರ್ಮದಲ್ಲಿ ಪುನಃಪ್ರವೇಶ ಮಾಡಲು ಮುಂದೆ ಬರುವುದಿಲ್ಲ, ಎಂದು ಭಾಜಪ ಸಂಸದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಯ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಡಿಸೆಂಬರ್ ೨೫ ರಂದು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಅವರು ಈ ಹೇಳಿಕೆ ನೀಡಿದ್ದರು.
— Tejasvi Surya (@Tejasvi_Surya) December 25, 2021
ಈ ವಿಡಿಯೋವನ್ನು ತೇಜಸ್ವಿ ಸೂರ್ಯ ಅವರೇ ಟ್ವೀಟ್ ಮಾಡಿದ್ದಾರೆ,
೧. ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಕೇವಲ ಧರ್ಮಗಳಲ್ಲ, ಅವು ರಾಜಕೀಯ ಸಾಮ್ರಾಜ್ಯಶಾಹಿ ಸಿದ್ಧಾಂತವಾಗಿವೆ.
೨. ಈ ಎರಡೂ ಧರ್ಮಗಳು ತಾವೇ ಸರ್ವಶ್ರೇಷ್ಠವೆಂದು ನಂಬುತ್ತವೆ. ಈ ಧರ್ಮಗಳಿಗೂ ಮತ್ತು ಹಿಂದೂ ಧರ್ಮಕ್ಕೂ ಮೂಲಭೂತವಾದ ವ್ಯತ್ಯಾಸವಿದೆ. ಈ ಧರ್ಮಗಳು ಕತ್ತಿಯ ಬಲದಿಂದ ಪ್ರಸಾರವಾದವು. ಹಿಂದೂಗಳನ್ನು ಈ ಮೂಲಕ ತಮ್ಮ ಮಾತೃ-ಪಿತೃ ಧರ್ಮದಿಂದ ಹೊರತೆಗೆದರು.
೩. ಈ ವಿಸಂಗತಿಯನ್ನು ಹೋಗಲಾಡಿಸಲು ಈಗ ಒಂದೇ ಒಂದು ಮಾರ್ಗವಿದೆ ಮತ್ತು ಅದು ತಮ್ಮ ಮಾತೃ-ಪಿತೃ ಧರ್ಮವನ್ನು ತ್ಯಜಿಸಿದವರಿಗೆ; ಅಂದರೆ, ವಿವಿಧ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕಾರಣಗಳಿಂದಾಗಿ ಹಿಂದೂ ಧರ್ಮದಿಂದ ಹೊರಬಂದವರಿಗೆ ಅವರ ಮಾತೃ-ಪಿತೃ ಧರ್ಮವಾದ ಹಿಂದೂ ಧರ್ಮಕ್ಕೆ ಮರಳಿ ತರಬೇಕು.
೪. ಹಲವು ಶತಮಾನಗಳ ಕಾಲ ವಿದೇಶಿ ಆಕ್ರಮಣಕಾರರ ಆಳ್ವಿಕೆಗೆ ಒಳಗಾದ ಭಾರತವು ಈಗ ವಿಶ್ವಗುರುವಿನ ರೂಪದಲ್ಲಿ ಪುನಃ ಹೊರಹೊಮ್ಮುತ್ತಿದೆ.
ಮತಾಂತರದ ಹೇಳಿಕೆಯನ್ನು ಬೇಷರತ್ತಾಗಿ ಹಿಂಪಡೆದ ತೇಜಸ್ವಿ ಸೂರ್ಯ !
‘ಎರಡು ದಿನಗಳ ಹಿಂದೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾನು ‘ಭಾರತದಲ್ಲಿ ಹಿಂದೂಗಳ ಪುನರುಜ್ಜೀವನ’ ಕುರಿತು ಮಾರ್ಗದರ್ಶನ ಮಾಡಿದ್ದೆ. ನನ್ನ ಭಾಷಣದಲ್ಲಿನ ಕೆಲವು ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಹೀಗಾಗಿ ಬೇಷರತ್ತಾಗಿ ನನ್ನ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ’, ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿ ಹೇಳಿದ್ದಾರೆ.’
— Tejasvi Surya (@Tejasvi_Surya) December 25, 2021